ಕರ್ನಾಟಕ

karnataka

ಕಾಂಗ್ರೆಸ್ ನಾಯಕರಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ : ಸಚಿವ ಶ್ರೀರಾಮಲು

By

Published : May 3, 2023, 10:58 PM IST

ಕಾಂಗ್ರೆಸ್​ ನಾಯಕರ ಹೇಳಿಕೆಗಳ ವಿರುದ್ಧ ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

Minister B. Sriramulu
ಸಚಿವ ಬಿ. ಶ್ರೀರಾಮುಲು

ಕೈ ನಾಯಕರ ಹೇಳಿಕೆಗಳಿಗೆ ಶ್ರೀರಾಮುಲು ತಿರುಗೇಟು.

ಗದಗ : ಕಾಂಗ್ರೆಸ್ ನಾಯಕರನ್ನು ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ. ಬೌದ್ಧಿಕವಾಗಿ ನೈತಿಕವಾಗಿ ಅವರು ದಿವಾಳಿಗೆ ಎದ್ದು ಹೋಗಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು. ಇಂದು ಗದಗದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನ​ ಮಾಜಿ ಮುಖ್ಯಮಂತ್ರಿಯೊಬ್ಬರು ಲಿಂಗಾಯತ ಸಮುದಾಯದವರು ಯಾರು ಮುಖ್ಯಮಂತ್ರಿ ಆಗುತ್ತಾರೊ ಅವರೆಲ್ಲ ಭ್ರಷ್ಟರು ಎಂದು ಉಲ್ಲೇಖ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತೊಬ್ಬರು ವಿಷಸರ್ಪಕ್ಕೆ ಹೋಲಿಸಿದ್ದಾರೆ. ಇನ್ನೊಬ್ಬರು ನಾಲಾಯಕ್​ ಪುತ್ರನಿಗೆ ಹೋಲಿಸಿದ್ದಾರೆ. ಇವೆಲ್ಲಾ ನೋಡಿದರೇ ಕಾಂಗ್ರೆಸ್​ನವರು ಬೌದ್ಧಿಕವಾಗಿ, ನೈತಿಕವಾಗಿ ದಿವಾಳಿ ಎದ್ದುಹೋಗಿದ್ದಾರೆ ಅಂತಾ ಅನ್ನಿಸುತ್ತದೆ ಎಂದು ಕೈ ನಾಯಕರ ಹೇಳಿಕೆಗಳಿಗೆ ಶ್ರೀರಾಮುಲು ತಿರುಗೇಟು ನೀಡಿದರು.

ಅವರ ತಲೆಯಲ್ಲಿ ಹುಳ ಹೋಗಿದೆ. ಎಲ್ಲೋ ಒಂದು ಕಡೆ ಅಧಿಕಾರಕ್ಕೆ ಬರುತ್ತೇವೆ ಅನ್ನೋ ಅಹಂಕಾರದಿಂದ, ಮದದಿಂದ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಯಾವಾಗಲೂ ಕೂಡಾ ಅವರು ಪೂರ್ಣ ಬಹುಮತದಿಂದ ಯಾವತ್ತೂ ಬಂದಿಲ್ಲ. ಅವತ್ತಿನ ಸಂದರ್ಭದಲ್ಲಿ ಲಾಟರಿ ಮೂಲಕ ಆರಿಸಿ ಬಂದಿದ್ದರು. ಈ ಸಲ ಲಾಟರಿ ಅವರಿಗೆ ಸಕ್ಸಸ್ ಅಗಲ್ಲ. ಖಂಡಿತವಾಗಿ ಈ ಚುನಾವಣೆಯಲ್ಲಿ ಸೋಲುಣ್ಣುತ್ತಾರೆ ಎಂದು ಸಚಿವ ಶ್ರೀರಾಮುಲು ಭವಿಷ್ಯ ನುಡಿದರು.

