ಕರ್ನಾಟಕ

karnataka

ಬಿಎಸ್‍ವೈ, ಅಮಿತ್ ಶಾ, ಬಿಜೆಪಿಯ ಎಂಎಲ್​ಎಗಳು ಏಕೆ ಜೈಲಿಗೆ ಹೋಗಿದ್ರು?: ಡಿಕೆಶಿ

By

Published : May 9, 2022, 6:41 AM IST

ಬಿಜೆಪಿಯ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ, ಬಿಜೆಪಿಯ ಎಂಎಲ್‍ಎಗಳು ಮಾಜಿ ಮಂತ್ರಿಗಳೆಲ್ಲಾ ಏತಕ್ಕೆ ಜೈಲಿಗೆ ಹೋಗಿದ್ದರು?. ಅವರು ಯಾವ ವಚನ ಓದಲು ಹೋಗಿದ್ದರು?- ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್

ಹಾಸನ: ಬಿ.ಎಸ್.ಯಡಿಯೂರಪ್ಪ, ಅಮಿತ್ ಶಾ, ಬಿಜೆಪಿ ಪಕ್ಷದ ಎಂಎಲ್ಎಗಳು ಹಾಗೂ ಮಾಜಿ ಮಂತ್ರಿಗಳೆಲ್ಲಾ ಏತಕ್ಕೆ ಜೈಲಿಗೆ ಹೋಗಿದ್ದರು. ಅವರು ಯಾವ ವಚನ ಓದಲು ಹೋಗಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ತಿಹಾರ್ ಜೈಲಿಗೆ ಪುಸ್ತಕ ಓದಲು ಹೋಗಿದ್ದರಾ? ಎಂಬ ಕಟೀಲ್ ಹೇಳಿಕೆಗೆ ಅರಕಲಗೂಡು ಪಟ್ಟಣದಲ್ಲಿ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ, ಅಮಿತ್ ಶಾ, ಬಿಜೆಪಿ ಪಾರ್ಟಿಯ ಎಂಎಲ್ಎಗಳು ಹಾಗೂ ಮಾಜಿ ಮಂತ್ರಿಗಳೆಲ್ಲಾ ಜೈಲಿಗೆ ಹೋಗಿದ್ರಲ್ಲ, ಅವರೇನು ಬಸವಣ್ಣನ ವಚನ ಓದಲು ಹೋಗಿದ್ರಾ ?, ಜ್ಞಾನ ಕಲಿಯಲು ಹೋಗಿದ್ರಾ?. ಅವರ ರೀತಿ ನಾನು ಯಾವುದೇ ಆರೋಪಗಳನ್ನು ಹೊತ್ತುಕೊಂಡು ಹೋಗಿಲ್ಲ. ರಾಜಕೀಯ ಷಡ್ಯಂತ್ರದ ಮೇಲೆ ನಮ್ಮನ್ನು ಕಳುಹಿಸಿಕೊಟ್ಟಿದ್ದರು ಎಂದು ಸಮರ್ಥನೆ ಮಾಡಿಕೊಂಡರು.

