ETV Bharat / opinion

ನಕ್ಸಲಿಸಂನಿಂದ ಬಳಲಿದ ಬಸ್ತಾರ್: ಇಲ್ಲಿನ ಜನ ಯಾಕಾಗಿ ನಕ್ಸಲಿಸಂಗೆ ಆಕರ್ಷಿತರಾಗ್ತಿದ್ದಾರೆ?; 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು? - WHEN WILL SOLVE THE NAXAL PROBLEM

author img

By ETV Bharat Karnataka Team

Published : May 24, 2024, 8:00 PM IST

ಛತ್ತೀಗಢದ ಬಸ್ತಾರ್ ಪ್ರದೇಶದಲ್ಲಿನ ನಕ್ಸಲಿಸಂ ಸಮಸ್ಯೆಯ ಬಗ್ಗೆ ನಕ್ಸಲ್ ತಜ್ಞರ ಸಲಹೆಗಳ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು?
ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು? (ians)

ಬಸ್ತಾರ್: ಛತ್ತೀಸಗಢದ ಬಸ್ತಾರ್​ನಲ್ಲಿ ಕಳೆದ ನಾಲ್ಕು ದಶಕಗಳಿಂದಲೂ ನಕ್ಸಲಿಸಂ ಸಮಸ್ಯೆ ಬೇರೂರಿದೆ. ಬಸ್ತಾರ್​ನಿಂದ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದಷ್ಟೂ ಅದರ ಪ್ರಮಾಣ ಹೆಚ್ಚಾಗುತ್ತಿದೆ. ಆದಾಗ್ಯೂ ಕೆಲ ಪ್ರದೇಶಗಳಲ್ಲಿನ ನಕ್ಸಲರು ತಮ್ಮ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ ಅಥವಾ ಅನೇಕ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಅವರನ್ನು ಬೇರು ಸಹಿತ ಕಿತ್ತುಹಾಕಿವೆ. ಛತ್ತೀಸಗಢದಲ್ಲಿ ಅಧಿಕಾರಕ್ಕೆ ಬಂದಿರುವ ಹೊಸ ಸರ್ಕಾರವು ಮುಂದಿನ ಕೆಲ ವರ್ಷಗಳಲ್ಲಿ ಬಸ್ತಾರ್​ನಿಂದ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪಣ ತೊಟ್ಟಿದೆ. ಇದಕ್ಕಾಗಿ ಒಂದೆಡೆ ಭದ್ರತಾ ಪಡೆಗಳಿಗೆ ಮುಕ್ತ ಅವಕಾಶ ನೀಡಿದೆ ಹಾಗೂ ಮತ್ತೊಂದೆಡೆ ಸರ್ಕಾರವು ನಕ್ಸಲರೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿದೆ ಮತ್ತು ಅವರ ಅಭಿಪ್ರಾಯಗಳನ್ನು ಕೂಡ ಪರಿಗಣಿಸುತ್ತಿದೆ.

ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು?
ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು? (ians)

ನಾಲ್ಕು ದಶಕಗಳಿಂದ ಬಸ್ತಾರ್​ನಲ್ಲಿ ನಕ್ಸಲಿಸಂ ಬಲವಾಗಿ ಬೇರೂರಿರುವುದು ಏಕೆ? : ಭಾರತದಲ್ಲಿನ ನಕ್ಸಲಿಸಂ ಸಮಸ್ಯೆ ಬಗ್ಗೆ ಮಾತನಾಡುವುದಾದರೆ ಛತ್ತೀಸಗಢದ ಬಸ್ತಾರ್ ಹೆಸರೇ ಮೊದಲಿಗೆ ಪ್ರಸ್ತಾಪವಾಗುತ್ತದೆ. ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಬಸ್ತಾರ್ ನಕ್ಸಲೀಯರಿಗೆ ಅನುಕೂಲಕರ ಸ್ಥಳವಾಗಿದೆ. ಇಲ್ಲಿನ ಸಾಮಾಜಿಕ ಮತ್ತು ಭೌಗೋಳಿಕ ಪರಿಸ್ಥಿತಿಗಳಿಂದಾಗಿ, ಬಸ್ತಾರ್ ನಕ್ಸಲರ ಭದ್ರ ಕೋಟೆಯಾಗಿ ಮಾರ್ಪಟ್ಟಿದೆ.

