ಕರ್ನಾಟಕ

karnataka

ಸಾರಿಗೆ ನೌಕರರ ಮುಷ್ಕರ: ಕರ್ನಾಟಕ ವಿವಿ ಪರೀಕ್ಷೆ ಮತ್ತೆ ಮುಂದೂಡಿಕೆ

By

Published : Apr 17, 2021, 3:11 PM IST

ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಸ್​ ಸೇವೆ ಸರಿಯಾಗಿ ಇಲ್ಲದ ಕಾರಣ ಕರ್ನಾಟಕ ವಿವಿ ಪರೀಕ್ಷೆಗಳನ್ನು ಮತ್ತೆ ಮುಂದೂಡಿ ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ ಪ್ರಕಟಣೆ ಹೊರಡಿಸಿದ್ದಾರೆ.

Karnataka VV test postponed again
ಕರ್ನಾಟಕ ವಿವಿ ಪರೀಕ್ಷೆ ಮತ್ತೆ ಮುಂದೂಡಿಕೆ

ಧಾರವಾಡ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಏ. 19 ಮತ್ತು 20ರಂದು ನಡೆಯಬೇಕಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ಮುಂದೂಡಿಕೆಯಾಗಿವೆ.

ಕರ್ನಾಟಕ ವಿವಿ ಪರೀಕ್ಷೆ ಮತ್ತೆ ಮುಂದೂಡಿಕೆ

ಕೆಎಸ್​ಆರ್​ಟಿಸಿ ಬಸ್ ಓಡಾಟ ಇಲ್ಲದ ಹಿನ್ನೆಲೆ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮೂರನೇ ಶೆಡ್ಯೂಲ್‌ನ ಪರೀಕ್ಷೆಗಳನ್ನು ಸಹ ಮುಂದಕ್ಕೆ ಹಾಕಲಾಗಿದೆ.

ಸಾರಿಗೆ ನೌಕರರು ಮುಷ್ಕರ ಇರದಿದ್ದರೆ ಇಷ್ಟೊತ್ತಿಗೆ ಪರೀಕ್ಷೆಗಳು ಮುಗಿಯುತ್ತಿದ್ದವು. ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸಲಾಗುವುದು ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಂ ಪ್ರಕಟಣೆ ಹೊರಡಿಸಿದ್ದಾರೆ.

ABOUT THE AUTHOR

...view details