ಕರ್ನಾಟಕ

karnataka

ಚೀನಾ ಬೆದರಿಕೆ ಬೆನ್ನಲ್ಲೇ ತೈವಾನ್‌ನಿಂದ ಹೊರಟ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ

By

Published : Aug 3, 2022, 6:11 PM IST

ಯುಎಸ್‌ ಹೌಸ್ ಸ್ಪೀಕರ್‌ ನ್ಯಾನ್ಸಿ ಪೆಲೊಸಿ ನಿನ್ನೆ ತೈವಾನ್‌ಗೆ ಭೇಟಿ ನೀಡಿದ್ದರು. ಇದು ನೆರೆಯ ಚೀನಾದ ಕಣ್ಣು ಕೆಂಪಗಾಗಿಸಿದೆ. ಅಮೆರಿಕ ಈ ನಡೆಯನ್ನು ಕಠಿಣ ಪದಗಳಲ್ಲಿ ವಿರೋಧಿಸಿರುವ ಚೀನಾ ಹಲವು ವ್ಯಾಪಾರ ನಿರ್ಬಂಧಗಳ ಮೂಲಕ ತೈವಾನ್‌ ಅನ್ನು ದಂಡಿಸಿದೆ. ಇದೇ ಸಂದರ್ಭದಲ್ಲಿ ನ್ಯಾನ್ಸಿ ಪೆಲೊಸಿ, ತೈವಾನ್‌ನಿಂದ ತೆರಳಿದ್ದಾರೆ.

ತೈವಾನ್‌ನಿಂದ ಹೊರಟ ಯುಎಸ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ: ಭೇಟಿಗೆ ಕಾರಣ ಏನು!?
US House Speaker Nancy Pelosi

ಬೀಜಿಂಗ್: ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ತೈವಾನ್ ಭೇಟಿಯನ್ನು ಚೀನಾ ವಿರೋಧಿಸಿದೆ. ಜೊತೆಗೆ, ಅಮೆರಿಕಕ್ಕೆ ಕಠಿಣ ಪರಿಣಾಮದ ಎಚ್ಚರಿಕೆಯನ್ನೂ ನೀಡಿದೆ. ತೈವಾನ್‌ ಅನ್ನು ತನ್ನ ದೇಶದ ಭಾಗವೆಂದು ಚೀನಾ ಹೇಳುತ್ತಿದೆ. ಈ ವಿಚಾರ ಅಮೆರಿಕ ಮತ್ತು ಚೀನಾ ನಡುವೆ ದುಷ್ಮನಿಗೆ ಕಾರಣವಾಗಿದೆ.

ಚೀನಾ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ತೈವಾನ್‌ಗೆ ಭೇಟಿ ನೀಡಿರುವ ನ್ಯಾನ್ಸಿ ಪೆಲೊಸಿ ಇದೀಗ ಅಲ್ಲಿಂದ ನೇರವಾಗಿ ದಕ್ಷಿಣ ಕೊರಿಯಾಗೆ ತೆರಳಿದ್ದಾರೆ. ಇದಕ್ಕೂ ಮೊದಲು ನ್ಯಾನ್ಸಿ ಪೆಲೊಸಿ ಅವರಿದ್ದ ವಿಮಾನ ತೈವಾನ್‌ನ ತಪೈನಿಂದ ಟೇಕ್ ಆಫ್ ಸಾಧ್ಯವಾಗುತ್ತದೋ ಇಲ್ಲವೋ ಎಂಬ ಚರ್ಚೆ ನಡೆದಿತ್ತು. ತೈವಾನ್ ಬಳಿಯ ವಾಯುಪ್ರದೇಶ ಬಳಸದಂತೆ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳಿಗೆ ಸೂಚನೆ ನೀಡಿ ಚೀನಾ ಆದೇಶಿಸಿತ್ತು. ಚೀನಾದ ಈ ಎಚ್ಚರಿಕೆಯ ನಂತರ ಅನೇಕ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗ ಬದಲಾಯಿಸಿ ಸಂಚರಿಸಿದ್ದವು.

ತೈವಾನ್‌ ಪ್ರಜಾಪ್ರಭುತ್ವಕ್ಕೆ ನಮ್ಮ ಬೆಂಬಲವಿದೆ ಎಂದು ಅಮೆರಿಕ ಹೇಳುತ್ತಿದೆ. ಹಾಗೆಯೇ ರಕ್ಷಣೆ, ಆರ್ಥಿಕತೆ ಸೇರಿದಂತೆ ಪ್ರತಿಯೊಂದು ವಿಷಯದಲ್ಲೂ ತೈವಾನ್ ಜೊತೆ ನಿಲ್ಲುವ ಬಗ್ಗೆ ಮಾತನಾಡಿದೆ. ಅವರ ತೈವಾನ್ ಭೇಟಿಗೆ ಅಮೆರಿಕದ ವಿರುದ್ಧ ಚೀನಾ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೆಯೇ ನ್ಯಾನ್ಸಿ ಪೆಲೊಸಿ ಅವರ ಕಠಿಣ ನಿಲುವು ಚೀನಾ ಮತ್ತು ಅಮೆರಿಕ ನಡುವಿನ ವಿವಾದಕ್ಕೆ ಮತ್ತಷ್ಟು ಪ್ರಚೋದನೆ ನಿಡಿದೆ.

ಇದನ್ನೂ ಓದಿ:ಪೆಲೋಸಿ ತೈವಾನ್ ಭೇಟಿ: ಆಕ್ರೋಶಿತ ಚೀನಾದಿಂದ ಮಿಲಿಟರಿ ಡ್ರಿಲ್

ABOUT THE AUTHOR

...view details