ಕರ್ನಾಟಕ

karnataka

ಆ ಹಿಟ್​ಲಿಸ್ಟ್‌ನಲ್ಲಿ ಸಿದ್ದರಾಮಯ್ಯನವರೂ ಇದ್ದರು.. ದೇವರ ಕೃಪೆ: ನಿಡುಮಾಮಿಡಿ ಸ್ವಾಮೀಜಿ

By

Published : Sep 24, 2022, 9:50 PM IST

Updated : Sep 24, 2022, 10:14 PM IST

siddaramaiah-name-was-also-in-hitlist-says-nidumamidi-swamiji

ದೇವರ ಕೃಪೆ ಕೊಲ್ಲೋವನು ಒಬ್ಬ ಇದ್ರೆ, ಕಾಯೋವನು ಒಬ್ಬ ಇರ್ತಾನೆ. ಸತ್ತ ಮೇಲೆ ಮೇಣದ ಬತ್ತಿ ಸಮಾಧಾನಪಡೋ ಬದಲು ಬದುಕಿದ್ದಾಗ ಸಿದ್ದರಾಮಯ್ಯನವರಿಗೆ ಶಕ್ತಿ ತುಂಬಿ ಸಮಾಜದ ಬದಲಾವಣೆ ಬಯಸಿ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಸಾಹಿತಿ ಎಂಎಂ ಕಬ್ಬುರ್ಗಿ ಹತ್ಯೆ ಅದಾಗ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು. ಗೌರಿ ಹೋದಾಗ ನಾನು ಗೌರಿ ಅಂತ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು. ಆದರೆ, ಆಗ ನಿಡುಮಾಮಿಡಿಗೂ, ಭಗವಾನ್ ಗೂ, ಚಂಪಾಗೂ ಕೊಲೆಯ ಆತಂಕ ಬಂದಿತ್ತು. ಈ‌ ಲಿಸ್ಟ್‌ನಲ್ಲಿ ಸಿದ್ದರಾಮಯ್ಯ ಸಹ ಇದ್ದರು ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು ಗಂಭೀರ ಹೇಳಿಕೆ ಕೊಟ್ಟಿದ್ದಾರೆ.

ನಗರದ ಅಂಬೇಡ್ಕರ್ ಸಮಾನತಾ ಸೌಧದಲ್ಲಿ ದಿವಂಗತ ಪ್ರೋಫೆಸರ್‌ ಬಿ.ಗಂಗಾಧರಮೂರ್ತಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಿಡುಮಾಮಿಡಿ ಸ್ವಾಮೀಜಿಗಳು, ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶೇ.10ರಷ್ಟು ಸರ್ಕಾರ ಅಂತ ಟೀಕಿಸಿದ್ರು, ಪರವಾಗಿಲ್ಲ ನೀವು ಶೇ.10ನಲ್ಲೇ ಇರಿ. ಬಿಜೆಪಿ ಪಕ್ಷದ ತರ ಶೇ.40 ಆಗಬೇಡಿ. ಈ ಶೇ.40ರಷ್ಟು ಸರ್ಕಾರ ತಪ್ಪಿಸಿ. ಶೇ.10ಕ್ಕೆ ಬನ್ನಿ ನಾವ್ ಓಪ್ಕೋತಿವಿ. ನಾವೆಲ್ಲರೂ ಒಪ್ಪಿಕೊಳ್ಳೋಣ ಎಂದು ಹೇಳಿದರು.

ಆ ಹಿಟ್​ಲಿಸ್ಟ್‌ನಲ್ಲಿ ಸಿದ್ದರಾಮಯ್ಯನವರೂ ಇದ್ದರು.. ದೇವರ ಕೃಪೆ: ನಿಡುಮಾಮಿಡಿ ಸ್ವಾಮೀಜಿ

ರಾಜ್ಯದಲ್ಲಿ ಬೆಲೆ ಏರಿಕೆ ತರ ಭ್ರಷ್ಟಾಚಾರ ಏರಿಕೆ ಆಗ್ತಾನೇ ಇದೆ. ಭ್ರಷ್ಟಾಚಾರವನ್ನು ಯಾವ ಪಕ್ಷದಿಂದಲೂ ನಿವಾರಣೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ ಅಸಹಾಯಕತೆ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರವನ್ನು ಗಣನೀಯವಾಗಿ ತಗ್ಗಿಸುವ ಭರವಸೆ ಕೊಟ್ಟು ಜನರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ರೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಸಲಹೆ ನೀಡಿದ್ದಾರೆ.

