ಕರ್ನಾಟಕ

karnataka

ಲೋಕಸಭೆ ಸ್ಪೀಕರ್ ಜಂಟಿ ಸದನ ಉದ್ದೇಶಿಸಿ ಮಾತನಾಡಿದ್ದು ಹೊಸ ಪರಂಪರೆಯಲ್ಲ: ಸ್ಪೀಕರ್ ಕಾಗೇರಿ

By

Published : Sep 25, 2021, 2:31 PM IST

speaker-kageri

ಓಂ ಬಿರ್ಲಾ ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣವನ್ನ ಕಾಂಗ್ರೆಸ್ ಸದಸ್ಯರು ತಿರಸ್ಕರಿಸಿ ಸದನಕ್ಕೆ ಹಾಜರಾಗಿರಲಿಲ್ಲ. ಈ ಕುರಿತಂತೆ ಮಾತನಾಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್​​ನವರಿಗೆ ಮಾಹಿತಿ ಕೊರತೆ ಇದೆ. ಈ ರೀತಿ ನಡೆದಿರುವುದು ಹೊಸದಲ್ಲ. ಸಂವಿಧಾನ ಉಲ್ಲಂಘನೆಯೂ ಅಲ್ಲ ಎಂದಿದ್ದಾರೆ.

ಬೆಂಗಳೂರು: ಲೋಕಸಭೆ ಸ್ಪೀಕರ್ ಕಾರ್ಯಕ್ರಮ ಹೊಸ‌ ಪರಂಪರೆ ಅಲ್ಲ.‌ ಕಾಂಗ್ರೆಸ್​​​ಗೆ ಮಾಹಿತಿ ಕೊರತೆ ಇದೆ ಎಂದು ಸ್ಪೀಕರ್ ಕಾಗೇರಿ ತಿರುಗೇಟು ನೀಡಿದ್ದಾರೆ. ಜಂಟಿ ಸದನ ಸದಸ್ಯರನ್ನು ಉದ್ದೇಶಿಸಿ ಲೋಕಸಭೆ ಸ್ಪೀಕರ್ ಭಾಷಣ ಮಾಡಿರುವುದು ಸಂವಿಧಾನ ವಿರೋಧಿ ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಅವರು, ರಾಜ್ಯದ ಹಲವು ವಿಧಾನಸಭೆಗಳಲ್ಲಿ ಲೋಕಸಭೆ ಸ್ಪೀಕರ್ ಮಾತನಾಡಿದ್ದಾರೆ. ಇದು ಹೊಸ ಪರಂಪರೆಯಲ್ಲ ಎಂದಿದ್ದಾರೆ.

ಕಾಂಗ್ರೆಸ್ ಸದಸ್ಯರಿಗೆ ಬಹುಶಃ ಮಾಹಿತಿಯ ಕೊರತೆ ಇದೆ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸ್ಪೀಕರ್ ಹಾಗೂ ಸಭಾಪತಿ ಅಧಿಕಾರ ವ್ಯಾಪ್ತಿಯಾಗಿದೆ.‌ ಇಲ್ಲಿ ಬೇರೆಯವರ ಹಸ್ತಕ್ಷೇಪದ ಅಗತ್ಯವಿಲ್ಲ. ಸಂವಿಧಾನದ ಉಲ್ಲಂಘನೆ ಆಗಿದೆ ಅನ್ನುವವರು ಇನ್ನಷ್ಟು ಸಂವಿಧಾನದ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಲೋಕಸಭೆ ಸ್ಪೀಕರ್ ಜಂಟಿ ಸದನ ಉದ್ದೇಶಿಸಿ ಮಾತನಾಡಿದ್ದು ಹೊಸ ಪರಂಪರೆಯಲ್ಲ: ಸ್ಪೀಕರ್ ಕಾಗೇರಿ

2002 ಜೂನ್​ನಲ್ಲಿ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಅಂದಿನ ಸ್ಪೀಕರ್ ಮನೋಹರ್ ಜೋಶಿ‌ ಮಾತನಾಡಿದ್ದಾರೆ. ಅವತ್ತು ಎಸ್.ಎಂ ಕೃಷ್ಣ ಸಿಎಂ ಆಗಿದ್ದರು. ವಿಧಾನಸಭೆಯ ಸಭಾಂಗಣದಲ್ಲಿ ಆ ಕಾರ್ಯಕ್ರಮ ನಡೆದಿತ್ತು. ಅವರು ಮಾತನಾಡಿರೋದು ದಾಖಲೆ ಇದೆ. ಹಿಂದಿನ ಸ್ಪೀಕರ್ ಸುಮಿತ್ರ ಮಹಾಜನ್ ಅವರು ಗುಜರಾತ್ ಅಸೆಂಬ್ಲಿಯಲ್ಲಿ ಮಾತನಾಡಿದ್ದಾರೆ. ಇದು ಹೊಸದಲ್ಲ. ನಾನು ನಿನ್ನೆ ನಡೆದ ಕಾರ್ಯಕ್ರಮವನ್ನು ಅತಿ ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ಅದಕ್ಕೆ ನಾನು ಲೋಕಸಭೆ ಸ್ಪೀಕರ್ ಅನ್ನು ಅಭಿನಂದಿಸುತ್ತೇನೆ ಎಂದರು.

ಇದನ್ನೂ ಓದಿ:ಸದನದ ಗೌರವ ಹೆಚ್ಚಿಸುವುದು ಎಲ್ಲಾ ಪಕ್ಷಗಳ ಜವಾಬ್ದಾರಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ

ABOUT THE AUTHOR

...view details