ಕರ್ನಾಟಕ

karnataka

ಭಾರತದಿಂದ ಉತ್ತಮ ಸ್ಪರ್ಧೆ ನಿರೀಕ್ಷಿಸಿದ್ದೆವು: ಟಿಮ್ ಪೈನ್

By

Published : Dec 19, 2020, 3:55 PM IST

ಎರಡೂ ತಂಡಗಳು ವೇಗವಾಗಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿವೆ ಎಂದು ತಿಳಿದಿದೆ. ಆದರೆ, ಇಷ್ಟು ಬೇಗ ಫಲಿತಾಂಶ ಕಾಣುತ್ತದೆ ಎಂದು ತಿಳಿದಿರಲಿಲ್ಲ ಎಂದು ಟಿಮ್ ಪೈನ್ ಹೇಳಿದ್ದಾರೆ.

Tim Paine
ಟಿಮ್ ಪೈನ್

ಅಡಿಲೇಡ್:ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಭಾರತದಿಂದ ಉತ್ತಮ ಸ್ಪರ್ಧೆಯನ್ನು ನಿರೀಕ್ಷಿಸಿದ್ವಿ, ಇಷ್ಟು ಬೇಗ ಪಂದ್ಯ ಮುಕ್ತಾರವಾಗುತ್ತದೆ ಎಂದು ತಿಳಿದಿರಲಿಲ್ಲ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಹೇಳಿದ್ದಾರೆ.

ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 1-0 ಮುನ್ನಡೆ ಸಾಧಿಸಿದ್ದು, ಪಂದ್ಯ ಮುಗಿದ ಬಳಿಕ ಮಾತನಾಡಿದ ಆಸಿಸ್ ನಾಯಕ "ಎರಡೂ ತಂಡಗಳು ವೇಗವಾಗಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿವೆ ಎಂದು ತಿಳಿದಿದೆ. ಆದರೆ, ಇಷ್ಟು ಬೇಗ ಫಲಿತಾಂಶ ಕಾಣುತ್ತದೆ ಎಂದು ತಿಳಿದಿರಲಿಲ್ಲ. ನಾನು ನಿಜವಾಗ ನಾಯಿಗಳ ಕಾದಾಟ(dogfight) ನಿರೀಕ್ಷಿಸಿದ್ದೆ" ಎಂದಿದ್ದಾರೆ.

"ಸಿಕ್ಕ ಅವಕಾಶ ಬಳಸಿಕೊಂಡ ನಮ್ಮ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದ್ರು. ಸರಣಿಯಲ್ಲಿ ಉತ್ತಮ ಆರಂಭ ದೊರಕಿದ್ದು, ಸಂತೋಷವಾಗಿದೆ. ಆರಂಭಿಕ ಆಟಗಾರ ಬರ್ನ್ಸ್ ನಮ್ಮ ತಂಡದ ಪ್ರಮುಖ ಭಾಗವಾಗಿದ್ದಾರೆ. ಉತ್ತಮ ಬೌಲಿಂಗ್ ಪ್ರದರ್ಶನದ ನಡುವೆ ಬ್ಯಾಟಿಂಗ್​ನತ್ತ ಕೊಂಚ ಗಮನ ಹರಿಸಬೇಕಿದೆ" ಎಂದು ತಿಳಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಅಜೇಯ 73 ರನ್​ ಗಳಿಸಿದ್ದ ಟಿಮ್ ಪೈನ ಪ್ಲೇಯರ್ ಆಫ್​ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಓದಿಮೊದಲ ಟೆಸ್ಟ್​ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ.. ಆಸ್ಟ್ರೇಲಿಯಾಗೆ 8 ವಿಕೆಟ್​ಗಳ ಭರ್ಜರಿ ಜಯ

ಮೊದಲ ಇನ್ನಿಂಗ್ಸ್​ನಲ್ಲಿ ಭಾರತ 244 ರನ್​ಗಳಿಸಿದ್ರೆ, ಆಸ್ಟ್ರೇಲಿಯಾ ತಂಡ 191 ರನ್​ ಗಳಿಗೆ ಸರ್ವಪತನ ಕಂಡಿತ್ತು. ದ್ವೀತೀಯ ಇನ್ನಿಂಗ್ಸ್​ನಲ್ಲಿ ಆಸೀಸ್ ಬೌಲರ್​ಗಳ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಕೇವಲ 36 ರನ್​ ಗಳಿಸಿತು. 90 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಕಾಂಗರೂ ಪಡೆ 2 ವಿಕೆಟ್ ಕಳೆದುಕೊಂಡು 93 ರನ್​ ಗಳಿಸುವ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ABOUT THE AUTHOR

...view details