ಕರ್ನಾಟಕ

karnataka

ಮತ್ತೊಂದು ದಾಖಲೆ ಬರೆದ ಕಿಂಗ್​ ಕೊಹ್ಲಿ: ಸಚಿನ್​​, ದ್ರಾವಿಡ್​​ ನಂತರ ಈ ಸಾಧನೆ ಮಾಡಿದ 3ನೇ ಆಟಗಾರ

By

Published : Sep 5, 2021, 6:32 PM IST

ವಿರಾಟ್ ಕೊಹ್ಲಿ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಕ್ರಮವಾಗಿ 1809 ಮತ್ತು 1575 ರನ್ ಗಳಿಸಿದ್ದಾರೆ. ದ್ರಾವಿಡ್ ಆಸ್ಟ್ರೇಲಿಯಾದಲ್ಲಿ 1143 ಮತ್ತು ಇಂಗ್ಲೆಂಡ್​​ನಲ್ಲಿ 1376 ರನ್ ಗಳಿಸಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಇದುವರೆಗೆ 1352 ರನ್ ಗಳಿಸಿದ್ದಾರೆ.

ಲಂಡನ್​: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಭಾನುವಾರ ಓವಲ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಮತ್ತೊಂದು ದಾಖಲೆ ಬರೆದರು. ಇಂಗ್ಲೆಂಡ್‌ ನೆಲದಲ್ಲಿ 1000 ಟೆಸ್ಟ್ ರನ್ ಪೂರೈಸಿದ ದೇಶದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ 4 ರನ್​​ಗಳಿಸುವ ಮೂಲಕ ಈ ಸಾಧನೆ ಮಾಡಿದರು. ತೆಂಡೂಲ್ಕರ್ ಮತ್ತು ದ್ರಾವಿಡ್ ನಂತರ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ 1000 ಕ್ಕಿಂತ ಹೆಚ್ಚು ಟೆಸ್ಟ್ ರನ್ ಗಳಿಸಿದ ಮೂರನೇ ಭಾರತೀಯ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಸಚಿನ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಕ್ರಮವಾಗಿ 1809 ಮತ್ತು 1575 ರನ್ ಗಳಿಸಿದ್ದಾರೆ. ದ್ರಾವಿಡ್ ಆಸ್ಟ್ರೇಲಿಯಾದಲ್ಲಿ 1143 ಮತ್ತು ಇಂಗ್ಲೆಂಡ್​​ನಲ್ಲಿ 1376 ರನ್ ಕಲೆ ಹಾಕಿದ್ದಾರೆ. ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಇದುವರೆಗೆ 1352 ರನ್ ಗಳಿಸಿದ್ದಾರೆ.

ಕೊಹ್ಲಿ ಟೆಸ್ಟ್​​ ಕ್ರಿಕೆಟ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ (1682), ಇಂಗ್ಲೆಂಡ್ (1960), ದಕ್ಷಿಣ ಆಫ್ರಿಕಾ (1075) ಮತ್ತು ಶ್ರೀಲಂಕಾ (1004) ಟೆಸ್ಟ್ ರನ್ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಸೋಂಕು: ಟೀಂ​ ಇಂಡಿಯಾ ಕೋಚ್​​ ರವಿಶಾಸ್ತ್ರಿ ಸೇರಿ ಮೂವರು ಕ್ವಾರಂಟೈನ್‌

TAGGED:

ABOUT THE AUTHOR

...view details