ಕರ್ನಾಟಕ

karnataka

ಪರಿಹಾರ ನೀಡದ ಹಿನ್ನೆಲೆ: ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕಚೇರಿ ಜಪ್ತಿ

By

Published : Mar 22, 2021, 1:17 PM IST

National Highway Office foreclosure in Dharwad

ಭೂಸ್ವಾಧೀನಕ್ಕೆ ಪರಿಹಾರ ನೀಡದ ಹಿನ್ನೆಲೆ ಸಿವಿಲ್ ಕೋರ್ಟ್ ಆದೇಶದ ಮೇರೆಗೆ ಧಾರವಾಡದ ಮಿನಿ ವಿಧಾನಸೌಧದಲ್ಲಿರುವ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು.

ಧಾರವಾಡ: ಭೂಸ್ವಾಧೀನಕ್ಕೆ ಪರಿಹಾರ ನೀಡದ ಹಿನ್ನೆಲೆ ಸಿವಿಲ್ ಕೋರ್ಟ್ ಆದೇಶದ ಪ್ರಕಾರ ನಗರದ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಕಚೇರಿಯನ್ನು ಜಪ್ತಿ ಮಾಡಲಾಯಿತು.

ಧಾರವಾಡದ ಮಿನಿ ವಿಧಾನಸೌಧದಲ್ಲಿರುವ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹತ್ತರಗುಂಜಿ ಗ್ರಾಮದ ಬಳಿ ರಾಜಾ ಸೆರಾಮಿಕ್ಸ್ ಗೆ ಸೇರಿದ ನಾಲ್ಕು ಎಕರೆ ಜಮೀನನ್ನು 1990 ರಲ್ಲಿ ರಸ್ತೆ ಕೆಲಸಕ್ಕೆ ಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಇದುವರೆಗೆ ಪರಿಹಾರ ನೀಡದ ಕಾರಣ ಅಸಲು ಬಡ್ಡಿ 5 ಕೋಟಿ ಹಣ ನೀಡಬೇಕಿತ್ತು. 2019 ರಲ್ಲಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಪ್ರಾಧಿಕಾರ ಪರಿಹಾರ ನೀಡದ ಕಾರಣ ಜಪ್ತಿ ಮಾಡಲಾಯಿತು.

ಓದಿ : ಯಾವುದೇ ಕಾರಣಕ್ಕೂ ಲಾಕ್‌ಡೌನ್ ಜಾರಿ ಮಾಡಲ್ಲ; ಸಚಿವ ಬಿ.ಸಿ. ಪಾಟೀಲ

ABOUT THE AUTHOR

...view details