ಬಡತನ, ಅನಕ್ಷರತೆ ಮತ್ತು ಅಭಿವೃದ್ಧಿಯ ಕೊರತೆಗಳ ಕಾರಣದಿಂದ ಬಸ್ತಾರ್​ನಲ್ಲಿ ನಕ್ಸಲಿಸಂ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ. ಈ ಎಲ್ಲ ಸಮಸ್ಯೆಗಳಿಂದಾಗಿ ಬೇಸತ್ತ ಇಲ್ಲಿನ ಜನರು ನಕ್ಸಲೀಯರ ಪ್ರಚೋದನೆಗೆ ಒಳಗಾಗಿ ಅವರೊಂದಿಗೆ ಸೇರಿಕೊಂಡಿದ್ದಾರೆ. ಯಾವುದೇ ಮೂಲ ಸೌಲಭ್ಯಗಳಿಲ್ಲದ ಪ್ರದೇಶಗಳಿಗೆ ನಕ್ಸಲರು ತಲುಪುತ್ತಾರೆ ಮತ್ತು ಆ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸುತ್ತಾರೆ ಎನ್ನುತ್ತಾರೆ ವಿಶೇಷ ನಕ್ಸಲ್ ತಜ್ಞ ಮತ್ತು ಹಿರಿಯ ಪತ್ರಕರ್ತ ಮನೀಶ್ ಗುಪ್ತಾ.

ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು?
ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು? (ians)

"ನಕ್ಸಲೀಯರು ಸ್ಥಳೀಯರ ಭಾಷೆಯಲ್ಲಿಯೇ ಮಾತನಾಡಿ ಅವರ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅವರೊಂದಿಗೆ ಬಾಂಧವ್ಯ ಸಾಧಿಸುತ್ತಾರೆ. ನಕ್ಸಲ್ ಸಂಘಟನೆಗಳಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಸಾಮಾನ್ಯವಾಗಿ ನ್ಯಾಯಾಲಯ, ಪೊಲೀಸ್ ಮತ್ತು ಅರಣ್ಯ ಸಮಸ್ಯೆಗಳ ವಿಷಯದಲ್ಲಿ ನ್ಯಾಯದಾನ ಪ್ರಕ್ರಿಯೆ ವಿಳಂಬವಾಗುತ್ತದೆ. ಇಂಥ ಸಂದರ್ಭದಲ್ಲಿ ಅವರು ತಮ್ಮದೇ ಆದ ಜನ ಅದಾಲತ್ ನಡೆಸುತ್ತಾರೆ ಮತ್ತು ಜನರಿಗೆ ನ್ಯಾಯ ಒದಗಿಸುತ್ತಾರೆ. ಯಾರಿಗಾದರೂ ಅನ್ಯಾಯವಾದಾಗ ನಕ್ಸಲರು ಅವರೊಂದಿಗೆ ನಿಂತು ತಮ್ಮ ಸಂತಾಪ ವ್ಯಕ್ತಪಡಿಸುತ್ತಾರೆ. ಇದೇ ಕಾರಣದಿಂದ ನಕ್ಸಲೀಯರು ಮತ್ತು ಗ್ರಾಮಸ್ಥರ ನಡುವೆ ಬಲವಾದ ಸಂಬಂಧವಿದೆ. ಈ ಸಂಬಂಧವನ್ನು ಮುರಿಯಲು ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ." ಎನ್ನುತ್ತಾರೆ ಮನೀಶ್ ಗುಪ್ತಾ.

ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು?
ನಕ್ಸಲಿಸಂನಿಂದ ಬಳಲಿದ ಬಸ್ತಾರ್: 4 ದಶಕಗಳ ಸಮಸ್ಯೆಗೆ ಮುಕ್ತಿ ಎಂದು? (ians)

