ಕರ್ನಾಟಕ

karnataka

ಮೈಸೂರು ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು

By

Published : Sep 22, 2022, 1:39 PM IST

Updated : Sep 22, 2022, 2:49 PM IST

PFI activists besieged the CCB office

ಸಿಸಿಬಿ ಕಚೇರಿ ಮುಂದೆ ಜಮಾಯಿಸಿದ ಎಸ್​ಎಫ್​ಐ ಹಾಗೂ ಕಲೀಮುಲ್ಲಾ ಬೆಂಬಲಿಗರು ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು:ಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಮಹಮ್ಮದ್ ಕಲೀಮುಲ್ಲಾ ಅವರನ್ನು ಎನ್.ಐ.ಎ ತಂಡದಿಂದ ವಶಕ್ಕೆ ಪಡೆಯುತ್ತಿದ್ದಂತೆ, ಅಶೋಕ್ ರಸ್ತೆಯಲ್ಲಿರುವ ಸಿಸಿಬಿ ಕಚೇರಿ ಮುಂದೆ ಜಮಾಯಿಸಿದ ಎಸ್​ಎಫ್​ಐ ಹಾಗೂ ಕಲೀಮುಲ್ಲಾ ಬೆಂಬಲಿಗರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು

ಕಲೀಮುಲ್ಲಾ ಅವರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಕರೆದೊಯ್ದುವಾಗ, ಪೊಲೀಸ್ ಜೀಪನ್ನು ಪಿಎಫ್ಐ ಕಾರ್ಯಕರ್ತರು ಅಡ್ಡ ಹಾಕಿದರು. ಕಲೀಮುಲ್ಲಾ ಅವರನ್ನು ಪೊಲೀಸರು ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರೆದೊಯ್ದರು. ಬೆಂಗಳೂರಿನಲ್ಲಿರುವ ಎನ್.ಐ.ಎ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಕಾರ್ಯಕರ್ತರು ತೆರಳಿದರು.

ಇದನ್ನೂ ಓದಿ:ಎನ್​ಐಎ ಅಧಿಕಾರಿಗಳು ನಮ್ಮ ಕಚೇರಿ ಬಾಗಿಲಿನ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ: ಎಸ್​ಡಿಪಿಐ ಆರೋಪ

Last Updated :Sep 22, 2022, 2:49 PM IST

ABOUT THE AUTHOR

...view details