ಈ ಜಿಲ್ಲೆಯಲ್ಲಿ ನಮ್ಮ ಸರ್ಕಾರ ಮಾಡಿದಂತಹ ಒಳ್ಳೆಯ ಕೆಲಸಗಳು ನಮ್ಮನ್ನು ಕೈಹಿಡಿಯಲಿವೆ. ಗದಗ ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ. ಈ ಮೂಲಕ 120ಕ್ಕೂ ಹೆಚ್ಚು ಸ್ಥಾನ ಗಡಿ ದಾಟಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರೋವಂತಹ ಕೆಲಸ ಮಾಡುತ್ತೇವೆ ಎಂದು ಶ್ರೀರಾಮುಲು ಭವಿಷ್ಯ ನುಡಿದ್ರು.

ಮೀಸಲಾತಿ ಪ್ರಮಾಣ‌ 75% ಏರಿಸೋ‌ ಕಾಂಗ್ರೆಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು ಮೀಸಲಾತಿ ಕೊಟ್ಟ ನಂತರ ಅವರಿಗೆ ತುಂಬಾ ಮುಜುಗರ ಆಗಿದೆ. ಅವರಿಗೆ ಸಂವಿಧಾನವೇ ಗೊತ್ತಿಲ್ಲ ಅನ್ನಿಸುತ್ತಿದೆ. ಇಷ್ಟು ದಿನ ಎಸ್ಸಿ ಎಸ್ಟಿ, ಹಿಂದುಳಿದ ಜಾತಿಗಳ ಹೆಸರು ಹೇಳಿ ರಾಜಕಾರಣ ಮಾಡುತ್ತಿದ್ದರು. ಇದೀಗ ನಾವು ಲಿಂಗಾಯತ ಸೇರಿದಂತೆ ಬೇರೆ ಬೇರೆ ಸಮುದಾಯಕ್ಕೆ ಮೀಸಲಾತಿ ಕೊಟ್ಟ ನಂತರ ಅವರಿಗೆ ಮುಜುಗರ ಆಗಿದೆ. ಹಾಗಾಗಿ ಒಂದು ಕಡೆ ನಾವು ಕೊಟ್ಟ ಮೀಸಲಾತಿ ರದ್ದು ಮಾಡುತ್ತೇವೆ ಅಂತಿದ್ದಾರೆ. ಇನ್ನೊಂದು ಕಡೆ 70% ಗೂ ಹೆಚ್ಚು ಮೀಸಲಾತಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಅದಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಶ್ರೀರಾಮುಲು ಹೇಳಿದರು.

ನಾವು ಸಂವಿಧಾನಕ್ಕೆ ತಕ್ಕಂತೆ, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ರಚನೆ ಮಾಡಿದ್ದೇವೆ. ಸಮಾನ ಹಕ್ಕು, ಮೀಸಲಾತಿ ಕೊಡಿಸೋ ಕೆಲಸ ಮಾಡಿದ್ದೇವೆ. ಡಬಲ್ ಸ್ಟ್ಯಾಂಡರ್ಡ ಇಷ್ಟು ದಿನ ಕೊಟ್ಟಿಲ್ಲ, ಕೊಟ್ಟ ನಂತರ 70% ಕೊಡ್ತಿನಿ ಅಂತಾರೆ. ಅವರನ್ನು ಹೀಗೆ ಬಿಟ್ಟರೇ ಶೇ. 100%ರಷ್ಟು ಮೀಸಲಾತಿ ನೀಡುತ್ತೇವೆ ಅನ್ನಬಹುದು ಎಂದು ಶ್ರೀರಾಮುಲು ವ್ಯಂಗ್ಯವಾಡಿದರು.

ಇದನ್ನೂ ಓದಿ :ಅವಹೇಳನಕಾರಿ ಟೀಕೆ : ಶಾಸಕರಾದ ಯತ್ನಾಳ್, ​​ಪ್ರಿಯಾಂಕ್ ಖರ್ಗೆಗೆ ಷೋಕಾಸ್ ನೋಟಿಸ್

ABOUT THE AUTHOR

...view details