ಕರ್ನಾಟಕ

karnataka

ಸಿದ್ದರಾಮಯ್ಯ ಹೆದರಿಕೊಳ್ಳಲು ನಾನು ಭೂತ ಅಲ್ಲ: ಸಚಿವ ಸೋಮಣ್ಣ ವ್ಯಂಗ್ಯ

By

Published : Apr 22, 2023, 9:44 PM IST

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ವಿ. ಸೋಮಣ್ಣ ಲೇವಡಿ ಮಾಡಿದರು. ಜೊತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ವಿರುದ್ಧ ಕಿಡಿಕಾರಿದರು.

Minister V Somanna
ಸಚಿವ ವಿ.ಸೋಮಣ್ಣ

ಸಚಿವ ವಿ.ಸೋಮಣ್ಣ ಮಾತನಾಡಿದರು

ಚಾಮರಾಜನಗರ:''ಸಿದ್ದರಾಮಯ್ಯ ಹೆದರಿಕೊಳ್ಳಲು ನಾನು ಭೂತನೂ ಅಲ್ಲಾ, ಪಿಶಾಚಿಯೂ ಅಲ್ಲ'' ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ವರುಣಾದಲ್ಲಿ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಹೆಚ್ಚು ಪ್ರಚಾರ ಮಾಡುತ್ತಿರುವ ಬಗ್ಗೆ ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಅವರ ಕರ್ತವ್ಯ ಅವರು ಮಾಡುತ್ತಿದ್ದಾರೆ. ನಾನು ಭೂತನೂ ಅಲ್ಲ, ಪಿಶಾಚಿನೂ ಅಲ್ಲ. ಸಿದ್ಯರಾಮಯ್ಯ ನಾನು ಜೊತೆಯಲ್ಲಿ ಕೆಲಸ ಮಾಡಿದವರು. ಅವರು ಪ್ರಚಾರಕ್ಕೆ ಎಷ್ಟು ಬಾರಿಯಾದ್ರೂ ಬರ್ತಾರೆ. ಅವರು ಬರುವುದರಿಂದ ಮತದಾರ ಎಚ್ಚೆತ್ತುಕೊಳ್ಳುತ್ತಾರೆ'' ಎಂದು ಲೇವಡಿ ಮಾಡಿದರು.

ಇದನ್ನೂ ಓದಿ:ಬಿಜೆಪಿಯಲ್ಲಿ ಬೇಸತ್ತು ಶೆಟ್ಟರ್​​ - ಸವದಿ ಕಾಂಗ್ರೆಸ್​ ಸೇರಿದ್ದಾರೆ : ವಿಜಯಾನಂದ ಕಾಶಪ್ಪನವರ್​

ವರುಣದಲ್ಲಿ ಸಂಸದ ಪ್ರತಾಪ್ ಸಿಂಹ ಹೆಚ್ಚು ಪ್ರಚಾರ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ''ಪ್ರತಾಪ ಅವರು ಪ್ರತಾಪ ಸಿಂಹ, ಎಲ್ಲಿಗೆ ಆದ್ಯತೆ ನೀಡಬೇಕೆಂದು ಅವರಿಗೆ ಗೊತ್ತಿದೆ. ಆತ ಓರ್ವ ಶಿಸ್ತಿನ ಸಿಪಾಯಿ, ಭವಿಷ್ಯದ ನಾಯಕ, ಪ್ರತಾಪ ಸಿಂಹನ ದೂರದೃಷ್ಟಿ ಹೈಕ್ಲಾಸ್'' ಎಂದು ಶಬಬ್ಬಾಸ್ ಗಿರಿ ಕೊಟ್ಟರು.

ಇದನ್ನೂ ಓದಿ:ಮಿಷನ್ 150 ಆಯ್ತು ಈಗ ಟಾರ್ಗೆಟ್ 50: ಕರುನಾಡ ಗೆಲ್ಲಲು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?

ನಾನು ಸಿಎಂ ಆಗುವ ಭ್ರಮೆ ಇಟ್ಟುಕೊಂಡಿಲ್ಲ:ಬಿಜೆಪಿಯಿಂದ ಲಿಂಗಾಯತ ಸಿಎಂ ಅಸ್ತ್ರ ಬಳಕೆ ಸಂಬಂಧ ಮಾತನಾಡಿ ಅವರು, ''ಒಂದು ವರ್ಷದ ಹಿಂದೆಯೇ ಮುಂದಿನ ಚುನಾವಣೆ ಬೊಮ್ಮಾಯಿ ನೇತೃತ್ವದಲ್ಲಿ ಎಂದಿದ್ದಾರೆ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಸಿಎಂ ಆಗುವ ಬಗ್ಗೆ ನಾನು ಭ್ರಮೆ ಇಟ್ಟುಕೊಂಡಿಲ್ಲ. ಇನ್ನು 20 ದಿನ ಕಾಯಿರಿ ಎಲ್ಲಾ ಸರಿಹೋಗತ್ತೆ. ತಾಯಿ ಚಾಮುಂಡಿ ಏನ್ ಹೇಳ್ತಾಳೆ ಅದನ್ನು ಕೇಳ್ತೀನಿ'' ಎಂದು ತಿಳಿಸಿದರು.

ಇದನ್ನೂ ಓದಿ:ಸಚಿವ ಆನಂದ್ ಸಿಂಗ್ ಸಹೋದರಿ ಬಿ ಎಲ್ ರಾಣಿ ಸಂಯುಕ್ತ ಕಾಂಗ್ರೆಸ್ ಸೇರ್ಪಡೆ

ಕಾಂಗ್ರೆಸ್​ನವರು ಹಗಲು ಕನಸು ಕಾಣುತ್ತಿದ್ದಾರೆ- ಸೋಮಣ್ಣ:ಬಿಜೆಪಿಯ ಲಿಂಗಾಯತ ಡ್ಯಾಂ ಒಡೆದಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್​ನವರು ಹಗಲು ಕನಸು ಕಾಣುತ್ತಿದ್ದಾರೆ. ಬಿಜೆಪಿ ಲಿಂಗಾಯತ ಹಾಗೂ ಅನ್ಯ ಕೋಮಿನವರನ್ನು ಒಂದೇ ರೀತಿ ಕಾಣುತ್ತೇವೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಿಗೆ ಏನಾಯ್ತು ಅಂತಾ ಎಲ್ಲರಿಗೂ ಗೊತ್ತಿದೆ'' ಎಂದು ತಿರುಗೇಟು ಕೊಟ್ಟರು.

ಇದನ್ನೂ ಓದಿ:ನಾಳೆಯಿಂದ ಸಿಎಂ ರಾಜ್ಯ ಪ್ರವಾಸ: ರೋಡ್ ಶೋಗೆ ಸಿದ್ಧವಾಯ್ತು ಜಯವಾಹಿನಿ

ಇದನ್ನೂ ಓದಿ:ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪತ್ನಿ, ಮಗನಿಂದ ಭರ್ಜರಿ ಮತಬೇಟೆ

ABOUT THE AUTHOR

...view details