ಕರ್ನಾಟಕ

karnataka

ಆರೋಪ ಮಾಡಿ ಹಿಟ್ ಆ್ಯಂಡ್ ರನ್ ಕೆಲಸ ಮಾಡಬಾರದು: ಸಚಿವ ಕಾರಜೋಳ

By

Published : Aug 22, 2022, 4:10 PM IST

Minister Govinda Karajola

ಬರೀ ಆರೋಪ ಮಾಡಿದರೆ ಸಾಲದು, ಸೂಕ್ತ ದಾಖಲೆ ಇದ್ದರೆ ಕೊಡಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಮೈಸೂರು:ರಾಜ್ಯ ಸರ್ಕಾರದ ವಿರುದ್ಧ ಶೇ.40 ರಷ್ಟು ಕಮಿಷನ್ ಆರೋಪ ಮಾಡಿದ್ರೆ ಸಾಲದು, ಸೂಕ್ತ ದಾಖಲೆಗಳಿದ್ದರೆ ಕೊಡಲಿ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಬರೀ ಆರೋಪ ಮಾಡಿ ಹಿಟ್ ಆ್ಯಂಡ್ ರನ್ ಕೆಲಸ ಮಾಡಬಾರದು ಎಂದು ಸಚಿವ ಗೋವಿಂದ ಕಾರಜೋಳ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. ಅವರು ಇಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬರೀ ಆರೋಪ ಮಾಡಿದರೆ ಸಾಲದು. ಸೂಕ್ತ ದಾಖಲೆ ಇದ್ದರೆ ಕೊಡಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಚಿವ ಗೋವಿಂದ ಕಾರಜೋಳ ಮೈಸೂರಿನಲ್ಲಿ ಹೇಳಿಕೆ

ಮಳೆ ಹಾನಿಯಿಂದ 600 ಕೋಟಿ ರೂ. ನಷ್ಟ:ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ರಾಜ್ಯದಲ್ಲಿ ಸುಮಾರು 600 ಕೋಟಿಯಷ್ಟು ನಷ್ಟವಾಗಿದೆ. ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಕೊಡಗು, ಮಂಡ್ಯ ಜಿಲ್ಲೆಗೆ ಭೇಟಿ ನೀಡಿ ನಾನೇ ಪರಿಶೀಲನೆ ನಡೆಸಿದ್ದೇನೆ. ಅದೇ ರೀತಿ ಮೈಸೂರು ಜಿಲ್ಲೆಯಲ್ಲಿ ಅಧಿಕ ಮಳೆಯಿಂದ 10.40 ಕೋಟಿ ರೂ. ನಷ್ಟವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:40 ಪರ್ಸೆಂಟ್ ಕಮಿಷನ್ ಆರೋಪ: ಕೆಂಪಣ್ಣ ಅವರಿಂದ ದಾಖಲೆ ಕೇಳಿದ ಕೇಂದ್ರ ಗೃಹ ಇಲಾಖೆ

ABOUT THE AUTHOR

...view details