ಕರ್ನಾಟಕ

karnataka

ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಹೋಗಿ ಸುಟ್ಟು ಕರಕಲಾದ ರೈತ

By

Published : Apr 1, 2022, 8:28 AM IST

ರೈತನೊಬ್ಬ ತನ್ನ ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಹೋಗಿ ಸುಟ್ಟು ಕರಕಲಾಗಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

farmer died in fire incident at Haveri, Haveri news, Haveri farmer news, Haveri farmer died news, ಹಾವೇರಿಯಲ್ಲಿ ಬೆಂಕಿ ಅವಘಡದಲ್ಲಿ ರೈತ ಸಾವು, ಹಾವೇರಿ ಸುದ್ದಿ, ಹಾವೇರಿ ರೈತ ಸುದ್ದಿ, ಹಾವೇರಿ ರೈತ ಸಾವು ಸುದ್ದಿ,
ತನ್ನ ಕಬ್ಬಿನ ಗದ್ದೆಗೆ ಬಿದ್ದ ಬೆಂಕಿ ನಂದಿಸಲು ಹೋಗಿ ಸುಟ್ಟು ಕರಕಲವಾದ ರೈತ

ಹಾವೇರಿ: ಆಕಸ್ಮಿಕವಾಗಿ ಕಬ್ಬಿನ ಹೊಲಕ್ಕೆ ಬಿದ್ದಿದ್ದ ಬೆಂಕಿ ನಂದಿಸಲು ಹೋಗಿದ್ದ ರೈತನೊಬ್ಬ ತಾನೂ ಸಾವನ್ನಪ್ಪಿರುವ ಘಟನೆ ತಾಲೂಕಿನ ಮೇವುಂಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಬಾಬುಸಾಬ್​ ರಾಜೇಸಾಬ್​ ನದಾಫ್(50)​ ಎಂದು ಗುರುತಿಸಲಾಗಿದೆ.


ಇದನ್ನೂ ಓದಿ:ಕಳೆದು ಹೋದ ಬ್ಯಾಗ್​ಗೋಸ್ಕರ ಇಂಡಿಗೋ ವೆಬ್​​​ಸೈಟ್​​ ಹ್ಯಾಕ್ ಮಾಡಿದೆ ಎಂದ ಟೆಕ್ಕಿ!

ಬಾಬುಸಾಬ್ ರಾಜೇಸಾಬ್ ನದಾಫ್​ ಒಂದೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದರು. ನಿನ್ನೆ ಸಂಜೆ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ನಂದಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಟ್ಟೆಗೆ ಬೆಂಕಿ ತಗುಲಿದೆ. ನೋಡುನೋಡುತ್ತಲೇ ಬೆಂಕಿ ಬಾಬುಸಾಬ್​ರನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮ, ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗುತ್ತಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ:ಅಮಿತ್‌ ಶಾ ರಾಜ್ಯ ಪ್ರವಾಸ: ಇಂದು ಮಹತ್ವದ ಕೋರ್‌ ಕಮಿಟಿ ಸಭೆ

ABOUT THE AUTHOR

...view details