ಕರ್ನಾಟಕ

karnataka

ಚುನಾಯಿತ ಪ್ರತಿನಿಧಿಗಳಿಗೆ ಇರಬೇಕಾದ ಜವಾಬ್ದಾರಿಗೆ ರೇಣುಕಾಚಾರ್ಯ ಉದಾಹರಣೆ: ಸುಧಾಕರ್

By

Published : Oct 19, 2021, 8:20 PM IST

ಜನಪ್ರತಿನಿಧಿ ಕರ್ತವ್ಯಕ್ಕೆ ರೇಣುಕಾಚಾರ್ಯ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಹೊನ್ನಾಳಿ ಶಾಸಕರನ್ನು ಸಚಿವ ಕೆ.ಸುಧಾಕರ್ ಗುಣಗಾನ ಮಾಡಿದ್ರು.

HEALTH MINISTER
HEALTH MINISTER

ದಾವಣಗೆರೆ: ಕೊರೊನಾ ವಾರಿಯರ್​ಗಳಿಗೆ ಗೌರವ ಸಲ್ಲಿಸುವುದೇ ಪುಣ್ಯದ ಕೆಲಸ. ಚುನಾಯಿತ ಪ್ರತಿನಿಧಿಗಳಿಗೆ ಇರಬೇಕಾದ ಜವಾಬ್ದಾರಿಗೆ ರೇಣುಕಾಚಾರ್ಯ ಉದಾಹರಣೆಯಾಗಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್​​ ಹೇಳಿದ್ದಾರೆ.

ರೇಣುಕಾಚಾರ್ಯ ಗುಣಗಾನ ಮಾಡಿದ ಡಾ.ಕೆ.ಸುಧಾಕರ್

ಹೊನ್ನಾಳಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿ ಕರ್ತವ್ಯಕ್ಕೆ ರೇಣುಕಾಚಾರ್ಯ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ರೇಣುಕಾಚಾರ್ಯರನ್ನು ಕೊಂಡಾಡಿದರು.

ನಾನು ಸಚಿವನಾದ ಕೆಲವೇ ದಿನಗಳಲ್ಲಿ ಕೋವಿಡ್ ಸಂಕಷ್ಟ ಎದುರಿಸಬೇಕಾಯ್ತು. ಕೊರೊನಾ ಬಿಕ್ಕಟ್ಟನ್ನು ಎದುರಿಸಲು ಪ್ರೋತ್ಸಾಹ ನೀಡಿದ್ದು ಬಿಎಸ್​ವೈ. ಸ್ವತಃ ಅವರೇ ವೈರಾಣುವಿಗೆ ತುತ್ತಾದರೂ, ಸಂಕಷ್ಟದ ಸಮಯವನ್ನು ಎದುರಿಸಿದರು. ಅವರ ಕಾರ್ಯವೈಖರಿ, ದಕ್ಷತಾ ಮನೋಭಾವ ಮರೆಯಲು ಸಾಧ್ಯವಿಲ್ಲ ಎಂದರು.

ಕೊರೊನಾ ಅವಧಿಯಲ್ಲಿ ನಾವು ಎಷ್ಟೇ ಉತ್ತಮ ಕೆಲಸಗಳನ್ನು ಮಾಡಿದ್ರೂ, ವಿರೋಧಿಗಳು ಟೀಕಿಸಿದ್ದರು. ಆದರೆ, ಪ್ರತಿಷ್ಠಿತ ಸಂಸ್ಥೆಯೊಂದು ಕೋವಿಡ್ ನಿರ್ವಹಣೆಗೆ ರಾಜ್ಯಕ್ಕೆ ಪ್ರಥಮ ಸ್ಥಾನ ನೀಡಿತು. ಇದು ವಿರೋಧಿಗಳ ಆರೋಪ, ಟೀಕೆಗೆ ಸೂಕ್ತ ಉತ್ತರವಾಗಿತ್ತು ಎಂದು ಪ್ರತಿಪಕ್ಷ ಕಾಂಗ್ರೆಸ್​ಗೆ ಟಾಂಗ್ ಕೊಟ್ಟರು.

ABOUT THE AUTHOR

...view details