ಕರ್ನಾಟಕ

karnataka

ಬಿಎಸ್​ವೈ ಮುಕ್ತ ಬಿಜೆಪಿ ಅಲ್ಲ, ಬಿಜೆಪಿ ಮುಕ್ತ ಕರ್ನಾಟಕ ಆಗಲಿದೆ: ಪ್ರಿಯಾಂಕ್ ಖರ್ಗೆ

By

Published : Jan 14, 2021, 6:35 PM IST

ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ನೀಡಿರುವ ಸಿಡಿ ಬಗೆಗಿನ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದ್ದು, ಕೆಪಿಸಿಸಿ ವಕ್ತಾರ ಪ್ರಿಯಾಂಕ್​ ಖರ್ಗೆ ಈ ಬಗ್ಗೆ ಟ್ವೀಟ್​ ಮಾಡಿ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವದಲ್ಲದೆ ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿ ಇದು ಎಂದಿದ್ದಾರೆ.

Priyank Kharge Tweeted
ಪ್ರಿಯಾಂಕ್ ಖರ್ಗೆ ಟ್ವೀಟ್​​

ಕಲಬುರಗಿ: ರಾಜ್ಯ ರಾಜಕೀಯದಲ್ಲಿ ನಡೆದಿರುವ ಸಿಡಿ ರಾಜಕೀಯ ಬಿಎಸ್‌ವೈ ಮುಕ್ತ ಬಿಜೆಪಿ ಮಾಡುವದಲ್ಲದೆ, ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿ ಆಗಲಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಮಂತ್ರಿ ಮಂಡಲ ವಿಸ್ತರಣೆ ಬೆನ್ನೆಲ್ಲೆ ಬುಗಿಲೆದ್ದಿರುವ ಸಿಡಿ ವಿವಾದ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆ, ಸಿಡಿ ರಾಜಕೀಯ ಕೇವಲ ಬಿಎಸ್​​ವೈ ಮುಕ್ತ ಬಿಜೆಪಿಯಾಗುವುದಷ್ಟೇ ಅಲ್ಲದೆ ಬಿಜೆಪಿ ಮುಕ್ತ ಕರ್ನಾಟಕವಾಗುವುದಕ್ಕೆ ಮುನ್ನುಡಿಯಾಗಲಿದೆ ಎಂದಿದ್ದಾರೆ.

ಇನ್ನು ಮಂತ್ರಿಮಂಡಲದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ಸಿಗದಿರುವುದಕ್ಕೆ ಕುಟುಕಿರುವ ಅವರು, ಈ ಮುಂಚೆಯಂತೆ ಮಂತ್ರಿಮಂಡಲದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ದೊರಕದಿರುವುದು ಹಾಗೂ ಇಡೀ ಕಲ್ಯಾಣ ಕರ್ನಾಟಕದಿಂದ ಅಶಕ್ತ ಪ್ರಾತಿನಿಧ್ಯ ತೋರುತ್ತಿರುವದು ನೋಡಿದರೆ ಬಿಜೆಪಿ ಈ ಭಾಗವನ್ನು ಪ್ರಮುಖವೆಂದು ಪರಿಗಣಿಸಿಲ್ಲ ಎನ್ನುವುದನ್ನು ನಿರೂಪಿಸುತ್ತದೆ ಎಂದು ಟೀಕಿಸಿದ್ದಾರೆ.

ABOUT THE AUTHOR

...view details