ಕರ್ನಾಟಕ

karnataka

ದಾವಣಗೆರೆ: ಶಾಲೆಗಳ ಪುನಾರಂಭ ಬೆನ್ನಲ್ಲೇ 17 ದಿನಗಳಲ್ಲಿ 14 ಮಕ್ಕಳಿಗೆ ವಕ್ಕರಿಸಿದ ಕೊರೊನಾ

By

Published : Sep 23, 2021, 4:22 PM IST

14 students tested corona positive in davanagere
14 ಮಕ್ಕಳಿಗೆ ಕೊರೊನಾ ಪಾಸಿಟಿವ್ ()

ರಾಜ್ಯದಲ್ಲಿ ಶಾಲೆಗಳು ಪುನಾರಂಭಗೊಂಡ 17 ದಿನಗಳ ಅವಧಿಯಲ್ಲಿ ದಾವಣಗೆರೆ ಜಿಲ್ಲೆಯ 14 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಪೋಷಕರು ಆತಂಕಕ್ಕೊಳಗಾಗಿದ್ದಾರೆ.

ದಾವಣಗೆರೆ:ರಾಜ್ಯದಲ್ಲಿ ಕೋವಿಡ್​ ಮೂರನೇ ಅಲೆ ಭೀತಿ ಆರಂಭವಾಗಿದೆ. ಈ ಮಧ್ಯೆ ಶಾಲೆಗಳು ಪುನಾರಂಭವಾದ ಬಳಿಕ 17 ದಿನಗಳಲ್ಲಿ ಜಿಲ್ಲೆಯ ಒಟ್ಟು 14 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ.

ಎರಡು ಕೊರೊನಾ ಅಲೆಗಳಿಂದ ತತ್ತರಿಸಿದ ಪೋಷಕರಿಗೆ ಇದೀಗ ಮಕ್ಕಳ ಚಿಂತೆ ಹೆಚ್ಚಾಗಿದೆ. ಈಗಾಗಲೇ ಶಾಲೆಗಳು ಆರಂಭವಾಗಿದ್ದು, ಪೋಷಕರು ಕೈಯಲ್ಲಿ ಜೀವ ಹಿಡಿದುಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ ಶಾಲೆ ಆರಂಭವಾಗಿ ಕೆಲವೇ ದಿನಗಳು ಕಳೆದಿವೆ. ಸೆ. 06 ರಿಂದ ಸೆ 23 ರ ತನಕ ಅಂದರೆ 17 ದಿನಗಳಲ್ಲಿ 14 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ‌.

09 ಮಂದಿ ವಿದ್ಯಾರ್ಥಿಗಳು ಹಾಗೂ ಐವರು ವಿದ್ಯಾರ್ಥಿನಿಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತ ಮಕ್ಕಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ರಾಘವನ್ ತಿಳಿಸಿದರು.

14 ಕೊರೊನಾ ಸೋಂಕಿತ ವಿದ್ಯಾರ್ಥಿಗಳಿಗೆ ಜಿಲ್ಲೆಯ ಆಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

ABOUT THE AUTHOR

...view details