ETV Bharat / bharat

ಕಳೆದು ಹೋದ ಬ್ಯಾಗ್​ಗೋಸ್ಕರ ಇಂಡಿಗೋ ವೆಬ್​​​ಸೈಟ್​​ ಹ್ಯಾಕ್ ಮಾಡಿದೆ ಎಂದ ಟೆಕ್ಕಿ!

author img

By

Published : Apr 1, 2022, 7:04 AM IST

ಇಂಡಿಗೋ ವಿಮಾನದಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಕಳೆದು ಹೋಗಿರುವ ಬ್ಯಾಗ್​ ಮರಳಿ ಪಡೆಯಲು ವಿಮಾನಯಾನ ಸಂಸ್ಥೆಯ ವೆಬ್​​ಸೈಟ್​ ಹ್ಯಾಕ್ ಮಾಡಿರುವುದಾಗಿ ಸಾಫ್ಟ್​ವೇರ್ ಎಂಜಿನಿಯರ್​ ಓರ್ವ ಹೇಳಿಕೊಂಡಿದ್ದಾನೆ.

Techie claims he hacked IndiGo site
Techie claims he hacked IndiGo site

ಹೈದರಾಬಾದ್​: ಕಳೆದು ಹೋದ ಬ್ಯಾಗ್ ಹುಡುಕಲು ವಿಮಾನಯಾನ ಸಂಸ್ಥೆ ಇಂಡಿಗೋ ವೆಬ್​ಸೈಟ್​ ಹ್ಯಾಕ್ ಮಾಡಿರುವುದಾಗಿ ಟೆಕ್ಕಿಯೊಬ್ಬ ತಿಳಿಸಿದ್ದಾರೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ನಂದನ್ ಕುಮಾರ್​ ಎಂಬಾತ ಆಕಸ್ಮಿಕವಾಗಿ ಇನ್ನೊಬ್ಬರ ಬ್ಯಾಗ್​ ತೆಗೆದುಕೊಂಡು ಬಂದಿದ್ದು, ತನ್ನ ಬ್ಯಾಗ್​ ವಾಪಸ್ ಪಡೆದುಕೊಳ್ಳುವ ಉದ್ದೇಶದಿಂದ ವೆಬ್​​ಸೈಟ್​ ಹ್ಯಾಕ್​ ಮಾಡಿರುವುದಾಗಿ ಆತ ಹೇಳಿದ್ದಾನೆ. ಆದರೆ, ಈ ವಿಚಾರವನ್ನು ಇಂಡಿಗೋ ಏರ್​​ಲೈನ್ಸ್​​​ ತಳ್ಳಿ ಹಾಕಿದೆ.

  • Hey @IndiGo6E ,
    Want to hear a story? And at the end of it I will tell you hole (technical vulnerability )in your system? #dev #bug #bugbounty 😝😝 1/n

    — Nandan kumar (@_sirius93_) March 28, 2022 " class="align-text-top noRightClick twitterSection" data=" ">

ಮಾರ್ಚ್​​ 27ರಂದು ಪಾಟ್ನಾದಿಂದ ಬೆಂಗಳೂರಿಗೆ ಇಂಡಿಗೋ​ ವಿಮಾನದಲ್ಲಿ ನಂದನ್ ಪ್ರಯಾಣ ಮಾಡಿದ್ದರು. ಈ ವೇಳೆ ಅವರ ಲಗೇಜ್​ ಬದಲಾಗಿದೆ. ಮನೆಗೆ ಬಂದ ನಂತರ ಈ ವಿಷಯ ಗಮನಕ್ಕೆ ಬಂದಿದೆ. ತಕ್ಷಣವೇ ವಿಮಾನಯಾನ ಸಂಸ್ಥೆಯ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ವೇಳೆ ಸರಿಯಾದ ಪ್ರತಿಕ್ರಿಯೆ ದೊರೆತಿಲ್ಲ. ಪ್ರೋಟೋಕಾಲ್ ಗಮನದಲ್ಲಿಟ್ಟುಕೊಂಡು ಸಹ ಪ್ರಯಾಣಿಕರ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

  • And there in one of the network responses was the phone number and email I’d of my co-passenger.

    Ah this was my low-key hacker moment 😇😇 and the ray of hope.

    I made note of the details and decided to call the person and try to get the bags swapped. #dev #dataleak #bug pic.twitter.com/9l4pmNDk6V

    — Nandan kumar (@_sirius93_) March 28, 2022 " class="align-text-top noRightClick twitterSection" data=" ">

ಇದರ ಬೆನ್ನಲ್ಲೇ ವೆಬ್​ಸೈಟ್ ಹ್ಯಾಕ್ ಮಾಡಿ, ತನ್ನ ಬ್ಯಾಗ್ ತೆಗೆದುಕೊಂಡು ಹೋಗಿದ್ದ ಸಹ ಪ್ರಯಾಣಿಕರ ಫೋನ್ ಸಂಖ್ಯೆ ಹಾಗೂ ಇಮೇಲ್​ ಪಡೆದುಕೊಂಡಿದ್ದಾನೆ. ಇದೇ ವೇಳೆ, ಆತನಿಗೆ ಫೋನ್ ಮಾಡಿ, ಬ್ಯಾಗ್ ವಾಪಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಸಾಫ್ಟ್​ವೇರ್​ ಎಂಜಿನಿಯರ್​ ಆಗಿರುವ ನಂದನ್​​ ಹ್ಯಾಕಿಂಗ್ ವಿಧಾನದ ಮೂಲಕ ತನ್ನ ಬ್ಯಾಗ್ ವಾಪಸ್ ಪಡೆದುಕೊಂಡಿದ್ದಾನೆ. ಈ ಕುರಿತು ಟ್ವೀಟ್ ಮಾಡಿರುವ ನಂದನ್​, ಇಂಡಿಗೋ ಏರ್‌ಲೈನ್‌ನ ವೆಬ್‌ಸೈಟ್‌ನ ಭದ್ರತೆಯಲ್ಲಿನ ನ್ಯೂನತೆಗಳಿಂದಾಗಿ ತಮ್ಮ ಲಗೇಜ್ ಪಡೆದುಕೊಂಡಿರುವ ಸ್ಟೋರಿ ಟ್ವೀಟರ್​ನಲ್ಲಿ ಹಾಕಿಕೊಂಡಿದ್ದಾನೆ.

ಇದನ್ನೂ ಓದಿ: ಬದೌನಿ ಸ್ಫೋಟಕ ಬ್ಯಾಟಿಂಗ್​: ಚೆನ್ನೈ ವಿರುದ್ಧ ಲಖನೌಗೆ ರೋಚಕ ಗೆಲುವು

ಈತನ ಟ್ವೀಟ್ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಇಂಡಿಗೋ, ಮಾಹಿತಿ ಗೌಪ್ಯತೆಯ ಉದ್ದೇಶದಿಂದ ಸಹ ಪ್ರಯಾಣಿಕರ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವೆಬ್​​ಸೈಟ್​​​ ಬಲಿಷ್ಠವಾಗಿದೆ. ಯಾವುದೇ ಹಂತದಲ್ಲೂ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.