ಕರ್ನಾಟಕ

karnataka

ಯುವಕರ ಹೋರಾಟಕ್ಕೆ ಸಿಕ್ತು ಪ್ರತಿಫಲ.. ಮದ್ಯಮುಕ್ತ ಗ್ರಾಮವಾಯ್ತು ಅಮ್ಮನಹಟ್ಟಿ..!

By

Published : Jan 26, 2020, 5:39 PM IST

complete-alcohol-banned-in-ammanahatti-village
ಮದ್ಯಮುಕ್ತ ಗ್ರಾಮವಾಯ್ತು ಅಮ್ಮನಹಟ್ಟಿ..!

ಕೋಟೆನಾಡು ಚಿತ್ರದುರ್ಗದ ಅಮ್ಮನಹಟ್ಟಿ ಎಂಬ ಗ್ರಾಮದಲ್ಲಿ ಯುವಕರು ಜಾಗೃತಿ ಮೂಡಿಸುವ ಮೂಲಕ ಸಂಪೂರ್ಣ ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ.

ಚಿತ್ರದುರ್ಗ: ಕೋಟೆನಾಡಿನ ಅಮ್ಮನಹಟ್ಟಿ ಎನ್ನುವ ಗ್ರಾಮವನ್ನು ಸಂಪೂರ್ಣ ಮದ್ಯಮುಕ್ತವಾಗಿಸುವ ಮೂಲಕ ಯುವಕರ ತಂಡವೊಂದು ಮಾದರಿ ಗ್ರಾಮವನ್ನಾಗಿಸಿದೆ.

ಗ್ರಾಮವನ್ನು 71 ನೇ ಗಣರಾಜ್ಯೋತ್ಸವ ದಿನಚಾರಣೆಯಂದು ಮದ್ಯ ಮುಕ್ತ ಗ್ರಾಮ ಎಂದು ಘೋಷಣೆ ಮಾಡಲಾಯಿತು. ಈ ಗ್ರಾಮದಲ್ಲಿ ಶೇ90% ರಷ್ಟು ಜನ್ರು ಮದ್ಯದ ಅಮಲಿಗೆ ಬಿದ್ದಿದ್ದಾರೆ ಎಂದು ಅರಿತ ಈ ಗ್ರಾಮದ ಯುವಕರು ನಿರಂತರವಾಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಈ ಕೆಟ್ಟ ಚಟವನ್ನು ಹೋಗಲಾಡಿಸಿದ್ದಾರೆ.

ಮದ್ಯಮುಕ್ತ ಗ್ರಾಮವಾಯ್ತು ಅಮ್ಮನಹಟ್ಟಿ..!

ಇದೇ ವೇಳೆ ಮದ್ಯದ ಅಮಲಿಗೆ ಬೀಳುವುದಿಲ್ಲ ಎಂದು ಗ್ರಾಮಸ್ಥರಿಂದ ಯುವಕರು ಪ್ರತಿಜ್ಞಾವಿಧಿ ತೆಗೆದುಕೊಂಡರು. ಯುವಕರ ಹೋರಾಟದ ಫಲವಾಗಿ ಅಮ್ಮನಹಟ್ಟಿ ಮದ್ಯಮುಕ್ತ ಗ್ರಾಮವಾಗಿದ್ದು, ಮದ್ಯಮುಕ್ತ ಗ್ರಾಮ ಎಂದು ಯುವಕರು ಬೋರ್ಡ್ ಕೂಡ ಹಾಕಿದ್ದಾರೆ. ಮದ್ಯ ಮುಕ್ತ ಗ್ರಾಮಕ್ಕೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಸಾಥ್ ನೀಡಿದ್ದಾರೆ.

Intro:ಮದ್ಯಮುಕ್ತ ಗ್ರಾಮವಾಗಿ ಅಮ್ಮನಹಟ್ಟಿ ಘೋಷಣೆ.

ಆ್ಯಂಕರ್:-ಯುವಕರರು ಹೋರಾಟ ಮಾಡಿದ್ರೇ ಏನೇಲ್ಲ ಮಾಡಬಹುದು ಎಂಬ ಉದಾಹರಣೆಗೆ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ. ಚಿತ್ರದುರ್ಗದಲ್ಲಿ ಮದ್ಯ ವಿರುದ್ಧ ಹೋರಾಟ ಮಾಡಿದ ಯುವಕರು ಗ್ರಾಮವೊಂದರಲ್ಲಿ ಸಂಪೂರ್ಣವಾಗಿ ಮದ್ಯೆ ಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ.
ಮದ್ಯಮುಕ್ತ ಗ್ರಾಮವನ್ನಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಅಮ್ಮನಹಟ್ಟಿ ಗ್ರಾಮವನ್ನು 71 ನೇ ಗಣರಾಜ್ಯೋತ್ಸವ ದಿನಚಾರಣೆಯಂದು ಘೋಷಣೆ ಮಾಡಲಾಯಿತು. ಈ ಗ್ರಾಮದಲ್ಲಿ ಶೇ90% ರಷ್ಟು ಜನ್ರು ಮದ್ಯದ ಅಮಲಿಗೆ ಬಿದ್ದಿದ್ದಾರೆ ಎಂದು ಅರಿತ ಈ ಗ್ರಾಮದ ಯುವಕರು ನಿರಂತರವಾಗಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಈ ಕೆಟ್ಟ ಚಟಕ್ಕೆ ನಾಂದಿ ಹಾಡಿದ್ದಾರೆ. ಇನ್ನೂ ಮದ್ಯ ಅಮಲಿಗೆ ಬೀಳುವುದಿಲ್ಲ ಎಂದು ಗ್ರಾಮಸ್ಥರಿಂದ ಯುವಕರು ಪ್ರತಿಜ್ಙಾವಿಧಿ ತೆಗೆದುಕೊಂಡರು. ಇನ್ನೂ ಯುವಕರ ಹೋರಾಟದ ಫಲವಾಗಿ ಅಮ್ಮನಹಟ್ಟಿ ಮದ್ಯಮುಕ್ತವಾದ ಗ್ರಾಮವನ್ನಾಗಿ ಮಾಡಿ ಮದ್ಯಮುಕ್ತ ಗ್ರಾಮ ಎಂದು ಯುವಕರು ಬೋರ್ಡ್ ಕೂಡ ಹಾಕಿದ್ದಾರೆ. ಇನ್ನೂ ಮದ್ಯ ಮುಕ್ತ ಗ್ರಾಮಕ್ಕೆ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಸಾಥ್ ನೀಡಿರುವುದು ವಿಶೇಷವಾಗಿದೆ.

ಫ್ಲೋ....Body:Madhya mukta Conclusion:Av

ABOUT THE AUTHOR

...view details