ಕರ್ನಾಟಕ

karnataka

ಬೆಳಗಾವಿಯಲ್ಲಿ ವ್ಯಕ್ತಿ ಆತ್ಮಹತ್ಯೆ.. ಡೆತ್​ನೋಟ್​ನಲ್ಲಿ ಪ್ರಭಾವಿ ರಾಜಕಾರಣಿಯ ಆಪ್ತ, ಪಿಎಸ್​ಐ ವಿರುದ್ಧ ಆರೋಪ

By

Published : Sep 4, 2022, 3:50 PM IST

Updated : Sep 4, 2022, 4:11 PM IST

ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ. ಡೆತ್​ನೋಟ್​ನಲ್ಲಿ ಪ್ರಭಾವಿ ರಾಜಕಾರಣಿಯ ಆಪ್ತ ಪೃಥ್ವಿ ಸಿಂಗ್ ಮತ್ತು ಕ್ಯಾಂಪ್ ಪೊಲೀಸ್ ಠಾಣೆ ಪಿಎಸ್​ಐ ಹೆಸರು ಪ್ರಸ್ತಾಪಿಸಿದ್ದಾನೆ.

ಬೆಳಗಾವಿಯಲ್ಲಿ ಆತ್ಮಹತ್ಯೆ
ಬೆಳಗಾವಿಯಲ್ಲಿ ಆತ್ಮಹತ್ಯೆ

ಬೆಳಗಾವಿ: ಡೆತ್​ನೋಟ್ ಬರೆದಿತ್ತು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಹರು ನಗರದಲ್ಲಿ ನಡೆದಿದೆ. ತಾಲೂಕಿನ ಮಚ್ಛೆಯಯಲ್ಲಿರುವ ನೆಹರು ನಗರದ ನಿವಾಸಿ ಸಾವಿಯೋ ಪಿಳೈ (28) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಪ್ರಭಾವಿ ರಾಜಕಾರಣಿಯ ಆಪ್ತ ಮತ್ತು ಪೊಲೀಸರ ಕಿರುಕುಳಕ್ಕೆ ಬೇಸತ್ತಿರುವುದಾಗಿ ಡೆತ್​ನೋಟ್​ನಲ್ಲಿ ಮೃತ ವ್ಯಕ್ತಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಸಾವಿಯ ಪಿಳೈ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದನಂತೆ. ಇಬ್ಬರ ಮಧ್ಯೆ ಮನಸ್ತಾಪವಾಗಿ ಪ್ರಕರಣ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ಪ್ರಕರಣ ಸಂಬಂಧ ಪಿಎಸ್​ಐ, ಪೃಥ್ವಿ ಸಿಂಗ್ ಅವರು ಹಣ ನೀಡುವಂತೆ ಕಿರಕುಳ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

'ಪ್ರಭಾವಿ ರಾಜಕಾರಣಿಯ ಆಪ್ತ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಪೃಥ್ವಿ ಸಿಂಗ್ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿ 1.50ಲಕ್ಷ ಹಣ ಪಡೆದಿದ್ದರು. ಬಳಿಕ ಹೆಚ್ಚಿನ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು' ಎಂದು ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ‌ ಕುರಿತು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಬೇಡ ಬೇಡ ಎಂದು ಎಷ್ಟೇ ಕೂಗಿಕೊಂಡರು ತೊಟ್ಟಬೆಟ್ಟದಿಂದ ಹಾರಿ ವೃದ್ಧೆ ಆತ್ಮಹತ್ಯೆ)

Last Updated : Sep 4, 2022, 4:11 PM IST

ABOUT THE AUTHOR

...view details