ಕರ್ನಾಟಕ

karnataka

ಎರಡು ದಿ‌ನ ಭರ್ಜರಿ ಪ್ರಚಾರ: ವರುಣಾ ಬಳಿಕ ಚಾಮರಾಜನಗರದಲ್ಲಿ ಸೋಮಣ್ಣ ಸ್ಟ್ರಾಟಜಿ ಶುರು!

By

Published : Apr 15, 2023, 9:03 AM IST

ಏ. 17 ರಂದು ವರುಣಾದಲ್ಲಿ ಸೋಮಣ್ಣ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಈ ವೇಳೆ, ಸಿಎಂ ಬೊಮ್ಮಾಯಿ ಕೂಡ ಜೊತೆಗಿರಲಿದ್ದಾರೆ.

ಸೋಮಣ್ಣ
ಸೋಮಣ್ಣ

ಚಾಮರಾಜನಗರ: ವರುಣಾ ಕ್ಷೇತ್ರದ ಬಳಿಕ ಚಾಮರಾಜನಗರದಲ್ಲಿ ಚುನಾವಣಾ ರಣನೀತಿ ರೂಪಿಸಲು ಬಿಜೆಪಿ ಅಭ್ಯರ್ಥಿ ಸೋಮಣ್ಣ ಬರುತ್ತಿದ್ದು, ಶನಿವಾರ ಮತ್ತು ಭಾನುವಾರ ಎರಡು ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ನಡೆಸಲಿದ್ದಾರೆ.

ಹೊಸ ಮನೆಗೆ ಸೋಮಣ್ಣ ಪತ್ನಿ ಪೂಜೆ:ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಹೊಸ ಮನೆ ಮಾಡಿದ್ದು, ಸದ್ದಿಲ್ಲದೇ ಸೋಮಣ್ಣ ಪತ್ನಿ ಆಗಮಿಸಿ ಹೊಸ ಮನೆಗೆ ಪೂಜೆ ಸಲ್ಲಿಸಿ ತೆರಳಿದ್ದಾರೆ. ವರುಣದಷ್ಟೇ ಚಾಮರಾಜನಗರದಲ್ಲೂ ಸೋಮಣ್ಣ ಪ್ರಬಲ ಸ್ಪರ್ಧೆ ಎದುರಿಸಿಬೇಕಾಗಿದ್ದು, ಇದಕ್ಕಾಗಿ ಎರಡು ದಿನ ಚಾಮರಾಜನಗರದಲ್ಲೇ ವಾಸ್ತವ್ಯ ಹೂಡಿ ರಣನೀತಿ ರೂಪಿಸುವ ಜೊತೆಗೆ ಭರ್ಜರಿ ಪ್ರಚಾರ ಮಾಡಲಿದ್ದಾರೆ. ಸಮಯವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತಾಪಂ ಕ್ಷೇತ್ರವಾರು ಪ್ರಚಾರ ನಡೆಸಿ, ಬಹಿರಂಗ ಸಭೆ, ಮುಖಂಡರನ್ನು ಭೇಟಿಯಾಗಿ ತಮ್ಮದೇ ಆದ ಸ್ಟೈಲಿನಲ್ಲಿ ಅಖಾಡಕ್ಕೆ ಧುಮುಕಲಿದ್ದಾರೆ.

ಬಂಡಾಯ ಶಮನ - ರಣನೀತಿಯತ್ತ ಗಮನ:ಈಗಾಗಲೇ ಬಿಜೆಪಿಯಲ್ಲಿನ ಬಂಡಾಯ ಅರ್ಧ ಶಮನವಾಗಿದ್ದು, ಸೋಮಣ್ಣ ಹಾದಿ ಸುಗಮವಾಗುತ್ತಿದೆ. ಮುಖಂಡರನ್ನು ಭೇಟಿಯಾಗಿ ಲೂಪ್ ಹೋಲ್​ಗಳನ್ನು ಮುಚ್ಚಿ ಮುಖಂಡರ ಪಕ್ಷಾಂತರ ಎಲ್ಲದಕ್ಕೂ ಬ್ರೇಕ್ ಹಾಕಲಿದ್ದಾರೆ. ಒಟ್ಟಿನಲ್ಲಿ ವರುಣ ಹಾಗೂ ಚಾಮರಾಜನಗರದಲ್ಲಿ ಕಮಲ ಪತಾಕೆ ಹಾರಿಸಲು ಹತ್ತಾರು ಅಸ್ತ್ರ ಪ್ರಯೋಗಿಸಲಿರುವ ಸೋಮಣ್ಣ ಎರಡು ದಿನ ಮೊಕ್ಕಾಂ ಹೂಡಿ ಕಾರ್ಯಕರ್ತರಲ್ಲಿ ರಣೋತ್ಸಾಹ ತುಂಬಲಿದ್ದಾರೆ.

