ಕರ್ನಾಟಕ

karnataka

​ರಾಜಕೀಯ ಪಕ್ಷದ​​ ನಾಯಕನ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ..?

By

Published : Aug 26, 2021, 10:48 PM IST

youth-committed-suicide-in-gadag-taluk-hirekoppa

ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಡೆತ್​​ ಆಡಿಯೋ ಹರಿಬಿಟ್ಟು ನೇಣಿಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್​​​​ ಕೌತಾಳ್, ವೀರಯ್ಯನಿಗೆ ನಿತ್ಯವೂ ಬೆದರಿಕೆ, ಕಿರುಕುಳ ನೀಡಿದ್ದಾಗಿ ಆರೋಪಿಸಿ ಈ ಕುರಿತು ಆಡಿಯೋ ಮಾಡಿ ಫೇಸ್​ಬುಕ್​ನಲ್ಲಿ ಹರಿಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗದಗ: ಪ್ರಭಾವಿ ನಾಯಕನೊಬ್ಬನ ಕಿರುಕುಳಕ್ಕೆ ಬೇಸತ್ತ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಡೆತ್​​ ಆಡಿಯೋ ಹರಿಬಿಟ್ಟು ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ನಡೆದಿದೆ.

ಹಿರೇಕೊಪ್ಪ ಗ್ರಾಮದ ವೀರಯ್ಯ ಹಿರೇಮಠ (32) ಮೃತ ದುರ್ದೈವಿ. ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್​​​​ ಕೌತಾಳ್ ವೀರಯ್ಯನಿಗೆ ನಿತ್ಯವೂ ಬೆದರಿಕೆ, ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದಾನೆ. ಅಷ್ಟೇ ಅಲ್ಲ ಈ ಕುರಿತು ಆಡಿಯೋ ಮಾಡಿ ಫೇಸ್​ಬುಕ್​ನಲ್ಲಿ ಹರಿಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಾಜಕೀಯ ನಾಯಕರೊಬ್ಬರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ

ಪೀರಸಾಬ್ ಕೌತಾಳ ನನ್ನ ಕುಟುಂಬದ 20 ಎಕರೆ ಜಮೀನನ್ನು ಅತೀ ಕಡಿಮೆ ಬೆಲೆಗೆ ಮಾರಿದ್ದಾನೆ. ಈಗ ಇನ್ನೂ 3 ಎಕರೆ ಜಮೀನು ಲಪಟಾಯಿಸಲು ಸಂಚು ರೂಪಿಸಿದ್ದಾನಂತೆ. ನಿತ್ಯವೂ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ನಿನ್ನೆ ರಾತ್ರಿ ಆತ್ಮಹತ್ಯೆಗೂ ಮುನ್ನ ಅಕ್ಕನ ಜೊತೆ ರಾತ್ರಿ ಮಾತನಾಡಿ ತನಗಾದ ಕಿರುಕುಳ, ಬೆದರಿಕೆ ಬಗ್ಗೆ ಹೇಳಿಕೊಂಡಿದ್ದಾನೆ. ಮಾನಸಿಕವಾಗಿ ನೊಂದಿದ್ದ ವೀರಯ್ಯ ರಾತ್ರೋರಾತ್ರಿ ಮನೆಬಿಟ್ಟು ಹೋಗಿ ಗ್ರಾಮದ ಹೊರವಲಯದಲ್ಲಿ ನೇಣಿಗೆ ಶರಣಾಗಿದ್ದಾನೆ.

ಫೇಸ್​​​​ಬುಕ್​​ಗೆ ವಿಡಿಯೋ ಅಪ್ಲೋಡ್​ ಮಾಡಿ ಆತ್ಮಹತ್ಯೆ

ಫಕೀರಯ್ಯ ಹಿರೇಮಠ ಕುಟುಂಬದಲ್ಲಿ ಜಮೀನು ವಿಷಯದಲ್ಲಿ ವ್ಯಾಜ್ಯ ಇತ್ತಂತೆ. ಹಾಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ್ ಕೋಟ್ಯಂತರ ರೂ. ಮೌಲ್ಯದ ಜಮೀನು ಕೇವಲ 10 ಲಕ್ಷಕ್ಕೆ ಪಡೆದಿದ್ದಾನಂತೆ. ಈಗ ಫಕೀರಯ್ಯ ಹಿರೇಮಠ ಕುಟುಂಬಕ್ಕೆ ಉಳಿದಿದ್ದು, ಮೂರು ಎಕರೆ ಜಮೀನು ಮಾತ್ರ. ಆ ಜಮೀನು ಕೂಡ ಲಪಟಾಯಿಸಲು ಬೆದರಿಕೆ, ಕಿರುಕುಳ ನೀಡುತ್ತಿದ್ದಾನಂತೆ. ಹಾಗಾಗಿ ಪೀರಸಾಬ್ ಕೌತಾಳ ತನಗಾದ ಅನ್ಯಾಯದ ಬಗ್ಗೆ ಸುದೀರ್ಘ ಆಡಿಯೋ ರಿಕಾರ್ಡ್ ಮಾಡಿ ಫೇಸ್​​​ಬುಕ್​​ಗೆ ಅಪ್ಲೋಡ್​ ಮಾಡಿದ್ದಾನೆ.

‘ನಾನು ಸತ್ತ ಮೇಲೆ ಈ ನಾಯಕನಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾ ಒತ್ತಾಯಿಸಿದ್ದಾನೆ. ನನಗಷ್ಟೇ ಅಲ್ಲ, ಸಾಕಷ್ಟು ಜನರಿಗೆ ಮೋಸ ಮಾಡಿದ್ದಾನೆ ಅಂತಾ ಹೇಳಿದ್ದಾನೆ. ಆತ ಪ್ರಭಾವಿ ಆಗಿರುವುದರಿಂದ ಪೊಲೀಸರು, ಅಧಿಕಾರಿಗಳ ಮೇಲೆ ತನ್ನ ಪ್ರಭಾವ ಬೀರಿ ಕೇಸ್ ಮುಚ್ಚಿ ಹಾಕ್ತಾನೆ. ಯಾವುದೇ ಕಾರಣಕ್ಕೆ ನನ್ನ ಜಮೀನು ಆತನ ಹೆಸರಿಗೆ ಆಗಬಾರದು ಅಂತಾ ಆಡಿಯೋದಲ್ಲಿ ಹೇಳಿದ್ದಾನೆ.

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಹೆತ್ತವರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಇರುವ ಸಾಕ್ಷಿಗಳನ್ನು ಪರಿಗಣಿಸಿ ಆರೋಪಿಗೆ ತಕ್ಕ ಶಿಕ್ಷೆಯಾಗಬೇಕೆಂಬುದು ಹೆತ್ತವರ ಆಗ್ರಹ.

ABOUT THE AUTHOR

...view details