ETV Bharat / state

ನೇಹಾ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು: ರಂಭಾಪುರಿ ಶ್ರೀ ಆಗ್ರಹ - Neha Hiremath Murder Case - NEHA HIREMATH MURDER CASE

ನೇಹಾ ಹಿರೇಮಠ ಕೊಲೆ ಪ್ರಕರಣನ್ನು ಸಿಬಿಐಗೆ ವಹಿಸಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದರು.

NEHA HIREMATH MURDER CASE  Dharwad  RAMBHAPURI SHREE
ನೇಹಾಳ ಹಿರೇಮಠ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು: ರಂಭಾಪುರಿ ಶ್ರೀಗಳ ಆಗ್ರಹ
author img

By ETV Bharat Karnataka Team

Published : April 28, 2024 at 2:16 PM IST

1 Min Read
ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯೆ

ಹುಬ್ಬಳ್ಳಿ: ''ನೇಹಾ ಹಿರೇಮಠ ಹತ್ಯೆ ಖಂಡನೀಯ. ಇಂತಹ ಕೃತ್ಯ ಮಾಡಿದವನಿಗೆ ತಕ್ಕ ಶಿಕ್ಷೆ ನೀಡಬೇಕು'' ಎಂದು ರಂಭಾಪುರಿ ಶ್ರೀಗಳು ಒತ್ತಾಯಿಸಿದ್ದಾರೆ. ಇಂದು ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಭೇಟಿ‌ ನೀಡಿದ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು‌.

ಬಳಿಕ ಮಾಧ್ಯಮದ ಜೊತೆಗೆ ಮಾತನಾಡುತ್ತಾ, ''ಇಂತಹ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಆ ದುಷ್ಟ ವ್ಯಕ್ತಿಗೆ ಗಲ್ಲು ಶಿಕ್ಷೆಯಾಗಬೇಕು. ಈ ನೋವು ಮರೆಯಲು ನಿರಂಜನ ಕುಟುಂಬಕ್ಕೆ ಆಗುತ್ತಿಲ್ಲ. ಸರ್ಕಾರ ಈಗಾಗಲೇ ಸಿಐಡಿಗೆ ಈ‌ ಪ್ರಕರಣವನ್ನು ಹಸ್ತಾಂತರಿಸಿದೆ.‌ ಆದರೆ, ಸಿಐಡಿಗೆ ಕೊಟ್ಟಿರುವುದು ನಮಗೆ ಸಮಂಜಸವಾಗಿಲ್ಲ. ಯಾಕೆಂದರೆ, ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.‌ ಹಾಗಾಗಿ ಸಿಬಿಐಗೆ ವಹಿಸಬೇಕೆಂದು ಒತ್ತಾಯ ಮಾಡ್ತೀವಿ'' ಎಂದರು.

''ಯಾವುದೋ ಒಂದು ಸಮುದಾಯದ ತುಷ್ಟೀಕರಣ ಮಾಡಬಾರದು. ಎಲ್ಲ ರಾಜಕಾರಣಿಗಳು ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಈ ಕೇಸ್ ಅ​ನ್ನು ಆದಷ್ಟು ಬೇಗನೆ ಮುಗಿಸಿ ನ್ಯಾಯ ಕೊಡಿಸುವ ಕೆಲಸವಾಗಬೇಕು. ಒಂದು ವೇಳೆ ನ್ಯಾಯ ಸಿಗದಿದ್ದರೆ ಎಲ್ಲಾ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತೇವೆ'' ಎಂದು ಹೇಳಿದರು.

''ಈಗಾಗಲೇ ಸಿಎಂ ಸೇರಿದಂತೆ ಹಲವು ರಾಜಕೀಯ ನಾಯಕರು ಬಂದು ಸಾಂತ್ವನ ಹೇಳಿದ್ದಾರೆ.‌ ನಿರಂಜನ ಕೂಡ ರಾಜಕೀಯವಾಗಿ ಸಾಮಾಜಿಕವಾಗಿ ಇರುವವರು. ಈಗಾಗಲೇ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಕೂಡ ಆಗಿದ್ದಾರೆ.‌ ಹಾಗಾಗಿ ಇದರಲ್ಲಿ ಯಾರೂ ರಾಜಕೀಯ ಮಾಡಬಾರದು. ಯಾವುದೇ ಜಾತಿ ಭೇದ ಮಾಡದೇ ನೇಹಾ ಆತ್ಮಕ್ಕೆ ಶಾಂತಿ‌ ಕೊಡಿಸಬೇಕು'' ಎಂದು ಮನವಿ ಮಾಡಿದರು.

ರಂಭಾಪುರಿ ಶ್ರೀಗಳ ಪಾದಪೂಜೆ: ನಿರಂಜನಯ್ಯ ಹಿರೇಮಠ ದಂಪತಿ ಶ್ರೀಗಳ ಪಾದಪೂಜೆ ಮಾಡಿದರು. ಬಳಿಕ ಕುಟುಂಬಸ್ಥರ ನೋವು ಆಲಿಸಿದ ಶ್ರೀಗಳು, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಇದನ್ನೂ ಓದಿ: ಬರ ಪರಿಹಾರ: ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್​ ನಾಯಕರ ಪ್ರತಿಭಟನೆ - Congress Protest

ETV Bharat Logo

Copyright © 2025 Ushodaya Enterprises Pvt. Ltd., All Rights Reserved.