ಕರ್ನಾಟಕ

karnataka

ಮಾರುಕಟ್ಟೆಗಳಲ್ಲಿ ಸಂಕ್ರಾಂತಿ ವ್ಯಾಪಾರ: ಬೆಲೆ ಏರಿಕೆ ಬಿಸಿಗೆ ಗ್ರಾಹಕರು ಕಂಗಾಲು

By

Published : Jan 13, 2022, 8:37 PM IST

customers-shock-over-price-rise-in-bengaluru-market
ಮಾರುಕಟ್ಟೆಯಲ್ಲಿ ಸಂಕ್ರಾಂತಿ ವ್ಯಾಪಾರ ()

'ಕೋವಿಡ್ ಇದ್ದರೂ ಹಬ್ಬ ಮನೆಯಲ್ಲೇ ಚೆನ್ನಾಗಿ ಆಚರಿಸುತ್ತೇವೆ. ಆದರೆ, ಎಲ್ಲ ಬೆಲೆಗಳು ದುಬಾರಿ ಆಗಿವೆ. ಮಾರುಕಟ್ಟೆ 1000 ರೂಪಾಯಿ ತಂದರೂ ಬರೀ ಹೂವಿಗೇ ಸಾಕಾಗುತ್ತದೆ' ಎಂದು ಗ್ರಾಹಕಿಯೊಬ್ಬರು ನಿಟ್ಟುಸಿರುಬಿಟ್ಟರು.

ಬೆಂಗಳೂರು: 'ಅಯ್ಯೋ 1000 ರೂಪಾಯಿ‌ ತಂದರೂ ಬರೀ ಹೂವಿಗೇ ಸಾಕಾಗುತ್ತೆ...' ಇದು ಸಂಕ್ರಾಂತಿ ಶಾಪಿಂಗ್​ಗಾಗಿ ಮಾರುಕಟ್ಟೆಗಳಿಗೆ ಬಂದ ಗ್ರಾಹಕರ ಉದ್ಘಾರ.

ಒಂದೆಡೆ, ವ್ಯಾಪಾರಿಗಳಿಗೆ ವೀಕೆಂಡ್ ಕರ್ಫ್ಯೂ ತಲೆಬಿಸಿ. ಮತ್ತೊಂದೆಡೆ, ಗ್ರಾಹಕರಿಗೆ ಬೆಲೆ ಏರಿಕೆ ನಡುವೆಯೂ ಸಂಕ್ರಾಂತಿ ಹಬ್ಬದ ಸಂಭ್ರಮ. ಆದ್ರೆ, ಮಾರುಕಟ್ಟೆಯಲ್ಲಿ ರಾಶಿ ರಾಶಿ ಕಬ್ಬು, ಬಾಳೆದಿಂಡು, ಅರಿಶಿನದ ಗಿಡಗಳು, ಕಡಲೆಕಾಯಿಯ ರಾಶಿ ಎಲ್ಲವೂ ಇದೆ.

ಬಹಳಷ್ಟು ಗ್ರಾಹಕರು ಕೋವಿಡ್ ಭಯದಿಂದ ಆನ್​ಲೈನ್​ ವ್ಯಾಪಾರಕ್ಕೆ ಮುಂದಾಗಿದ್ದಾರೆ. ತರಕಾರಿ, ಹಣ್ಣಿನ ಬೆಲೆಗಳು ಯಥಾಸ್ಥಿತಿಯಲ್ಲಿವೆ. ಆದರೆ, ಹೂವು ಹಾಗು ಪೂಜಾ ಸಾಮಗ್ರಿಗಳ ಬೆಲೆಗಳು ಮಾತ್ರ ಗಗನಮುಖಿಯಾಗಿವೆ. ಶನಿವಾರ ಸಂಕ್ರಾಂತಿಯಾದರೂ ಅದೇ ದಿನ ವೀಕೆಂಡ್ ಕರ್ಫ್ಯೂ ಇರುವುದರಿಂದ ಈ ವಾರದ ಆರಂಭದಿಂದಲೇ ನಗರದ ಹೊರಭಾಗದಿಂದ ಕಬ್ಬು, ಕಡಲೆಕಾಯಿ, ಅವರೆಕಾಯಿ, ಗೆಣಸು ಮಾರುಕಟ್ಟೆಗಳಿಗೆ ಬಂದಿದೆ.

