ಕರ್ನಾಟಕ

karnataka

ಕೊಪ್ಪಳ : ನವೋದಯ ಶಾಲೆಯ 12 ಮಕ್ಕಳು, ಓರ್ವ ಶಿಕ್ಷಕನಿಗೆ ತಗುಲಿದ ಕೊರೊನಾ

By

Published : Jan 14, 2022, 3:59 PM IST

ನವೋದಯ ಶಾಲೆ
ನವೋದಯ ಶಾಲೆ

ಇಂದು ಸಂಜೆ ಮತ್ತೊಂದು ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. ಶಾಲೆಯಲ್ಲಿನ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿರುವುದು ಆತಂಕ ಉಂಟು ಮಾಡಿದೆ..

ಕೊಪ್ಪಳ :ಕೊರೊನಾ ಸೋಂಕಿನ ಮೂರನೇ ಅಲೆ ಒಮಿಕ್ರಾನ್ ವ್ಯಾಪಕವಾಗಿ ಹರಡುತ್ತಿದ್ದು, ಎಲ್ಲೆಡೆ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಜವಾಹರ ನವೋದಯ ಶಾಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿರುವ ನವೋದಯ ವಸತಿ ಶಾಲೆಯ 12 ವಿದ್ಯಾರ್ಥಿಗಳು ಹಾಗೂ ಓರ್ವ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿತರನ್ನು ಈಗಾಗಲೇ ಐಸೋಲೇಟ್ ಮಾಡಲಾಗಿದೆ.

ಇದನ್ನೂ ಓದಿ: ಪೈಶಾಚಿಕ ಕೃತ್ಯ! ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ಹೆತ್ತ ತಾಯಿಯ ಮೇಲೆ ಪಾಪಿ ಮಗನಿಂದ ಅತ್ಯಾಚಾರ

ಶಿಕ್ಷಕ ಹಾಗೂ 12 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ವಸತಿ ಶಾಲೆಯ ಇನ್ನುಳಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೂ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇಂದು ಸಂಜೆ ಮತ್ತೊಂದು ಪರೀಕ್ಷಾ ವರದಿ ನಿರೀಕ್ಷಿಸಲಾಗಿದೆ. ಶಾಲೆಯಲ್ಲಿನ ಮಕ್ಕಳಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿರುವುದು ಆತಂಕ ಉಂಟು ಮಾಡಿದೆ.

ABOUT THE AUTHOR

...view details