ETV Bharat / state

ಬಂಟ್ವಾಳ: ಖೋಟಾ ನೋಟು ವಿನಿಮಯ ಜಾಲ ಪತ್ತೆ, ಇಬ್ಬರನ್ನು ಬಂಧಿಸಿ ವಿಚಾರಣೆ - Counterfeit currency

author img

By ETV Bharat Karnataka Team

Published : May 11, 2024, 9:40 PM IST

ಖೋಟಾ ನೋಟು ವಿನಿಮಯ ನಡೆಸುವ ಜಾಲವೊಂದನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಆರೋಪಿಗಳ ಬಂಧನ
ಖೋಟಾ ನೋಟು ವಿನಿಮಯ,ಇಬ್ಬರು ಆರೋಪಿಗಳ ಬಂಧನ (Etv Bharat)

ಬಂಟ್ವಾಳ(ದಕ್ಷಿಣ ಕನ್ನಡ): ಖೋಟಾ ನೋಟು ವಿನಿಮಯ ನಡೆಸುವ ಜಾಲವೊಂದನ್ನು ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿದ್ದು, ಈ ಪ್ರಕರಣದಡಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊಹಮ್ಮದ್ ಸಿ.ಎ (61) ಮಹಿಳೆ ಕಮರುನ್ನೀಸಾ (41) ಎಂಬುವರು ಬಂಧಿತ ಆರೋಪಿಗಳು. ಬಂಧಿತರಿಂದ 500 ರೂ ಮುಖಬೆಲೆಯ 46 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಶರೀಫ್​​​ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ಮೇ 10ರಂದು ರಾತ್ರಿ ಬಂಟ್ವಾಳ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆ ಬಳಿ ನಿಂತಿದ್ದ ಕೇರಳ ರಿಜಿಸ್ಟ್ರೇಶನ್ ನಂಬರಿನ ಕಾರನ್ನು ಅನುಮಾನಾಸ್ಪದವಾಗಿ ಬಂಟ್ವಾಳ ನಗರ ಠಾಣೆ ಎಸ್​ಐ ರಾಮಕೃಷ್ಣ ಅವರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕಾರಿನಲ್ಲಿದ್ದ ಚಾಲಕ ಮೊಹಮ್ಮದ್ ಸಿ.ಎ ಹಾಗೂ ಇನ್ನೊಬ್ಬ ಶರೀಫ್, ಮಹಿಳೆ ಕಮರುನ್ನೀಸಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ, ಶರೀಫ್ ಪೊಲೀಸ್​ರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ವಿಚಾರಣೆ ವೇಳೆ ಬಂಧಿತ ಇಬ್ಬರು ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದು, ಆರೋಪಿಗಳಿಂದ 500 ರೂಪಾಯಿ ಮುಖಬೆಲೆಯ 46 ಖೋಟಾ ನೋಟು 3 ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ:ಮೈಸೂರು: ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್​ ಅರಳಿ ಮರ, 4 ಮನೆಗಳು ಜಖಂ - tree fell down on the homes

ETV Bharat Logo

Copyright © 2024 Ushodaya Enterprises Pvt. Ltd., All Rights Reserved.