ಕರ್ನಾಟಕ

karnataka

ಸುಡು ಬಿಸಿಲಿನಿಂದ 'ಬೆಂದ'ಕಾಳೂರಿಗೆ ತಂಪೆರೆದ ವರುಣ

By

Published : Apr 13, 2022, 5:04 PM IST

Updated : Apr 13, 2022, 5:21 PM IST

ಮಳೆ
ಮಳೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು ಸಹಿತ ಜೋರು ಮಳೆ ಸುರಿದಿದೆ. ಕಳೆದೆರಡು ತಿಂಗಳಿನಿಂದ ನೆತ್ತಿ ಸುಡುವಂತಹ ಬಿಸಿಲಿಗೆ ಕಾದ ಹಂಚಾಗಿದ್ದ ನಗರಕ್ಕೆ ವರುಣ ತಂಪೆರೆದಿದ್ದಾನೆ.

ಬೆಂಗಳೂರು:ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಇಂದು ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆ ಸುರಿದಿದೆ. ನಗರದ ಹಲವು ಭಾಗಗಳಲ್ಲಿ ಸಂಜೆ 4ರ ನಂತರ ಮಳೆ ಪ್ರಾರಂಭವಾಗಿದೆ. ಕೆಲವು ರಸ್ತೆ ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.

ಆರ್.ಆರ್.ನಗರ, ಅಂಜನಾಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೆಸ್ ಗುಟ್ಟಹಳ್ಳಿ, ಮಲ್ಲೇಶ್ವರಂ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಪೀಠ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.


ಪ್ರಮುಖ ರಸ್ತೆಗಳಲ್ಲಿ ನೀರು: ಜಡಿಮಳೆಗೆ ಮಲ್ಲೇಶ್ವರಂ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೆಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು ಕಂಡು ಬಂತು.

ಟೆಂಡರ್ ಶೂರ್ ಕಾಮಗಾರಿ ಸ್ಥಳಗಳಲ್ಲಿ ನೀರು:ಟೆಂಡರ್ ಶೂರ್ ಕಾಮಗಾರಿಗಳು ಮತ್ತು ಪಾಲಿಕೆಯ ವಿವಿಧ ಅಭಿವೃದ್ಧಿ ಕೆಲಸದ ಸ್ಥಳಗಳಲ್ಲಿ ನೀರು ನಿಂತಿತ್ತು. ಇದರಿಂದ ಟ್ರಾಫಿಕ್ ಸಮಸ್ಯೆ ಉದ್ಭವಿಸಿತು.

ಇದನ್ನೂ ಓದಿ:ಸಾರಿಗೆ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ: ಏ.15ರಿಂದ ಪ್ರಕ್ರಿಯೆ ಶುರು

Last Updated :Apr 13, 2022, 5:21 PM IST

ABOUT THE AUTHOR

...view details