ಕರ್ನಾಟಕ

karnataka

ಏಷ್ಯಾ ಕಪ್ ಟೂರ್ನಿಯಿಂದ ಆಲ್​ರೌಂಡರ್ ರವೀಂದ್ರ ಜಡೇಜಾ ಔಟ್​

By

Published : Sep 2, 2022, 7:12 PM IST

ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಶೀಘ್ರವೇ ದುಬೈನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ravindra-jadeja-out-asia-cup-with-knee-injury
ಏಷ್ಯಾ ಕಪ್ ಟೂರ್ನಿಯಿಂದ ಆಲ್​ರೌಂಡರ್ ರವೀಂದ್ರ ಜಡೇಜಾ ಔಟ್​

ದುಬೈ/ನವದೆಹಲಿ:ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್​ ಟಿ - 20 ಟೂರ್ನಿಯಿಂದ ಟೀಂ ಇಂಡಿಯಾದ ಆಲ್​ರೌಂಡರ್ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಬಲಗಾಲಿನ ಗಾಯದ ಕಾರಣದಿಂದ ಜಡೇಜಾ ಏಷ್ಯಾ ಕಪ್​ನ ಉಳಿದ ಪಂದ್ಯಗಳಿಗೆ ಲಭ್ಯವಾಗುವುದಿಲ್ಲ. ಇವರ ಸ್ಥಾನವನ್ನು ಅಕ್ಷರ್ ಪಟೇಲ್ ತುಂಬಲಿದ್ದಾರೆ ಎಂದು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.

ಏಷ್ಯಾ ಕಪ್​ ಟೂರ್ನಿಯ ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ವಿರುದ್ಧದ ಎರಡೂ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಅಲ್ಲದೇ, ಎರಡು ಪಂದ್ಯಗಳ ಗೆಲುವಿನಲ್ಲೂ ಪ್ರಮುಖ ಪಾತ್ರವನ್ನೂ ವಹಿಸಿದ್ದರು. ಆದರೆ, ಅವರಿಗೆ ಮೊಣಕಾಲಿಗೆ ಗಾಯವಾಗಿದ್ದು, ಈಗ ಟೂರ್ನಿ ಮಧ್ಯದಲ್ಲೇ ತಂಡದಿಂದ ನಿರ್ಮಿಸುವಂತೆ ಆಗಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಪ್ರಸ್ತುತ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ಹೆಸರಿಸಿದೆ. ರವೀಂದ್ರ ಜಡೇಜಾ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದು, ಟೂರ್ನಿಯಿಂದ ಹೊರಗುಳಿದಿದ್ದಾರೆ. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿಸಿದೆ.

ಅಲ್ಲದೇ, ಜಡೇಜಾ ಅವರ ಬದಲಿಗೆ ಅಕ್ಷರ್ ಪಟೇಲ್ ಅವರನ್ನು ತಂಡದಲ್ಲಿ ಸ್ಟ್ಯಾಂಡ್‌ಬೈಗಳಲ್ಲಿ ಒಬ್ಬರೆಂದು ಹೆಸರಿಸಲಾಗಿತ್ತು. ಶೀಘ್ರವೇ ದುಬೈನಲ್ಲಿ ತಂಡವನ್ನು ಅಕ್ಷರ್ ಪಟೇಲ್ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಇನ್ನು, ಏಷ್ಯಾ ಕಪ್​ನಲ್ಲಿ ಟೀಂ ಇಂಡಿಯಾ ಈಗಾಗಲೇ ನೇರವಾಗಿ ಸೂಪರ್‌ ಫೋರ್​ಗೆ ಲಗ್ಗೆ ಇಟ್ಟಿದ್ದು,ಎರಡನೇ ಸುತ್ತಿನ ಮೊದಲ ಪಂದ್ಯವು ಸೆಪ್ಟೆಂಬರ್ 4ರಂದು ನಡೆಯಲಿದೆ.

ಇದನ್ನೂ ಓದಿ:ಏಷ್ಯಾ ಕಪ್: 40 ರನ್​​ಗಳಿಂದ ಗೆದ್ದ ಟೀಂ ಇಂಡಿಯಾ ಸೂಪರ್‌ ಫೋರ್​ಗೆ ಲಗ್ಗೆ

ABOUT THE AUTHOR

...view details