ಕರ್ನಾಟಕ

karnataka

ನೌಕಾದಳಕ್ಕೆ 16 ಎಎಲ್ಎಚ್ ಧ್ರುವ್ ಎಂಕೆ 3 ಹೆಲಿಕಾಪ್ಟರ್‌ : ಆತ್ಮನಿರ್ಭರ ಭಾರತದಡಿ ನಿರ್ಮಾಣ

By

Published : Nov 16, 2022, 10:38 PM IST

Updated : Nov 16, 2022, 10:59 PM IST

16 ಎಎಲ್ಎಚ್ ಧ್ರುವ್ ಎಂಕೆ3 ಹೆಲಿಕಾಪ್ಟರ್‌ಗಳನ್ನು ಹೆಚ್ಎಎಲ್ ಆತ್ಮನಿರ್ಭರ ಭಾರತ ಯೋಜನೆ ಅಡಿಯಲ್ಲಿ ನೌಕಾಪಡೆಗೆ ನೀಡಿದೆ. ಈ ಬಗ್ಗೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ ಬರೆದಿರುವುದು ಹೀಗೆ

16 ALH Dhruv Mk 3 helicopters introduces  to the Navy
ನೌಕಾದಳಕ್ಕೆ ಸೇರಿದ 16 ಎಎಲ್ಎಚ್ ಧ್ರುವ್ ಎಂಕೆ 3 ಹೆಲಿಕಾಪ್ಟರ್‌

ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಧ್ರುವ್ ಎಂಕೆ 3 ಎಂಆರ್ ಅನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ವಿನ್ಯಾಸಗೊಳಿಸಿ, ದೇಶೀಯವಾಗಿ ನಿರ್ಮಿಸಿದೆ. ಈ ಕಾರ್ಯವನ್ನು ಭಾರತ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಗೆ ಬೆಂಬಲ ನೀಡಲು ಹೆಚ್ಎಎಲ್ ಕೈಗೆತ್ತಿಕೊಂಡಿತು. ಎಚ್ಎಎಲ್ ಈಗಾಗಲೇ ಯಶಸ್ವಿಯಾಗಿ ಡೆಕ್ ಆಪರೇಷನ್ ಸಾಮರ್ಥ್ಯಗಳು, ಅಂದರೆ ಡೆಕ್ ಮೇಲೆ ಭೂಸ್ಪರ್ಶ ಮಾಡುವುದು, ಬ್ಲೇಡ್ ಗಳನ್ನು ಮಡಿಸುವುದು ಹಾಗೂ ಹೆಲಿಕಾಪ್ಟರ್ ಅನ್ನು ಹ್ಯಾಂಗರ್​ಗಳಲ್ಲಿ ಸಂಗ್ರಹಿಸುವುದನ್ನು ಸಾಬೀತುಪಡಿಸಿದೆ.

ಈ ಮೊದಲಿನ ಪರೀಕ್ಷಾ ಪ್ರಯೋಗಗಳು ಎಎಲ್ಎಚ್ ಧ್ರುವ್ ಹೆಲಿಕಾಪ್ಟರ್‌ನ ನೌಕೆಗಳಿಂದ ಕಾರ್ಯಾಚರಿಸುವ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಎಎಲ್ಎಚ್ ಧ್ರುವ್ ಕೈಗೊಂಡ ಪರೀಕ್ಷಾ ಕಾರ್ಯಾಚರಣೆಗಳಲ್ಲಿ ವೀಕ್ಷಣೆ, ಹುಡುಕಾಟ ಮತ್ತು ರಕ್ಷಣೆ, ತೈಲ ಸೋರಿಕೆ ಮಾಲಿನ್ಯ ನಿವಾರಣೆ, ಇತ್ಯಾದಿಗಳು ಸೇರಿವೆ. ಬ್ಲೇಡ್ ಫೋಲ್ಡಿಂಗ್, ಸ್ಟೋವೇಜ್ ಇತ್ಯಾದಿ ಸಾಮರ್ಥ್ಯಗಳನ್ನು ಸಾಬೀತುಪಡಿಸಿರುವ ಧ್ರುವ್ ಈಗ ಕಾರ್ಯಾಚರಣೆಗಿಳಿಯಲು ಸನ್ನದ್ಧವಾಗಿದೆ.