ನಕ್ಸಲಿಸಂಗೆ ಅಂತ್ಯ ಹಾಡುವುದು ಏಕೆ ಅಗತ್ಯ? : ಬಸ್ತಾರ್ ಅಮೂಲ್ಯವಾದ ಅರಣ್ಯ ಮತ್ತು ಖನಿಜ ಸಂಪತ್ತನ್ನು ಹೊಂದಿದೆ. ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲ ಹಾಗೂ ಅಭಿವೃದ್ಧಿಯೂ ಆಗಿಲ್ಲ. ಅಲ್ಲದೇ ಇಲ್ಲಿ ಕೈಗಾರಿಕೆಗಳು ಬರದಂತೆ ನಕ್ಸಲೀಯರು ಅಡ್ಡಿಯುಂಟು ಮಾಡಿದ್ದಾರೆ. ಬಸ್ತಾರ್​ನಲ್ಲಿ ಒಂದೊಮ್ಮೆ ನಕ್ಸಲಿಸಂ ಕೊನೆಗೊಂಡರೆ ಅಲ್ಲಿನ ಖನಿಜ ಸಂಪತ್ತು ಮತ್ತು ಅರಣ್ಯ ಉತ್ಪನ್ನಗಳಿಗೆ ಸಂಬಂಧಿಸಿದ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಇದರಿಂದ ಜನರಿಗೆ ಉದ್ಯೋಗ ಸಿಗುತ್ತವೆ. ಈ ಮೂಲಕ ಬಸ್ತಾರ್ ಜನ ಸ್ವಾವಲಂಬಿಗಳಾಗಬಹುದು. ಇಲ್ಲಿ ನಕ್ಸಲಿಸಂ ಕೊನೆಗೊಂಡರೆ ಈ ಪ್ರದೇಶವನ್ನು ದೊಡ್ಡ ದೊಡ್ಡ ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಬಹುದು.

"ಪ್ರಕೃತಿ ಬಸ್ತಾರ್​ಗೆ ಸಾಕಷ್ಟು ಕೊಡುಗೆ ನೀಡಿದೆ. ಆ ಪ್ರದೇಶಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸೋದ್ಯಮವನ್ನು ಬೆಳೆಸಬಹುದು. ಸ್ಥಳೀಯ ಜನರು ಇದರಿಂದ ಉದ್ಯೋಗ ಪಡೆಯಬಹುದು. ನಕ್ಸಲೀಯರ ಕಾರಣದಿಂದಾಗಿ ಯಾವೆಲ್ಲ ಸೌಲಭ್ಯಗಳು ಬಸ್ತಾರ್​ಗೆ ತಲುಪುತ್ತಿಲ್ಲವೋ ಆ ಎಲ್ಲ ಸೌಲಭ್ಯಗಳು ಜನರಿಗೆ ಸಿಗುತ್ತವೆ ಮತ್ತು ಬಸ್ತಾರ್ ಶಾಂತಿಯುತವಾಗಲಿದೆ. ನಾವು ಬಯಸಿದ ಶಾಂತಿಯುತ ಮತ್ತು ಸುಂದರ ಬಸ್ತಾರ್​ನ ಕನಸು ಆಗ ಈಡೇರುತ್ತದೆ." ಎಂದು ಮನೀಶ್ ಗುಪ್ತಾ ಅಭಿಪ್ರಾಯ ಪಟ್ಟರು.

ನಕ್ಸಲೀಯರ ಬೇಡಿಕೆಗಳೇನು?: ಈ ಸುಂದರ ಪ್ರದೇಶದಿಂದ ನಕ್ಸಲಿಸಂ ಅನ್ನು ಅಳಿಸಿಹಾಕಿದಾಗ ಮಾತ್ರ ಶಾಂತಿಯುತ, ಸುಂದರವಾದ ಬಸ್ತಾರ್ ಅನ್ನು ಕಲ್ಪಿಸಿಕೊಳ್ಳಬಹುದು. "ನಕ್ಸಲರ ಸಿದ್ಧಾಂತವು ವಿಭಿನ್ನವಾಗಿದೆ. ನಾವು ಪ್ರಜಾಸತ್ತಾತ್ಮಕವಾಗಿ ಮತ ಚಲಾಯಿಸುವ ಮೂಲಕ ದೇಶದಲ್ಲಿ ಸರ್ಕಾರವನ್ನು ಆಯ್ಕೆ ಮಾಡುತ್ತೇವೆ. ಆದರೆ ನಕ್ಸಲರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಬೇಕಾಗಿಲ್ಲ. ನಕ್ಸಲೀಯರು ಬಂಡವಾಳಶಾಹಿಯನ್ನು ವಿರೋಧಿಸುತ್ತಾರೆ. ನಕ್ಸಲೀಯರು ಸಮಾಜವಾದ ಮತ್ತು ಕಮ್ಯುನಿಸಂ ಮೂಲಕ ತಮ್ಮ ಆಡಳಿತ ಸ್ಥಾಪಿಸಲು ಪ್ರಯತ್ನಿಸುತ್ತಾರೆ." ಎಂದರು ಹಿರಿಯ ಪತ್ರಕರ್ತ ಮನೀಶ್ ಗುಪ್ತಾ.

