ಕರ್ನಾಟಕ

karnataka

2023ರ ಜೂನ್ ಒಳಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ: ಸಚಿವ ಸೋಮಣ್ಣ

By

Published : Sep 14, 2022, 5:20 PM IST

Updated : Sep 14, 2022, 6:04 PM IST

2022ರ ಡಿಸೆಂಬರ್ ವೇಳೆಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ ಮಾಡುವ ಭರವಸೆ ನೀಡಲಾಗಿತ್ತಾದರೂ ಕೆಲ ಕಾರಣದಿಂದ ವಿಳಂಬವಾಗುತ್ತಿದೆ. ಈಗಾಗಲೇ 220 ಕೋಟಿ ವೆಚ್ಚದಲ್ಲಿ 727 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.

discussion-on-vijayapura-airport-in-council-session
2023ರ ಜೂನ್ ಒಳಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ: ಸೋಮಣ್ಣ

ಬೆಂಗಳೂರು:2023ರ ಜೂನ್ ಒಳಗೆ ನಿಶ್ಚಿತವಾಗಿ ವಿಜಯಪುರ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಾಗುತ್ತದೆ ಎಂದು ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಸಚಿವರು ಉತ್ತರಿಸಿದರು.

2022ರ ಡಿಸೆಂಬರ್ ವೇಳೆಗೆ ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ ಮಾಡುವ ಭರವಸೆ ನೀಡಲಾಗಿತ್ತಾದರೂ ಕೆಲ ಕಾರಣದಿಂದ ವಿಳಂಬವಾಗುತ್ತಿದೆ. ಈಗಾಗಲೇ ವಿಜಯಪುರ ವಿಮಾನ ನಿಲ್ದಾಣಕ್ಕೆ 220 ಕೋಟಿ ವೆಚ್ಚದಲ್ಲಿ 727 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದೆ. 63.76 ಕೋಟಿ ಹಣವನ್ನು ಜಮೀನಿನವರಿಗೆ ಕೊಡಲಾಗಿದೆ. ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ರಾತ್ರಿ ಲ್ಯಾಂಡಿಂಗ್ ವ್ಯವಸ್ಥೆಗೂ ಚಿಂತನೆ ಮಾಡಿ ಕ್ರಮ ವಹಿಸಲಾಗಿದೆ,‌ ರನ್ ವೇ ಕಾಮಗಾರಿ ಮುಗಿದಿದೆ ಎಂದರು.

ಇದೇ ತಿಂಗಳ 27-28ಕ್ಕೆ ವಿಜಯಪುರಕ್ಕೆ ಬರಲಿದ್ದೇನೆ. ಸ್ಥಳ ಪರಿಶೀಲಿಸೋಣ, ನಮಗೆ ಮಾಹಿತಿ ತಪ್ಪು ಕೊಟ್ಟಿದ್ದರೆ ನಾನು ಸಹಿಸಲ್ಲ. ಡಿಸೆಂಬರ್ ಒಳಗೆ ಮಾಡುವ ಘೋಷಣೆ ಮಾಡಿದ್ದೆ. ಆದರೆ ತಾಂತ್ರಿಕ ಕಾರಣದಿಂದ ಸ್ವಲ್ಪ ವಿಳಂಬವಾಗುತ್ತಿದೆ. ಹಾಗಾಗಿ 2023ರ ಜೂನ್ ಒಳಗೆ ಲೋಕಾರ್ಪಣೆ ಮಾಡಬೇಕು ಎನ್ನುವ ಚಿಂತನೆ ಇದೆ. ಅದರಂತೆ ಜೂನ್​​ 2023ರ ಒಳಗೆ ಮುಗಿಸಲಿದ್ದೇವೆ. ಇದಕ್ಕೆ ಹಣಕಾಸು ತೊಂದರೆ ಇಲ್ಲ. ಅದರಂತೆ ರಾಯಚೂರಿನ ವಿಮಾನ ನಿಲ್ದಾಣ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಿದ್ದೇವೆ. ಹಾಸನಕ್ಕೂ ಮೊದಲ ಹಂತದ ಹಣ ಬಿಡುಗಡೆ ಆಗಿದೆ ಎಂದರು.

ಸಚಿವ ವಿ.ಸೋಮಣ್ಣ ಭರವಸೆ

60 ಕಿ.ಮೀ.ಗೂ ಕಡಿಮೆ ಅಂತರದ ಟೋಲ್ ತೆರವು:60 ಕಿಲೋಮೀಟರ್ ಅಂತರದ ನಡುವೆ ಇರುವ ಟೋಲ್ ಪ್ಲಾಜಾಗಳನ್ನು ತೆರವುಗೊಳಿಸುವ ಸಂಬಂಧ ಕೇಂದ್ರ ಹೆದ್ದಾರಿ ಪ್ರಾಧಿಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ಇಂತಹ ಟೋಲ್ ಬೂತ್​​ಗಳನ್ನು ತೆರವು ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ತಿಳಿಸಿದ್ದಾರೆ.

ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯ ವ್ಯಾಪ್ತಿಯಲ್ಲಿ 60 ಕಿ.ಮೀ ಒಳೆಗೆ 18 ಟೋಲ್ ಪ್ಲಾಜಾಗಳಿವೆ. ಕೇಂದ್ರದ ನಿಯಮದಂತೆ ಅವುಗಳನ್ನು ತೆರವು ಮಾಡಬೇಕಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರಲಿದ್ದು, ಹೆದ್ದಾರಿ ಸಚಿವಾಲಯದ ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಿ ಅವುಗಳ ತೆರವಿಗೆ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಅವುಗಳನ್ನು ತೆರವು ಮಾಡಲಾಗುತ್ತದೆ ಎಂದರು.

ಕೆಲವೊಂದು ಟೋಲ್​ನಲ್ಲಿ ವಿಐಪಿಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಅದನ್ನು ಸರಿಪಡಿಸಲು ಕ್ರಮ ವಹಿಸಲಾಗುತ್ತದೆ. ಪೊಲೀಸ್, ಆ್ಯಂಬುಲೆನ್ಸ್, ವಿಐಪಿ ಲೇನ್ ಖಾಲಿ ಬಿಟ್ಟರೆ ಜನರೇ ಹೋಗಲಿದ್ದಾರೆ. ಹಾಗಾಗಿ ಅದನ್ನು ಓಪನ್ ಇಡಲಾಗುವುದಿಲ್ಲ. ಆದರೆ ಅಲ್ಲಿನ ಗೇಟ್​ನ ನಿರ್ವಹಣೆ ಮಾಡುವವರು ದುರ್ವರ್ತನೆ ಮಾಡದಂತೆ ಸೂಚನೆ ನೀಡಲಾಗುತ್ತದೆ. ವಿಐಪಿ ವಾಹನಗಳನ್ನು ಸ್ಮೂತ್ ಪಾಸ್ ಮಾಡಲು ಪತ್ರ ಬರೆಯುತ್ತೇನೆ ಎಂದರು.

ಇದನ್ನೂ ಓದಿ:ಸದನದಲ್ಲಿ ಗಂಗಾ ಕಲ್ಯಾಣ ಯೋಜನೆ ಪ್ರತಿಧ್ವನಿ: ಆಡಳಿತ, ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ

Last Updated :Sep 14, 2022, 6:04 PM IST

ABOUT THE AUTHOR

...view details