ಕರ್ನಾಟಕ

karnataka

’’100 ಕೋಟಿ ಗಳಿಸೋ ತಾಕತ್ತಿರುವ ಚಿತ್ರವನ್ನ ಅರ್ಧದಷ್ಟಕ್ಕೆ ಕೊಡಬೇಕಾ? ನೀವೇ ಹೇಳಿ!’’

By

Published : May 18, 2021, 7:58 PM IST

Updated : May 18, 2021, 9:13 PM IST

ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರ ಸೇಲ್​ ಆಯ್ತಾ? ಜನಪ್ರಿಯ ಒಟಿಟಿಯೊಂದು ಚಿತ್ರದ ಡಿಜಿಟಲ್ ಹಕ್ಕುಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದೆ ಬಂದಿದೆ ಎಂಬ ಗುಲ್ಲು ನಡುವೆ ನಿರ್ಮಾಪಕ ಸೂರಪ್ಪ ಬಾಬು ಅವರು ಈ ಬಗ್ಗೆ ಹೊಸ ವಿಚಾರ ಹೊರ ಹಾಕಿದ್ದಾರೆ..

I have no intention to release kotigobba 3 in ott; Soorappa Babu clarifie
ಸುದೀಪ್

ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ-3' ಚಿತ್ರದ ಬಿಡುಗಡೆಗೆ ಅನಿರ್ದಿಷ್ಟಾವಧಿ ಮುಂದಕ್ಕೆ ಹೋಗಿದೆ.

ನಿರ್ಮಾಪಕ ಸೂರಪ್ಪ ಬಾಬು ಅವರು ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದ್ದರಿಂದ ಚಿತ್ರ ಯಾವಾಗ ಬಿಡುಗಡೆಯಾಗಬಹುದು ಎಂಬುವುದು ಚಿತ್ರ ತಂಡದವರಿಗೂ ಗೊತ್ತಿಲ್ಲ.

ನಟ ಸುದೀಪ್

ಈ ಮಧ್ಯೆ ಚಿತ್ರಕ್ಕೆ ಒಟಿಟಿಯವರಿಂದ ಬೇಡಿಕೆ ಹೆಚ್ಚಾಗುತ್ತಿದ್ದು, ಜನಪ್ರಿಯ ಒಟಿಟಿಯೊಂದು ಚಿತ್ರದ ಡಿಜಿಟಲ್ ಹಕ್ಕುಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದೆ.

ನಾವು ಅಂದುಕೊಂಡಂತೆ ನಮ್ಮ ರೇಟ್‌ಗೆ ಬರದಿದ್ದರೆ ಹಕ್ಕುಗಳನ್ನು ಕೊಡುವುದಿಲ್ಲ ಎಂದು ಸೂರಪ್ಪ ಬಾಬು ಹೇಳಿದ್ದಾರೆ ಎಂದು ಸಹ ಸುದ್ದಿಯಾಗಿತ್ತು.

ಆದರೆ, ಅಷ್ಟು ದುಡ್ಡು ಕೊಟ್ಟರೂ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದಕ್ಕೆ ಸೂರಪ್ಪ ಬಾಬುಗೆ ಇಷ್ಟವಿಲ್ಲವಂತೆ. ಹಾಗಂತಾ, ಅವರೇ ಹೇಳಿಕೊಂಡಿದ್ದಾರೆ.

ನಟ ಸುದೀಪ್

ಅದಕ್ಕೆ ಕಾರಣವೂ ಇದೆ. ಒಂದು ಪಕ್ಷ 'ಕೋಟಿಗೊಬ್ಬ-3' ಚಿತ್ರವನ್ನು ಅವರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದರೆ ಏನಿಲ್ಲವೆಂದರೂ 50 ರಿಂದ 100 ಕೋಟಿಯಷ್ಟು ಮಾರ್ಕೆಟ್​ ಮಾಡುವ ಶಕ್ತಿ ಚಿತ್ರಕ್ಕಿದೆ ಎಂಬ ನಂಬಿಕೆ ಸೂರಪ್ಪ ಬಾಬು ಅವರಿಗಿದೆ.

ಅದರಲ್ಲಿ ಬಾಡಿಗೆ ಹಾಗೂ ಶೇರ್ ಅಂತ ಹೋದರೂ ಕೈಗೆ ಒಳ್ಳೆಯ ಮೊತ್ತವೇ ಸಿಗಲಿದೆ. ಅದನ್ನು ಬಿಟ್ಟು ಅರ್ಧ ದುಡ್ಡಿಗೆ ಮಾಡುವುದು ಏಕೆ? ಎಂಬುದು ಅವರ ಪ್ರಶ್ನೆ.

ನಟ ಸುದೀಪ್

ಮೇಲಾಗಿ ಅದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿರುವುದರಿಂದ ಸುದೀಪ್ ಅಭಿಮಾನಿಗಳು ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡುವುದಕ್ಕೆ ಇಷ್ಟಪಡುತ್ತಿದ್ದಾರೆ.

ಹೀಗಿರುವಾಗ, ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಿ ನಷ್ಟ ಮಾಡಿಕೊಳ್ಳುವುದರ ಜೊತೆಗೆ ಸುದೀಪ್ ಅಭಿಮಾನಿಗಳಿಗೆ ಬೇಸರ ಮಾಡಿಸುವುದು ಸರಿ ಅನ್ನಿಸುತ್ತಿಲ್ಲ.

ಹಾಗಾಗಿ, ಒಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯನ್ನು ಬಿಟ್ಟು ಸ್ವಲ್ಪ ತಡವಾದರೂ ಸರಿ ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಪ್ರಯತ್ನ ನಡೆಸುತ್ತೇವೆ ಎನ್ನುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.

ಇದನ್ನೂ ಓದಿ: ಅಜ್ಜಿಯ ಬಾಲ್ ಸ್ಟ್ರೈಕಿಂಗ್ ಆಟಕ್ಕೆ ಮನಸೋತ ಕಿಚ್ಚ ಸುದೀಪ್!

Last Updated : May 18, 2021, 9:13 PM IST

ABOUT THE AUTHOR

...view details