ಶನಿವಾರ ಕೂಡ್ಲೂರು, ಆಲೂರು, ಚಂದಕವಾಡಿ, ಅಂಕಶೆಟ್ಟಿಪುರ, ಅರಕಲವಾಡಿ ಗ್ರಾಮಗಳಲ್ಲಿ ಸಭೆ ನಡೆಸಿ, ಮುಖಂಡರ ಭೇಟಿ ನಡೆಸಲಿರುವ ಸೋಮಣ್ಣ ಭಾನುವಾರ ಉಡಿಗಾಲ, ಮಾದಪುರ ಗ್ರಾಮಗಳಲ್ಲಿ ರೋಡ್ ಶೋ, ಬಹಿರಂಗ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ:ಕಾಂಗ್ರೆಸ್ ಮುಖಂಡನೊಬ್ಬ ನಮ್ಮ ಪಕ್ಷವನ್ನು ಒಡೆಯಲು ಹಾಸನದಲ್ಲಿ ಬೀಡು ಬಿಟ್ಟಿದ್ದಾನೆ: ಹೆಚ್ ಡಿ ರೇವಣ್ಣ

ವರುಣ ನಾಮಿನೇಷನ್ ವೇಳೆ ಸಿಎಂ: ವರುಣ ಕ್ಷೇತ್ರದತ್ತ ಬಿಜೆಪಿ ಹೆಚ್ಚು ಕೇಂದ್ರಿಕರಿಸಿದ್ದು, 17 ರಂದು ವರುಣದಲ್ಲಿ ಸಚಿವ ಸೋಮಣ್ಣ ನಾಮಪತ್ರ ಸಲ್ಲಿಸಲಿದ್ದಾರೆ.‌ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಬೊಮ್ಮಾಯಿ ಜೊತೆಗಿರಲಿರುವುದು ವಿಶೇಷವಾಗಿದೆ. ಇನ್ನು, ಸೋಮಣ್ಣ ಅವರ ಪತ್ನಿಯೂ ಕೂಡ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದ್ದು ನಾಮಪತ್ರ ಸಲ್ಲಿಸಿದ ಬಳಿಕ ಚಾಮರಾಜನಗರದಲ್ಲಿ ಪತಿ ಪರವಾಗಿ ಭರ್ಜರಿ ಪ್ರಚಾರ, ಮನೆ-ಮನೆ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಲೇಬೇಕೆಂದು ಹೊರಟಿರುವ ಬಿಜೆಪಿಗೆ ಸೋಮಣ್ಣ ಸಾರಥಿಯಾಗಿದ್ದು, ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಹಿರಿತನ, ಲಿಂಗಾಯತ ನಾಯಕ, ಪ್ರತಿಷ್ಠೆ ಎಲ್ಲವನ್ನೂ ಪಣಕ್ಕೆ ಇಟ್ಟಿದ್ದಾರೆ. ಇನ್ನು ಏ.19 ರಂದು ಚಾಮರಾಜನಗರದಿಂದ ನಾಮಪತ್ರ ಸಲ್ಲಿಸುವುದಾಗಿ ಸೋಮಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಮಾನ್ಯ ಕಾರ್ಯಕರ್ತನಿಗೆ ಹಾಸನ ಟಿಕೆಟ್​: ಭವಾನಿ ರೇವಣ್ಣ ಭಿನ್ನಮತದ ನಡುವೆ ಗೆದ್ದು ಬೀಗುತ್ತಾರಾ ಸ್ವರೂಪ್?

ಇದನ್ನೂ ಓದಿ:2ನೇ ಪಟ್ಟಿಯಲ್ಲಿ ಅನ್ಯ ಪಕ್ಷದ ಅತೃಪ್ತರಿಗೆ ಜೆಡಿಎಸ್ ಮಣೆ: ಅಂತಿಮ ಪಟ್ಟಿಗೆ ವಲಸಿಗರತ್ತ ಚಿತ್ತ!

ABOUT THE AUTHOR

...view details