ಗ್ರಾಹಕಿ ಶಾಂತಿ ರಾಜಶೇಖರ್ ಮಾತನಾಡಿ, 'ಕೋವಿಡ್ ಇದ್ದರೂ ಹಬ್ಬವನ್ನು ಮನೆಯಲ್ಲೇ ಚೆನ್ನಾಗಿ ಆಚರಿಸುತ್ತೇವೆ. ಆದರೆ, ಬೆಲೆ ದುಬಾರಿ ಆಗಿದೆ. ಸಾವಿರ ರೂಪಾಯಿ ತಂದರೂ ಬರೀ ಹೂವಿಗೇ ಸಾಕಾಗುತ್ತದೆ' ಎಂದು ನಿಟ್ಟುಸಿರುಬಿಟ್ಟರು.

ವ್ಯಾಪಾರಿ ಲೀಲಾವತಿ ಪ್ರತಿಕ್ರಿಯಿಸಿ, 'ವೈಕುಂಠ ಏಕಾದಶಿ, ಸಂಕ್ರಾಂತಿ ಇದ್ದರೂ ವ್ಯಾಪಾರ ನಿರೀಕ್ಷಿತ ಮಟ್ಟದಲ್ಲಿ ಆಗ್ತಿಲ್ಲ. ಎಲ್ಲರೂ ಕೊರೊನಾ ಅಂತ ಹಿಂದೇಟು ಹಾಕುತ್ತಿದ್ದಾರೆ' ಎಂದು ತಿಳಿಸಿದರು.

ಇನ್ನು ಬೆಲೆಗಳನ್ನು ನೋಡುವುದಾದರೆ..

ಜೋಡಿ ಕಬ್ಬು- 150 ರೂ
ಬಾಳೆಎಲೆ-(2) -10 ರೂ
ಬಾಳೆದಿಂಡು- 40 ರೂ
ಅರಶಿನಗಿಡ- 100 ರೂ
ಕುಂಬಳಕಾಯಿ- ಕೆಜಿ- 60 ರೂ
ಕಡ್ಲೆಕಾಯಿ -120. ರೂ

ಹೂವು

ಮಲ್ಲಿಗೆ ಮೊಳ - 60 ರೂ
ಕಾಕಡ- 40 ರೂ
ಕನಕಾಂಬರ ಮಾರು -50 ರೂ
ಕಣಗಿಲೆ- 50 ರೂ
ಮೊಗ್ಗು -1600 ರೂ
ಸುಗಂಧ- 80 ರೂ
ಮಲ್ಲಿಗೆ ಹಾರ- 600 ರೂ ಆರಂಭ
ತಾವರೆ- 20 ರೂ
ಸೇವಂತಿಗೆ- 300 ರೂ.
ಗುಲಾಬಿ- 300

ತರಕಾರಿ

ಟೊಮೆಟೋ- 30
ಬದನೆ -60
ಕ್ಯಾರೆಟ್ -80
ಕ್ಯಾಬೆಜ್ -40
ಕ್ಯಾಪ್ಸಿಕಮ್ -80
ಹೂಕೋಸು -50
ಬೀನ್ಸ್- 80
ಮೂಲಂಗಿ- 60

ಹಣ್ಣುಗಳು

ಆಪಲ್ - 160 ರಿಂದ 200

ಮೂಸಂಬಿ -100

ಆರೆಂಜ್ -90

ಚಿಕ್ಕು- 60

ದಾಳಿಂಬೆ -160

ದ್ರಾಕ್ಷಿ- 160 ರಿಂದ 200

ಬಾಳೆಹಣ್ಣು- 25- 30

ಇದನ್ನೂ ಓದಿ:ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ.. ಅಂದಿನಿಂದ ಇಂದಿನವರೆಗೆ ಏನೆಲ್ಲಾ ಬೆಳವಣಿಗೆ..!

ABOUT THE AUTHOR

...view details