ಕರ್ನಾಟಕ

karnataka

ದೇವನಹಳ್ಳಿ ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಬೇಟೆ.. ಸ್ಮಗ್ಲರ್ ಹೊಟ್ಟೆಯಿಂದ ಹೊರಬಿತ್ತು 13 ಕೋಟಿ ಮೌಲ್ಯದ ಕೊಕೇನ್ ಕ್ಯಾಪ್ಸುಲ್ಸ್​

By

Published : Sep 24, 2022, 10:00 AM IST

ಇಥಿಯೋಪಿಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಇಂಟಲಿಜೆನ್ಸ್ ಯುನಿಟ್ (CIU) ಅಧಿಕಾರಿಗಳು ಸಂಶಯಗೊಂಡು ತಪಾಸಣೆ ನಡೆಸಿದಾಗ ಆತನ ಕಿಬ್ಬೊಟ್ಟೆಯಲ್ಲಿ 13.6 ಕೋಟಿ ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್​ಗಳು ಇರುವುದು ಪತ್ತೆಯಾಗಿದೆ.

cocaine capsules
ಕೊಕೇನ್ ಕ್ಯಾಪ್ಸುಲ್​ಗಳು

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): 104 ಕೊಕೇನ್ ಕ್ಯಾಪ್ಸುಲ್​ಗಳನ್ನು ನುಂಗಿ ಮಾದಕ ವಸ್ತು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಜೊತೆಗೆ ಆತನ ಹೊಟ್ಟೆಯಲ್ಲಿದ್ದ ಬರೋಬ್ಬರಿ 13.6 ಕೋಟಿ ಮೌಲ್ಯದ 104 ಕೊಕೇನ್ ಕ್ಯಾಪ್ಸುಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ಸೋಮವಾರ ಇಥಿಯೋಪಿಯದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಇಂಟಲಿಜೆನ್ಸ್ ಯುನಿಟ್(CIU) ಅಧಿಕಾರಿಗಳು ಸಂಶಯಗೊಂಡು ವಿಚಾರಣೆ ನಡೆಸಿದ್ದಾಗ ಮಾದಕ ದ್ರವ್ಯ ಕಳ್ಳಸಾಗಾಣಿಕೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ದೇವನಹಳ್ಳಿ: ಪಾರ್ಸಲ್ ಬ್ಯಾಗ್ ಪರಿಶೀಲಿಸಿದಾಗ ಸಿಕ್ತು 20 ಲಕ್ಷ ರೂ.ಮೌಲ್ಯದ ಡ್ರಗ್ಸ್!​

ಬಂಧಿತ ವ್ಯಕ್ತಿ ಘಾನದಬಾಹ್ ಅಂಪಾಡು ಕ್ವಾಡ್ವೋ (53) ಎಂದು ಗುರುತಿಸಲಾಗಿದೆ. ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯನ್ ಏರ್​ಲೈನ್ಸ್​ ಫ್ಲೈಟ್ ET 690 ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ.

ಸಂಶಯದ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದಕೀಯ ತಪಾಸಣೆ ನಡೆಸಿದಾಗ ಆತನ ಕಿಬ್ಬೊಟ್ಟೆಯಲ್ಲಿ ಕ್ಯಾಪ್ಸುಲ್​ಗಳನ್ನು ತೋರಿಸಿದೆ. ಬಹಳ ಎಚ್ಚರಿಕೆಯಿಂದ 104 ಕ್ಯಾಪ್ಸುಲ್​ಗಳನ್ನು ಹೊರಗೆ ತೆಗೆಯಲಾಗಿದೆ. ಮೂರು ದಿನದೊಳಗೆ ಕ್ಯಾಪ್ಸುಲ್​ಗಳನ್ನು ಹೊರಗೆ ತೆಗೆಯದಿದ್ದಲ್ಲಿ ಆತನ ಜೀವಕ್ಕೆ ಅಪಾಯ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ..

ಆರೋಪಿಯಿಂದ ಒಟ್ಟು 1.2 ಕೆಜಿಯ 104 ಕ್ಯಾಪ್ಸುಲ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 13.6 ಕೋಟಿ ಎಂದು ಅಂದಾಜಿಸಲಾಗಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ABOUT THE AUTHOR

...view details