ಕರ್ನಾಟಕ

karnataka

ಅಬ್ಬಾ..ಇವನೆಂಥಾ ಕ್ರೂರಿ ತಂದೆ: ಆಸ್ತಿ ವಿವಾದದಲ್ಲಿ ಮಗನನ್ನೇ ಕೊಂದ ಅಪ್ಪ

By

Published : Oct 7, 2020, 4:57 PM IST

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅಲಗೌಡ ಚನ್ನಪ್ಪಾ ಅಂಜುರೆ ಎಂಬುವವರ ಮೇಲೆ ಚನ್ನಪ್ಪಾ ಎಂಬುವವರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

son murder from his father
ಅಬ್ಬಾ.. ಇವನೆಂತ ಕ್ರೂರಿ ತಂದೆ : ಆಸ್ತಿ ವಿವಾದದಲ್ಲಿ ಮಗನನ್ನೇ ಕೊಂದ ಅಪ್ಪ

ಚಿಕ್ಕೋಡಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಲಗಿದ್ದ ಮಗನನ್ನು ತಂದೆಯೊಬ್ಬ ತಲೆ ಮೇಲೆ ಕಲ್ಲು ಎತ್ತಿ ಹಾಕಿ, ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಖಣದಾಳ ಗ್ರಾಮದಲ್ಲಿ ನಡೆದಿದೆ.

ಅಬ್ಬಾ.. ಇವನೆಂಥಾ ಕ್ರೂರಿ ತಂದೆ : ಆಸ್ತಿ ವಿವಾದದಲ್ಲಿ ಮಗನನ್ನೇ ಕೊಂದ ಅಪ್ಪ

ಖಣದಾಳ ಗ್ರಾಮದ ಅಲಗೌಡ ಚನ್ನಪ್ಪಾ ಅಂಜುರೆ(38) ಕೊಲೆಯಾದ ವ್ಯಕ್ತಿ. ತಂದೆ ಚನ್ನಪ್ಪಾ ಹಾಗೂ ಮಗ ಅಲಗೌಡ ಚನ್ನಪ್ಪಾ ಅಂಜುರೆ ನಡುವೆ ಜಮೀನು ಹಾಗೂ ಹಣ ವಿಚಾರದಲ್ಲಿ ಮೇಲಿಂದ ಮೇಲೆ ಗಲಾಟೆ ನಡೆದಿದೆ. ನಂತರ ಗ್ರಾಮದ ಸಮ್ಮುಖದಲ್ಲಿ ರಾಜಿ ಸಂಧಾನ ಕೂಡ ನಡೆದಿದೆ.

ನಿನ್ನೆ ಮತ್ತೆ ಇಬ್ಬರ ನಡುವೆ ವಾದ ವಿವಾದ ಪ್ರಾರಂಭವಾಗಿದ್ದು, ಇಂದು ಬೆಳಗ್ಗೆ ಮಗ ಅಲಗೌಡ ಮಲಗಿದ್ದಾಗ ತಂದೆ ಚನ್ನಪ್ಪ ಅಂಜುರೆ ತಲೆಯ ಮೇಲೆ ಕಲ್ಲು ಹಾಕಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ತಂದೆ ಚನ್ನಪ್ಪ ಅಂಜುರೆಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details