ಕರ್ನಾಟಕ

karnataka

ಬಿಡಬ್ಲ್ಯೂಎಫ್​ ಅಥ್ಲೀಟ್ ಆಯೋಗದ ಸದಸ್ಯೆಯಾಗಿ ಸಿಂಧು ನೇಮಕ

By

Published : Dec 20, 2021, 10:26 PM IST

PV Sindhu appointed member of BWF's Athletes' Commission

26 ವರ್ಷದ ಮಾಜಿ ವಿಶ್ವ ಚಾಂಪಿಯನ್​ ಪಿವಿ ಸಿಂಧು ಸೇರಿ 6 ಮಂದಿ ಆಯೋಗಕ್ಕೆ ನೇಮಕವಾಗಿದ್ದು, 2025ರವರೆಗೆ ಇವರ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.

ನವದೆಹಲಿ: ಭಾರತದ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್​ (ಬಿಡಬ್ಲ್ಯುಎಫ್‌) ಅಥ್ಲೀಟ್‌ಗಳ ಆಯೋಗದ ಸದಸ್ಯೆಯಾಗಿ ನೇಮಕವಾಗಿದ್ದಾರೆ. 26 ವರ್ಷದ ಮಾಜಿ ವಿಶ್ವ ಚಾಂಪಿಯನ್​ ಪಿವಿ ಸಿಂಧು ಸೇರಿ 6 ಮಂದಿ ಆಯೋಗಕ್ಕೆ ನೇಮಕವಾಗಿದ್ದು, 2025ರವರೆಗೆ ಇವರ ಸದಸ್ಯರಾಗಿ ಸೇವೆ ಸಲ್ಲಿಸಲಿದ್ದಾರೆ.

2021ರಿಂದ 2025ರ ವರೆಗಿನ ಬಿಡಬ್ಲ್ಯೂಎಪ್​ ಅಥ್ಲೀಟ್​ ಆಯೋಗದ ಸದಸ್ಯರಾಗಿ ಈ 6 ಮಂದಿ ನೇಮಕವಾಗಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತಿದೆ. ಐರಿಸ್ ವಾಂಗ್ (ಅಮೆರಿಕ), ರಾಬಿನ್ ಟೇಬೆಲಿಂಗ್ (ನೆದರ್ಲೆಂಡ್ಸ್), ಗ್ರೇಸಿಯಾ ಪೋಲಿ (ಇಂಡೊನೇಷ್ಯಾ), ಕಿಮ್ ಸೊಯೊಂಗ್ (ಕೊರಿಯಾ), ಪಿ.ವಿ. ಸಿಂಧು (ಇಂಡೊನೇಷ್ಯಾ), ಜೆಂಗ್‌ ಸಿ ವೇ (ಚೀನಾ) ಆಯೋಗದ ಸದಸ್ಯರಾಗಿ ನೇಮಕ ಮಾಡಲಾಗಿದೆ ಎಂದು ಎಂದು ಬಿಡಬ್ಲ್ಯುಎಫ್‌ ಹೇಳಿಕೆ ಬಿಡುಗಡೆ ಮಾಡಿದೆ.

ಈ ಹೊಸ ಆಯೋಗ ಶೀಘ್ರದಲ್ಲಿ ಸಭೆ ಸೇರಲಿದ್ದು, ಆರು ಸದಸ್ಯರಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನ ನಿರ್ಧರಿಸಲಿದ್ದಾರೆ. ಅಥ್ಲೀಟ್‌ಗಳ ಆಯೋಗದ ಅಧ್ಯಕ್ಷರು, ಎಲ್ಲಾ ಕೌನ್ಸಿಲ್ ಸದಸ್ಯರು 2025ರ ಚುನಾವಣೆಯವರೆಗೆ ಕೌನ್ಸಿಲ್‌ನ ಸದಸ್ಯರಾಗುತ್ತಾರೆ ಎಂದು ಬಿಡಬ್ಲ್ಯೂಎಫ್ ತಿಳಿಸಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಿಂಧು, ಈ ವರ್ಷದ ಜುಲೈನಲ್ಲಿ ಟೋಕಿಯೊದಲ್ಲಿ ನಡೆದ ಕೂಟದಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. ಅಲ್ಲದೇ ಅವರು ಪ್ರತಿಷ್ಠಿತ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಒಮ್ಮೆ ಚಿನ್ನದ ಪದಕ, ತಲಾ ಎರಡು ಬಾರಿ ಬೆಳ್ಳಿ ಪದಕ ಜಯಿಸಿದ್ದಾರೆ.

ಇದನ್ನೂ ಓದಿ:ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಶ್ರೀಕಾಂತ್​ಗೆ ಪ್ರಧಾನಿ ಮೋದಿ ಅಭಿನಂದನೆ

ABOUT THE AUTHOR

...view details