ಕರ್ನಾಟಕ

karnataka

ಡಿ.10ರ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ: ಬಸನಗೌಡ ಪಾಟೀಲ್ ಹೊಸ ಬಾಂಬ್​​​

By

Published : Dec 2, 2021, 9:36 PM IST

Updated : Dec 2, 2021, 10:59 PM IST

Basanagouda Patil predict on state politics

ಶಾಸಕ ಬಸನಗೌಡ ಪಾಟೀಲ ಯತ್ನಾಳ್​​ ರಾಜ್ಯ ರಾಜಕೀಯದ ಬಗ್ಗೆ ದೇವನಹಳ್ಳಿಯಲ್ಲಿ ಭವಿಷ್ಯ ನುಡಿದಿದ್ದಾರೆ.

ದೇವನಹಳ್ಳಿ: ಕೆಲವು ಸಚಿವರು ಕೆಲಸ ಮಾಡುವುದಿಲ್ಲ. ವಿಧಾನಸೌಧಕ್ಕೆ ಬರುವುದಿಲ್ಲ. ಶಾಸಕರಿಗೆ ಅಪಾಯಿಂಟ್ ಮೆಂಟ್ ಕೊಡುವುದಿಲ್ಲ. ಕೆಲವು ಮಂತ್ರಿಗಳು ತಾವು ಶಾಶ್ವತವಾಗಿ ಮಂತ್ರಿಗಳೇ ಆಗಿರುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಕೂಡಲೇ ಸಚಿವ ಸಂಪುಟ ಪುನರ್ ರಚಿಸಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಒತ್ತಾಯಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬದಲು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಕ್ಕೆ ಹಾಗೂ ಅನುದಾನ ಹಂಚಿಕೆ ಬಿಡುಗಡೆ ವಿಚಾರದಲ್ಲಿ ಹಲವು ಶಾಸಕರಿಗೆ ಅಸಮಾಧಾನ ಇದೆ. ಅಧಿವೇಶನ ಮುಗಿದ ಬಳಿಕ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಹಣ ಕೊಡದಿದ್ದರೆ ಸಿಎಂ ಬೊಮ್ಮಾಯಿ ಮೇಲೆ ಮತ್ತಷ್ಟು ಅಸಮಾಧಾನ ಹೆಚ್ಚಾಗಲಿದೆ ಎಂದರು.

ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ಪುನಾರಚನೆಯಾಗಬೇಕು . ಕೆಲಸ ಮಾಡದ ಹಾಗೂ ಗಂಭೀರ ಆರೋಪ ಇರುವ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು. ಸಿಎಂ ಹಾಗೂ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಶೀಲನೆ ಮಾಡಬೇಕಿದೆ. ಡಿ.10ರ ನಂತರ ಕರ್ನಾಟಕದಲ್ಲಿ ಬಹಳ ದೊಡ್ಡ ಬದಲಾವಣೆ ಆಗಲಿದೆ ಎಂದು ಹೊಸ ಬಾಂಬ್​ ಹಾಕಿದರು.

ಸಿಎಂ ಬೊಮ್ಮಾಯಿ ಅವರು ಸಚಿವ ಸಂಪುಟ ಪುನಾರಚನೆ ಮಾಡುವ ಮುನ್ನ ಎಲ್ಲಾ ಶಾಸಕರ ಅಭಿಪ್ರಾಯ ತೆಗೆದುಕೊಳ್ಳಬೇಕು. ವಾರ ಅಥವಾ 15 ದಿನಕ್ಕೊಮ್ಮೆ ಮಂತ್ರಿಗಳ ಕಾರ್ಯ ವೈಖರಿ ಪರಿಶೀಲಸಬೇಕು. ಸಿಎಂ ಅವರ ಕೆಲಸ ಮಾಡಲಿ, ಮಂತ್ರಿಗಳು ತಮ್ಮ ಕೆಲಸ ಮಾಡಲಿ, ಸಚಿವರು ಜಿಲ್ಲೆಗಳಿಗೆ ಹೋಗಿ ಕೆಲಸ ಮಾಡಿಲ್ಲ ಅಂದ್ರೆ ಮುಂದೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಒಮಿಕ್ರೋನ್ ಸೋಂಕಿತನ ಸಂಪರ್ಕದಲ್ಲಿದ್ದ ಐವರಿಗೆ ಕೋವಿಡ್​​..ರೂಪಾಂತರಿ ತಗುಲಿರುವ ಆತಂಕ

Last Updated :Dec 2, 2021, 10:59 PM IST

ABOUT THE AUTHOR

...view details