ETV Bharat / sports

ಏಷ್ಯಾ ಕಪ್: 40 ರನ್​​ಗಳಿಂದ ಗೆದ್ದ ಟೀಂ ಇಂಡಿಯಾ ಸೂಪರ್‌ ಫೋರ್​ಗೆ ಲಗ್ಗೆ

author img

By

Published : Aug 31, 2022, 11:05 PM IST

ಹಾಂಗ್‌ ಕಾಂಗ್‌ ತಂಡ 5 ವಿಕೆಟ್​ಗಳ ಕಳೆದುಕೊಂಡು 152 ರನ್​ಗಳನ್ನು ಮಾತ್ರ ಕಲೆ ಹಾಕಿ, 40 ರನ್​​ಗಳಿಂದ ಸೋಲು ಕಂಡಿತು.

asia-cup-2022-team-india-enters-super-four
ಏಷ್ಯಾ ಕಪ್: 40 ರನ್​​ಗಳಿಂದ ಗೆದ್ದ ಟೀಂ ಇಂಡಿಯಾ ಸೂಪರ್‌ ಫೋರ್​ಗೆ ಲಗ್ಗೆ

ದುಬೈ(ಯುಎಇ): ದುಬೈಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ನೇರವಾಗಿ ಸೂಪರ್‌ ಫೋರ್‌ ಪ್ರವೇಶಿಸಿದೆ. ಇಂದು ನಡೆದ ಹಾಂಗ್‌ ಕಾಂಗ್‌ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಹಾಂಗ್‌ ಕಾಂಗ್‌ ತಂಡಕ್ಕೆ 193 ರನ್​ಗಳ ಟಾರ್ಗೆಟ್​ ನೀಡಿತ್ತು. ಆದರೆ, ಭಾರತದ ಬೌಲಿಂಗ್​ ದಾಳಿಯನ್ನು ಎದುರಾಳಿ ಆಟಗಾರರಿಗೆ ಎದುರಿಸಲು ಸಾಧ್ಯವಾಗಿಲ್ಲ. ಬಾಬರ್​ ಹಾಯತ್​ (41), ಕಿಂಚಿತ್ ದೇವಾಂಗ್ ಶಾ (30) ಹಾಗೂ ಜೀಶನ್ ಅಲಿ (ಅಜೇಯ 26) ಮತ್ತು ಸ್ಕಾಟ್ ಮೆಕೆಚ್ನಿ (ಅಜೇಯ 16) ಕೊಂಚ ಉತ್ತಮವಾಗಿ ಬ್ಯಾಟ್​ ಬೀಸಿದರೂ ತಂಡವನ್ನು ಗೆಲುವಿಗೆ ದಡ ಸೇರಿಸಲು ಆಗಲಿಲ್ಲ. ಕೊನೆಗೆ 5 ವಿಕೆಟ್​ಗಳ ಕಳೆದುಕೊಂಡು 152 ರನ್​ಗಳನ್ನು ಮಾತ್ರ ಕಲೆ ಹಾಕಿ, 40 ರನ್​​ಗಳಿಂದ ಸೋಲು ಕಂಡಿತು.

ಇದನ್ನೂ ಓದಿ: ಏಷ್ಯಾ ಕಪ್​ 2022: ವಿರಾಟ್, ಸೂರ್ಯಕುಮಾರ್​ ಮಿಂಚು; ಹಾಂಗ್‌ ಕಾಂಗ್​ಗೆ 193 ರನ್​ಗಳ ಟಾರ್ಗೆಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.