"ನಕ್ಸಲರು ಮಾವೋವಾದದ ಸಿದ್ಧಾಂತವನ್ನು ನಂಬುತ್ತಾರೆ. ಮಾವೋ ಝೆಡಾಂಗ್ ಒಬ್ಬ ಚೀನೀ ಚಿಂತಕ. ಅವರು ಕಮ್ಯುನಿಸಂ ಅನ್ನು ಆಡಳಿತದ ಮಾರ್ಗವಾಗಿ ಪ್ರತಿಪಾದಿಸಿದ್ದಾರೆ. ಬಂದೂಕಿನ ಬ್ಯಾರೆಲ್ ನಿಂದ ಶಕ್ತಿ ಹೊರಹೊಮ್ಮುತ್ತದೆ ಎಂದು ಮಾವೋ ನಂಬುತ್ತಾರೆ. ಬಲವಂತದಿಂದ ಮತ್ತು ಬಂದೂಕಿನ ತುದಿಯಲ್ಲಿ ಅಧಿಕಾರವನ್ನು ಪಡೆಯುವ ಮೂಲಕ, ನಾವು ಕಮ್ಯುನಿಸಂ ಪರಿಕಲ್ಪನೆ ಸ್ಥಾಪಿಸಬಹುದು ಎಂಬುದು ಅವರ ನಂಬಿಕೆಯಾಗಿದೆ" ಎಂದು ಮನೀಶ್ ಗುಪ್ತಾ ಹೇಳಿದರು.

ನಕ್ಸಲೀಯರಿಗೆ ಗೃಹ ಸಚಿವ ವಿಜಯ್ ಶರ್ಮಾ ಹೇಳಿದ್ದೇನು?: ಛತ್ತೀಸ್ ಗಢದ ಗೃಹ ಸಚಿವ ವಿಜಯ್ ಶರ್ಮಾ ಬುಧವಾರ ಜಗದಾಲ್ ಪುರಕ್ಕೆ ಭೇಟಿ ನೀಡಿದ್ದರು. ನಕ್ಸಲ್ ಸಮಸ್ಯೆಯನ್ನು ನಿವಾರಿಸಲು ಬಸ್ತಾರ್​ನ ಹಿರಿಯ ಪತ್ರಕರ್ತರು ಮತ್ತು ನಕ್ಸಲ್ ತಜ್ಞರಿಂದ ಅವರು ಸಲಹೆಗಳನ್ನು ಆಹ್ವಾನಿಸಿದ್ದಾರೆ.

"ನಕ್ಸಲೀಯರ ಪುನರ್ವಸತಿಯು ಸರ್ಕಾರದ ಜವಾಬ್ದಾರಿಯಾಗಿದೆ. ಪುನರ್ವಸತಿ ಬಯಸುವ ನಕ್ಸಲರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿ. ಇದಕ್ಕಾಗಿ, ಇಮೇಲ್ ಐಡಿ, ಗೂಗಲ್ ಫಾರ್ಮ್ ಮತ್ತು ಫಾರ್ಮ್ ಗಳ ವ್ಯವಸ್ಥೆ ಮಾಡಲಾಗಿದೆ. ಈ ಮಾರ್ಗಗಳ ಮೂಲಕ ನಕ್ಸಲರು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಿ" ಎಂದು ಛತ್ತೀಸಗಢ ಗೃಹ ಸಚಿವ ವಿಜಯ್ ಶರ್ಮಾ ಹೇಳಿದರು.

ಶರಣಾಗುವ ನಕ್ಸಲೀಯರಿಗೆ ಸಿಗಲಿದೆ ಪುನರ್ವಸತಿ ಯೋಜನೆಯ ಲಾಭ: ಈ ಬಗ್ಗೆ ಮಾತನಾಡಿದ ಸುಕ್ಮಾ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರಖೇಚಾ, "ಶರಣಾಗುವ ನಕ್ಸಲರು ಪುನರ್ವಸತಿ ಯೋಜನೆಯ ಹಲವಾರು ಲಾಭಗಳನ್ನು ಪಡೆಯಬಹುದು. ಶರಣಾಗತರಾಗುವವರಿಗೆ ತಕ್ಷಣವೇ 25,000 ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ನಕ್ಸಲೀಯರು ಶಸ್ತ್ರಾಸ್ತ್ರಗಳೊಂದಿಗೆ ಶರಣಾದರೆ ಆಯುಧದ ವರ್ಗಕ್ಕೆ ಅನುಗುಣವಾಗಿ ಹಣ ನೀಡಲಾಗುತ್ತದೆ. ನಕ್ಸಲ್ ಸಂಘಟನೆಯ ಹುದ್ದೆಗೆ ಅನುಗುಣವಾಗಿ ಘೋಷಿತ ಎಫ್ಎನ್ಎಎಂ ಮೊತ್ತವನ್ನು ಸಹ ನೀಡಲಾಗುತ್ತದೆ. ಅರ್ಹತೆಗೆ ಅನುಗುಣವಾಗಿ ಪೊಲೀಸ್ ಇಲಾಖೆ ಮತ್ತು ಇತರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಗಳನ್ನು ನೀಡಲಾಗುತ್ತದೆ. ಇದಲ್ಲದೆ, ನಕ್ಸಲೀಯರಿಗೆ ಭೂಮಿ ಮತ್ತು ವಸತಿ ಸೌಲಭ್ಯವನ್ನು ಸಹ ನೀಡಲಾಗುತ್ತದೆ." ಎಂದು ಮಾಹಿತಿ ನೀಡಿದರು.

