ಕರ್ನಾಟಕ

karnataka

ನ್ಯಾ. ರಾಮಚಂದ್ರ ಡಿ. ಹುದ್ದಾರ ಸೇರಿದಂತೆ 8 ನ್ಯಾಯಾಧೀಶರ ವರ್ಗಾವಣೆ

By

Published : May 5, 2020, 10:15 PM IST

ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ತಮ್ಮ ಕಾರ್ಯ ದಕ್ಷತೆಗೆ ಹೆಸರುವಾಸಿಯಾಗಿದ್ದರು. ನ್ಯಾಯಾಲಯಕ್ಕೆ ಗೌರವ ತೋರದ, ಸಕಾಲದಲ್ಲಿ ವಿಚಾರಣೆಗೆ ಹಾಜರಾಗದ ಜನಪ್ರತಿನಿಧಿಗಳನ್ನು ಕೋರ್ಟ್ ಹೊರಗೆ ಗಂಟೆಗಟ್ಟಲೆ ಕೂರಿಸಿ ಬುದ್ಧಿ ಕಲಿಸಿದ್ದರು.

Transfers of 8 judges
8 ನ್ಯಾಯಾಧೀಶರ ವರ್ಗಾವಣೆ

ಬೆಂಗಳೂರು: ನಗರದ ಶಾಸಕರು‌‌ ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಸೇರಿದಂತೆ ಎಂಟು ಮಂದಿ ಜಿಲ್ಲಾ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶಿಸಿದೆ.

ಈ ಕುರಿತ ಅಧಿಸೂಚನೆಯನ್ನು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಮಿಕರ ಅವರು ಪ್ರಕಟಿಸಿದ್ದಾರೆ. ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದ ರಾಮಚಂದ್ರ ಡಿ. ಹುದ್ದಾರ ಅವರನ್ನು ಮೈಸೂರು ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿದ್ದ ಜಿ.ಬಸವರಾಜು ಅವರನ್ನು ಬೆಂಗಳೂರು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಹುದ್ದೆಗೆ ನಿಯೋಜಿಸಲಾಗಿದೆ.

ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ ಅವರು ತಮ್ಮ ಕಾರ್ಯ ದಕ್ಷತೆಗೆ ಹೆಸರುವಾಸಿಯಾಗಿದ್ದರು. ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಹಲವು ಶಾಸಕರು ಹಾಗೂ ಸಂಸದರಿಗೆ ಚಳಿ ಬಿಡಿಸಿದ್ದರು. ನ್ಯಾಯಾಲಯಕ್ಕೆ ಗೌರವ ತೋರದ, ಸಕಾಲದಲ್ಲಿ ವಿಚಾರಣೆಗೆ ಹಾಜರಾಗದ ಜನಪ್ರತಿನಿಧಿಗಳನ್ನು ಕೋರ್ಟ್ ಹೊರಗೆ ಗಂಟೆಗಟ್ಟಲೆ ಕೂರಿಸಿ ಬುದ್ಧಿ ಕಲಿಸಿದ್ದರು.

ABOUT THE AUTHOR

...view details