ನೌಕಾದಳಕ್ಕೆ ಸೇರಿದ 16 ಎಎಲ್ಎಚ್ ಧ್ರುವ್ ಎಂಕೆ 3 ಹೆಲಿಕಾಪ್ಟರ್‌

ಇಲೆಕ್ಟ್ರೋ ಆಪ್ಟಿಕಲ್ ಸೆನ್ಸರ್: ಧ್ರುವ್ ಎಂಕೆ 3 ಎಂಆರ್ ಅತ್ಯಾಧುನಿಕ ಸರ್ವಯಲೆನ್ಸ್ ರೇಡಾರ್ ಹೊಂದಿದ್ದು, ಇದು ರಾಷ್ಟ್ರದ ಗಡಿಯನ್ನು ಯಾವುದೇ ತೊಂದರೆ ಬರದಂತೆ ಕಾಯುವ ಕೋಸ್ಟ್ ಗಾರ್ಡ್‌ಗೆ ಬಹುತೇಕ 120 ನಾಟಿಕಲ್ ಮೈಲು ದೂರದಲ್ಲಿರುವ ಅಪಾಯಗಳ ಕುರಿತಾಗಿ ಮಾಹಿತಿ ನೀಡಬಲ್ಲದು. ಅದರೊಡನೆ ಎಎಲ್ಎಚ್ ಧ್ರುವ್‌ನಲ್ಲಿರುವ ಇಲೆಕ್ಟ್ರೋ ಆಪ್ಟಿಕಲ್ ಸೆನ್ಸರ್ ಅತ್ಯಂತ ಸಣ್ಣದಾದ ನೌಕೆಗಳನ್ನೂ 30 ನಾಟಿಕಲ್ ಮೈಲಿಗಿಂತಲೂ ಹೆಚ್ಚು ದೂರದಿಂದ ಗುರುತಿಸಬಲ್ಲದು. ಈ ಎಲ್ಲ ಕಾರಣಗಳಿಂದ ಎಎಲ್ಎಚ್ ಧ್ರುವ್ ಕೋಸ್ಟ್ ಗಾರ್ಡ್ ಸಾಮರ್ಥ್ಯ ಹೆಚ್ಚಿಸಲಿದೆ.

ವಿಪತ್ತು ಪರಿಹಾರ ಕಾರ್ಯಾಚರಣೆ ಹೆಚ್ಚು ಸೂಕ್ತ:ಎಎಲ್ಎಚ್ ಧ್ರುವ್‌ನಲ್ಲಿ ಅತ್ಯಾಧುನಿಕ ಅತ್ಯಂತ ನಂಬಿಕರ್ಹವಾದ ಶಕ್ತಿ ಇಂಜಿನ್ ಮತ್ತು ಸದೃಢವಾದ ಗ್ಲಾಸ್ ಕಾಕ್‌ಪಿಟ್ ಅಳವಡಿಸಲಾಗಿದೆ. ಇದು ಮರೀನ್ ಕಮಾಂಡೋಗಳೊಂದಿಗೆ ಮಾನವೀಯ ನೆರವು ಹಾಗೂ ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾಗವಹಿಸಬಹುದು. ಎಚ್ಎಎಲ್‌ನ ಬಹುಪಾತ್ರಗಳ ಹೆಲಿಕಾಪ್ಟರ್ ಧ್ರುವ್‌ನಲ್ಲಿ ನಾಲ್ಕು ಆವೃತ್ತಿಗಳಿದ್ದು, ಕ್ರಮವಾಗಿ ಎಂಕೆ 1, ಎಂಕೆ 2, ಎಂಕೆ 3, ಎಂಕೆ 4 ಆಗಿವೆ.

ಪರ್ಫಾಮೆನ್ಸ್ ಬೇಸ್ಡ್ ಲಾಜಿಸ್ಟಿಕ್ಸ್ ವೈಶಿಷ್ಟ್ಯ:ಕೋವಿಡ್ ಸಮಸ್ಯೆಯ ಮಧ್ಯೆಯೂ ಎಚ್ಎಎಲ್ ತಾನು 2017ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಕ್ಷಿಪ್ರವಾಗಿ ಹೆಲಿಕಾಪ್ಟರ್‌ಗಳನ್ನು ಪೂರೈಸಿದೆ. ಎಚ್ಎಎಲ್ ತನ್ನ ಪರ್ಫಾಮೆನ್ಸ್ ಬೇಸ್ಡ್ ಲಾಜಿಸ್ಟಿಕ್ಸ್ (ಪಿಬಿಎಲ್) ಈ ಒಪ್ಪಂದದ ಒಂದು ವೈಶಿಷ್ಟ್ಯವಾಗಿದೆ. ಇದು ಮುಂದಿನ ದಿನಗಳಲ್ಲೂ ಒಂದು ಮಾನದಂಡವಾಗಿರಲಿದೆ ಎಂದು ಅಭಿಪ್ರಾಯ ಪಡುತ್ತದೆ. ಹೆಚ್ಎಎಲ್ ತನ್ನ ಎಎಲ್ಎಚ್ ವೇದಿಕೆಯಲ್ಲಿ 330ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳನ್ನು ನಿರ್ಮಿಸಿ, ಜಗತ್ತಿನಾದ್ಯಂತ ಸೇವೆಗೆ ಸೇರ್ಪಡೆಗೊಳಿಸಿದೆ. ಇವುಗಳು ಒಟ್ಟಾರೆಯಾಗಿ 3.75 ಲಕ್ಷ ಹಾರಾಟ ಗಂಟೆಗಳನ್ನು ಪೂರೈಸಿವೆ.

ಲೇಖನ : ಗಿರೀಶ್ ಲಿಂಗಣ್ಣ - ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು

Last Updated :Nov 16, 2022, 10:59 PM IST

ABOUT THE AUTHOR

...view details