ಶರಣಾಗತರಾದ ನಕ್ಸಲೀಯರ ಅಭಿಪ್ರಾಯ ಹೀಗಿದೆ: ಈಗಾಗಲೇ ಶರಣಾಗತರಾದ ನಕ್ಸಲರು ಈ ಬಗ್ಗೆ ಮಾತನಾಡಿದರು. "ಕೆಲ ವರ್ಷಗಳ ಹಿಂದೆ ನಕ್ಸಲ್ ಸಂಘಟನೆಯನ್ನು ತೊರೆದು ನಾವು ಮುಖ್ಯವಾಹಿನಿಗೆ ಬಂದಿದ್ದೇವೆ. ನಮಗೆ ಪುನರ್ವಸತಿ ಯೋಜನೆಯ ಲಾಭ ದೊರಕಿದೆ. ಈಗ ನಾವು ಕುಟುಂಬದೊಂದಿಗೆ ನೆಮ್ಮದಿಯಾಗಿ ಬಾಳುತ್ತಿದ್ದೇವೆ. ನನಗೆ ಕೆಲಸವೂ ಸಿಕ್ಕಿದೆ. ನಕ್ಸಲೈಟ್ ಸಂಘಟನೆಯಲ್ಲಿ ದೊಡ್ಡ ಸ್ಥಾನವನ್ನು ಹೊಂದಿದ್ದರಿಂದ ನನಗೆ ಬಹುಮಾನ ಸಹ ನೀಡಲಾಯಿತು." ಎಂದು ಶರಣಾದ ನಕ್ಸಲೀಯರೊಬ್ಬರುಬ ತನ್ನ ಮನದಾಳದ ಮಾತು ಹಂಚಿಕೊಂಡರು.

"ಛತ್ತೀಸಗಢದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ, ನೂತನ ಗೃಹ ಸಚಿವರು ಹೊಸ ಪುನರ್ವಸತಿ ನೀತಿಯನ್ನು ರೂಪಿಸಲು ನಿರ್ಧರಿಸಿದ್ದಾರೆ. ಹಳೆಯ ಪುನರ್ವಸತಿ ನೀತಿಯ ಬಗ್ಗೆ ನಕ್ಸಲೀಯರಲ್ಲಿ ಯಾವುದೇ ಉತ್ಸಾಹವಿರಲಿಲ್ಲ. ಈಗ ಗೃಹ ಸಚಿವರ ಈ ಕ್ರಮವು ಛತ್ತೀಸಗಢದ ನಕ್ಸಲರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಶರಣಾಗಲು ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹೋಗುವ ಮಾವೋವಾದಿಗಳು ಛತ್ತೀಸಗಢದಲ್ಲಿಯೇ ಶರಣಾಗುತ್ತಾರೆ. ಗೃಹ ಸಚಿವರ ಈ ಸಲಹೆಗೆ ನಕ್ಸಲೀಯರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಈಗ ನೋಡಬೇಕಾಗಿದೆ." ಎಂಬುದು ನಕ್ಸಲ್ ವಿಷಯಗಳ ಬಗೆಗಿನ ತಜ್ಞರ ಮಾತು.

ಇದನ್ನೂ ಓದಿ : ಡಿಡಿ ಕಿಸಾನ್​ನಲ್ಲಿ 50 ಭಾಷೆಗಳಲ್ಲಿ ಸುದ್ದಿ ಓದಲಿದ್ದಾರೆ ಎಐ ಆ್ಯಂಕರ್ಸ್​ - DD Kisan Adopts AI Anchors

ETV Bharat Logo

Copyright © 2024 Ushodaya Enterprises Pvt. Ltd., All Rights Reserved.