ಕರ್ನಾಟಕ

karnataka

ಕೊಡಗುದಲ್ಲಿ ಕಾಣೆಯಾಗಿದ್ದ ಅರಣ್ಯ ರಕ್ಷಕ ನದಿಯಲ್ಲಿ ಶವವಾಗಿ ಪತ್ತೆ.. ಸಾವಿನ ಸುತ್ತ ಅನುಮಾನದ ಹುತ್ತ

By

Published : Sep 27, 2022, 8:54 AM IST

Updated : Sep 27, 2022, 12:30 PM IST

Kodagu

ಅರಣ್ಯ ಬೀಟ್​​ಗೆ ಹೋಗಿದ್ದ ಸಂದರ್ಭದಲ್ಲಿ ಕಾಣೆಯಾಗಿದ್ದ ಅರಣ್ಯ ರಕ್ಷಕ ತರುಣ್ ಬಾಡಗ ಗ್ರಾಮದ ಕೊಕ್ಕದಲ್ಲಿರುವ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಡಿಕೇರಿ(ಕೊಡಗು): ಕಳೆದ ನಾಲ್ಕು ದಿನದ ಹಿಂದೆ ಕಾಣೆಯಾಗಿದ್ದ ಅರಣ್ಯ ರಕ್ಷಕ ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ. ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅರಣ್ಯ ರಕ್ಷಕ ತರುಣ್ (23) ಮೃತರು.

ಕೊಡಗುದಲ್ಲಿ ಕಾಣೆಯಾಗಿದ್ದ ಅರಣ್ಯ ರಕ್ಷಕ ನದಿಯಲ್ಲಿ ಶವವಾಗಿ ಪತ್ತೆ

ಕೆಲವು ವರ್ಷಗಳಿಂದ ಆರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತರುಣ್ ಅರಣ್ಯ ಬೀಟ್​​ಗೆ ತೆರಳಿದ್ದಾರೆ. ಆದರೆ ಸಂಜೆಯಾದರೂ ಮನೆಗೆ ಬಾರದ ಕಾರಣ ಮನೆಯವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಮತ್ತು ಮನೆಯವರು ಸೇರಿ ಕಾಡಿನಲ್ಲಿ ಹುಡುಕಾಟ ನಡೆಸಿದರೂ ತರುಣ್ ಪತ್ತೆಯಾಗಿರಲಿಲ್ಲ. ಮೊಬೈಲ್​​ಗೆ ಕರೆ ಮಾಡಿದರೆ ಸ್ವಿಚ್​ ಆಫ್ ಆಗಿತ್ತು.

ಆದರೆ ನಾಪತ್ತೆಯಾಗಿದ್ದ ತರುಣ್ ನಿನ್ನೆ ಬಾಡಗ ಗ್ರಾಮದ ಕೊಕ್ಕದಲ್ಲಿರುವ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಎನ್​​ಡಿಆರ್​​ಎಫ್ ನುರಿತ ಮುಳುಗು ತಜ್ಞರ ತಂಡ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ನದಿಯಿಂದ ಹೊರ ತೆಗೆದಿದ್ದಾರೆ.

ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರಣ್ಯ ರಕ್ಷಕನ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ವಿರಾಜಪೇಟೆ: ಕಾಡಾನೆ ದಾಳಿಗೆ ಅರಣ್ಯ ರಕ್ಷಕ ಬಲಿ

Last Updated :Sep 27, 2022, 12:30 PM IST

ABOUT THE AUTHOR

...view details