ಅರಕಲಗೂಡು ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್

ಪಿಎಸ್ಐ ಹಗರಣದ ಕಿಂಗ್​ಪಿನ್ ಇದ್ದಾರೆ ಎಂಬ ಮಾಜಿ ಸಿಎಂ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, ಕುಮಾರಸ್ವಾಮಿ ಹೇಳಿರುವುದರಲ್ಲಿ ಸತ್ಯ ಕಾಣುತ್ತಿದೆ. ಪಿಎಸ್ಐ ಹಗರಣದಲ್ಲಿ ಕಿಂಗ್​ಪಿನ್​ ಇರುವುದು ಸತ್ಯನೇ. ಬರಿ ಆಫೀಸರ್, ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಬಂಧಿಸುತ್ತಿದ್ದಾರೆ. ಅಂಗಡಿ ಓಪನ್ ಮಾಡಿದವರಲ್ಲ, ಆ ಅಂಗಡಿಯಲ್ಲಿ ಏನಾದರೂ ಸಾಮಾನು ಖರೀದಿ ಮಾಡಲು ಹೋಗಿರುವ ಹುಡುಗರುಗಳನ್ನು ಬಂಧಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ನನಗೆ ಬಂದಿರುವ ಮಾಹಿತಿ ಪ್ರಕಾರ, ಕೆಲವು ಮಂತ್ರಿಗಳ ಕೈವಾಡವಿದೆ. ಮಂತ್ರಿಗಳ ರಕ್ಷಣೆ ಇಲ್ಲದೇ, ಮಂತ್ರಿಗಳ ಮಾರ್ಗದರ್ಶನ ಇಲ್ಲದೇ ಈ ಹಗರಣ ಹೊರಬರಲು ಸಾಧ್ಯವಿಲ್ಲ. ಹೋಮ್​ ಮಿನಿಸ್ಟರ್ ಕೂಡ ಕೆಲವರನ್ನು ಬಿಡಿಸಿದ್ದಾರೆ, ಅಶ್ವತ್ಥ್​ ನಾರಾಯಣ್ ಫೋನ್ ಮಾಡಿ ಹೇಳಿ ಕೆಲವರನ್ನ ಬಿಡಿಸಿದ್ದಾರೆ. ನಾವು ಅಶ್ವತ್ಥ್​ ನಾರಾಯಣ್ ನೆಂಟರುಗಳು ಅಂತ ಕೆಲವರು ಹೇಳಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರು ಇದ್ದಾರೆ. ಆ ಹೆಸರುಗಳೆಲ್ಲಾ ಈಚೆ ಬರುತ್ತವೆ. ಆರೋಪಿಗಳನ್ನು ಬಿಡಿಸಿದ ತಕ್ಷಣ ಕೆಲವು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ಅವರ ರಿಪೋರ್ಟ್ ಕೊಟ್ಟಿದ್ದಕ್ಕೆ ಇವೆಲ್ಲ ಹೆಚ್ಚು ಕಮ್ಮಿ ಆಗಿದೆ ಅಂತ ನನಗೆ ಮಾಹಿತಿಯಿದೆ. ತನಿಖೆ ಬಗ್ಗೆ ಬೊಮ್ಮಾಯಿ ಅವರು ಸತ್ಯಾಂಶ ಹೇಳಬೇಕು, ಮುಚ್ಚಿಡಬಾರದು ಎಂದರು.

ಪಿಎಸ್ಐ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಸಿಒಡಿ ಬಯಲು ಮಾಡಲು ಬಿಡಬೇಕು. ಸಿಒಡಿ ಮುಕ್ತವಾಗಿ ತನಿಖೆ ಮಾಡಬೇಕು. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡಬಾರದು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಇದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಪಿಎಸ್ಐ ಹಗರಣದಲ್ಲಿ ಸಚಿವ ಅಶ್ವತ್ಥ್​ ನಾರಾಯಣ್ ಸಹೋದರ ಭಾಗಿಯಾಗಿರುವ ವಿಚಾರವಾಗಿ ಮಾತನಾಡಿದ ಅವರು, ಅಶ್ವತ್ಥ್​ ನಾರಾಯಣ್ ಅವರನ್ನು ಸರ್ಕಾರದ ಎಲ್ಲಾ ಸಚಿವರು ವಹಿಸಿಕೊಳ್ಳಬೇಕು, ವಹಿಸಿಕೊಳ್ಳದಿದ್ದರೆ ಆಗುತ್ತಾ?, ಅವರ ಮೇಲೆಯೇ ಎಲ್ಲಾ ಆರೋಪಗಳು ಬರುತ್ತವೆ ಅಂತ ಮುಚ್ಚಿ ಕೊಳ್ಳುತ್ತಿದ್ದಾರೆ. ಯಾರಾದರೂ ಲಂಚ ಪಡೆದವನು ನಾನು ಪಡೆದಿದ್ದೇನೆ ಅಂತ ಹೇಳುತ್ತಾನಾ?, ಲಂಚ ಕೊಟ್ಟವನು ಲಂಚ ಕೊಟ್ಟಿದ್ದೀನಿ ಅಂತ ಹೇಳುತ್ತಾನಾ?, ಜೈಲಿಗೆ ಹಾಕಿರುವ ಹುಡುಗರನ್ನು ಕೇಳಿ ನಿಮಗೆ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಅಜಾನ್-ಭಜನೆ ಸಂಘರ್ಷ: ಕಾನೂನು ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ABOUT THE AUTHOR

...view details