ಕಾಯೋವನು ಒಬ್ಬ ಇರ್ತಾನೆ:ಇದೇ ವೇಳೆ ಮುಂದುವರೆದು ಮಾತನಾಡಿದ ಸ್ವಾಮಿಜೀ, ಮೊಯ್ಲಿಯವರೇ ಸಿದ್ದರಾಮಯ್ಯನವರು ಹಿಟ್ ಲಿಸ್ಟ್​ನಲ್ಲಿದ್ರು. ಸಿದ್ದರಾಮಯ್ಯನವರಿಗೆ ತೀವ್ರವಾದ ಬೆದರಿಕೆ ಇತ್ತು. ಇದೇ ವೇಳೆ ನಿಡುಮಾಮಿಡಿ ಮುಗಿಸಲು ಎರಡು ತಂಡಗಳನ್ನ ನೇಮಿಸಿದ್ರು ಪುಣ್ಯಾತ್ಮರು. ದೇವರ ಕೃಪೆ ಕೊಲ್ಲೋವನು ಒಬ್ಬ ಇದ್ರೆ, ಕಾಯೋವನು ಒಬ್ಬ ಇರ್ತಾನೆ ಎಂದರು.

ನಾನು ಹೋದ್ರೆ ನಾನು ನಿಡುಮಾಮಿಡಿ ಅಂತ ಒಂದು ದಿನ ಮೇಣದ ಬತ್ತಿ ಹಚ್ಚಿಬೀಡ್ತೀವಿ. ಸಿದ್ದರಾಮಯ್ಯನವರು ಹೋದ್ರೂ ಒಂದು ದಿನ ಮೇಣದ ಬತ್ತಿ ಹಚ್ಚಿಬೀಡ್ತೀವಿ. ಸತ್ತ ಮೇಲೆ ಮೇಣದ ಬತ್ತಿ ಸಮಾಧಾನಪಡೋ ಬದಲು ಬದುಕಿದ್ದಾಗ ಸಿದ್ದರಾಮಯ್ಯನವರಿಗೆ ಶಕ್ತಿ ತುಂಬಿ ಸಮಾಜದ ಬದಲಾವಣೆ ಬಯಸಿ. ಸದ್ಯ ಕರ್ನಾಟಕದ ಜನತೆ ಬದಲಾವಣೆ ಬಯಸುತ್ತಿದ್ದಾರೆ.

ಅದನ್ನ ಮತವನ್ನಾಗಿ ಪರಿವರ್ತಿಸಿ ಆ ಸ್ಥಾನಕ್ಕೆ ಬರುವುದು ನಿಮ್ಮ ಮೇಲೆ ನಿಂತಿದೆ. ಸಿದ್ದರಾಮಯ್ಯನವರು ಈ ರಾಜ್ಯದ ಆಶಾಕಿರಣ. ದೇವ್ರು ಅವರಿಗೆ ಒದಗಿಸಿಕೊಡಲಿ ಎಂದು ಪರೋಕ್ಷವಾಗಿ ಸಿಎಂ ಆಗಬೇಕು ಅಂತ ಸ್ವಾಮೀಜಿಗಳು ಆಶಿಸಿದ್ದಾರೆ.

ಇದನ್ನು ಓದಿ: ರಾಜ್ಯ ರಾಜಕಾರಣದ ವಿಶ್ಲೇಷಣೆ... ಜೆಡಿಎಸ್ ವಿರುದ್ಧ ಬಿಜೆಪಿ ಧ್ವನಿ ಎತ್ತದಿರುವುದೇಕೆ?.. ಏನಿದು ಪ್ಲಾನ್​?

Last Updated :Sep 24, 2022, 10:14 PM IST

ABOUT THE AUTHOR

...view details