ಕರ್ನಾಟಕ

karnataka

IPL 2022: ಈ ಬಾರಿ ಕಪ್​ ಗೆಲ್ಲದಿದ್ದರೂ ನೆಟ್ಟಿಗರ ಮನ ಗೆದ್ದ ಆರ್​ಸಿಬಿ, ವಿರಾಟ್​!

By

Published : Jun 2, 2022, 12:47 PM IST

ipl 2022, rcb most tweeted team in Twitter, virat kohli tops players list in Twitter, Twitter news, ಐಪಿಎಲ್ 2022, ಟ್ವಿಟರ್‌ನಲ್ಲಿ ಆರ್‌ಸಿಬಿ ಹೆಚ್ಚು ಟ್ವೀಟ್ ಮಾಡಿದ ತಂಡ, ಟ್ವಿಟರ್‌ನಲ್ಲಿ ಹೆಚ್ಚು ಚರ್ಚೆಗೊಂಡ ಆಟಗಾರರ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಅಗ್ರಸ್ಥಾನ, ಟ್ವಿಟರ್ ಸುದ್ದಿ,

ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗುಜರಾತ್ ಟೈಟಾನ್ಸ್ 15ನೇ ಸೀಸನ್​ ಕಪ್ ಅನ್ನು ಮುಡಿಗೇರಿಸಿಕೊಂಡಿದೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ತಂಡವಾಗಿ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಜನರ ಮನಗೆಲ್ಲುವಲ್ಲಿ ಆರ್​ಸಿಬಿ ತಂಡ ಮೆಲುಗೈ ಸಾಧಿಸಿದೆ.

ನವದೆಹಲಿ: ಈ ಬಾರಿಯ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೋಲಿನಿಂದ ಮನೆಗೆ ತೆರಳಿದ್ದ ಬೆಂಗಳೂರು ತಂಡದ ಜೊತೆ ವಿರಾಟ್ ಕೊಹ್ಲಿ ಬಗ್ಗೆ ನೆಟಿಜನ್‌ಗಳು ಸಾಕಷ್ಟು ಮಾತನಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ವಿರಾಟ್​ ಕೊಹ್ಲಿ ಮತ್ತು ಆರ್​ಸಿಬಿ ತಂಡದ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆದಿವೆಯಂತೆ.

ಐಪಿಎಲ್ 2022 ಸೋಷಿಯಲ್ ಮೀಡಿಯಾ: ಎರಡು ತಿಂಗಳ ಕಾಲ ಕ್ರಿಕೆಟ್ ಪ್ರೇಮಿಗಳನ್ನು ರೋಮಾಂಚನಗೊಳಿಸಿದ್ದ ಐಪಿಎಲ್ 15ನೇ ಸೀಸನ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಜಯಭೇರಿ ಬಾರಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಲೀಗ್‌ಗೆ ಪ್ರವೇಶಿಸಿದ ಮೊದಲ ಸೀಸನ್‌ನಲ್ಲಿ ಗುಜರಾತ್ ಫೈನಲ್ ತಲುಪುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಆದರೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಗೆದ್ದರೂ ನೆಟ್ಟಿಗರ ಮನ ಗೆಲ್ಲಲಾಗಲಿಲ್ಲ.

ಅಸಾಧಾರಣವಾಗಿ ಪ್ಲೇ ಆಫ್ ತಲುಪಿದ ಬೆಂಗಳೂರು ತಂಡ ಕ್ವಾಲಿಫೈಯರ್-2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಸೋಲು ಅನುಭವಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಆದರೆ, ಟ್ವಿಟರ್‌ನಲ್ಲಿ ಆರ್​ಸಿಬಿ ತಂಡ ಅತ್ಯಂತ ಜನಪ್ರಿಯ ತಂಡವಾಗಿ ಉಳಿದಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಟ್ವಿಟರ್‌ನಲ್ಲಿ ಆರ್‌ಸಿಬಿ ತಂಡ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ನೆಟಿಜನ್‌ಗಳು ಸಾಕಷ್ಟು ಚರ್ಚಿಸುತ್ತಿದ್ದಾರೆ ಎಂದು ಟ್ವಿಟರ್ ಅಧಿಕೃತವಾಗಿ ಬಹಿರಂಗಪಡಿಸಿದೆ.

ಓದಿ: 'ನಾನೋರ್ವ ಪಾಕಿಸ್ತಾನಿಯಾಗಿ ಹೇಳುತ್ತಿದ್ದೇನೆ, ವಿರಾಟ್​ ಸಾರ್ವಕಾಲಿಕ ಶ್ರೇಷ್ಠ ಆಟಗಾರ': ಶೋಯೆಬ್​ ಅಖ್ತರ್​

2022 ರ ಐಪಿಎಲ್​ ಸೀಸನ್​ನಲ್ಲಿ​ ಆರ್​ಸಿಬಿ ಬಗ್ಗೆ ಹೆಚ್ಚು ಟ್ವೀಟ್‌ಗಳನ್ನು ನೆಟಿಜನ್‌ಗಳು ಮಾಡಿದ್ದಾರೆ. ಬೆಂಗಳೂರು ತಂಡದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಕ್ರಮವಾಗಿ ನಂತರದ ಸ್ಥಾನವನ್ನು ಅಲಂಕರಿಸಿವೆ.

ನೆಟಿಜನ್‌ಗಳಿಂದ ಹೆಚ್ಚು ಚರ್ಚಿತ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ರೆ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಡುಪ್ಲೆಸಿಸ್ ನಂತರದ ಸ್ಥಾನವನ್ನು ಅಲಂಕರಿಸಿದ್ದಾರೆ. ಕೊರೊನಾ ನಿರ್ಬಂಧದಿಂದಾಗಿ ಆರ್‌ಸಿಬಿಯ ಒಂದೇ ಒಂದು ಪಂದ್ಯ ಬೆಂಗಳೂರಿನಲ್ಲಿ ನಡೆಯದಿದ್ದರೂ ಅಭಿಮಾನಿಗಳ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದರು. ವಾಂಖೆಡೆ ಮತ್ತು ಈಡನ್ ಗಾರ್ಡನ್ಸ್‌ನಂತಹ ಮೈದಾನಗಳಲ್ಲಿ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಬಗ್ಗೆ ಘೋಷಣೆಗಳು ಕಂಡು ಬಂದಿದ್ದವು. ಇದರ ಆಧಾರದ ಮೇಲೆ ಆರ್‌ಸಿಬಿಗೆ ಎಷ್ಟು ಫಾಲೋವರ್ಸ್ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ABOUT THE AUTHOR

...view details