ಕರ್ನಾಟಕ

karnataka

ಧಾರಾಕಾರ ಮಳೆಗೆ ಡೊಮಿನಿಕನ್ ರಿಪಬ್ಲಿಕ್‌ ದೇಶ ತತ್ತರ; 21 ಮಂದಿ ಸಾವು

By ETV Bharat Karnataka Team

Published : Nov 21, 2023, 8:49 AM IST

Heavy rain in Dominican Republic: ಡೊಮಿನಿಕನ್ ರಿಪಬ್ಲಿಕ್‌ ದೇಶದಲ್ಲಿ ಭಾರಿ ಮಳೆಗೆ ಈವರೆಗೆ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯ ಸುರಂಗದ ಗೋಡೆ ಕುಸಿದು ಶನಿವಾರ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

Heavy rain in Dominican Republic  Tunnel collapse  at least 9 died  ಗೋಡೆ ಕುಸಿದು 9 ಜನ ಸೇರಿ 21 ಮಂದಿ ಸಾವು  ಧಾರಾಕಾರ ಮಳೆಗೆ ಡೊಮಿನಿಕನ್ ರಿಪಬ್ಲಿಕ್‌ ತತ್ತರ  ಡೊಮಿನಿಕನ್ ರಿಪಬ್ಲಿಕ್‌ದಲ್ಲಿ ಭಾರೀ ಮಳೆ  ಧಾರಾಕಾರ ಮಳೆಗೆ ನಲುಗಿದ ದೇಶ  ಪರಿಣಾಮ ಹಲವಾರು ಕಾರುಗಳು ಜಖಂ  ಮಳೆಯಿಂದಾಗಿ ವಿದ್ಯುತ್ ಕಡಿತ
ಧಾರಾಕಾರ ಮಳೆಗೆ ಡೊಮಿನಿಕನ್ ರಿಪಬ್ಲಿಕ್‌ ತತ್ತರ

ಸ್ಯಾಂಟೋ ಡೊಮಿಂಗೊ:ದೇಶದ ಹಲವೆಡೆ ಸುರಿದಭಾರಿ ಮಳೆಯಿಂದಾಗಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಸುರಂಗದ ಕಾಂಕ್ರಿಟ್ ಗೋಡೆ ಕುಸಿದು 9 ಜನರು ಅಸುನೀಗಿದ ಘಟನೆ ಸ್ಯಾಂಟೋ ಡೊಮಿಂಗೊ ​​ಪ್ರದೇಶದಲ್ಲಿ ನಡೆದಿದೆ. ಧಾರಾಕಾರ ಮಳೆ ಮತ್ತು ಪ್ರವಾಹದಿಂದಾಗಿ ಸುರಂಗದ ಗೋಡೆ ಕುಸಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಹನಗಳು ವೇಗವಾಗಿ ಚಲಿಸಲು ಈ ಸುರಂಗ ಮಾರ್ಗ ನಿರ್ಮಿಸಲಾಗಿತ್ತು. ಧಾರಾಕಾರ ಮಳೆಯಿಂದ ಸುರಂಗದ ಗೋಡೆಯ ಒಂದು ಭಾಗ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕಾರು ಹಾಗೂ ಇತರೆ ವಾಹನಗಳ ಮೇಲೆ ದಿಢೀರ್ ಕುಸಿದು ಬಿದ್ದಿದೆ. ಪರಿಣಾಮ ಹಲವಾರು ಕಾರುಗಳು ಜಖಂಗೊಂಡಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಕ್ಕಿಹಾಕಿಕೊಂಡ ವಾಹನಗಳನ್ನು ಹೊರತೆಗೆಯಲು ತುರ್ತು ಸಿಬ್ಬಂದಿ ರಕ್ಷಣಾ ಕಾರ್ಯ ಕೈಗೊಂಡರು.

ಗೋಡೆ ಕುಸಿದು ಒಳಗಡೆ ನಿರ್ಮಿಸಿದ್ದ ಪೈಪ್‌ಲೈನ್​ಗಳನ್ನು ಒಡೆದು ಸುರಂಗದಲ್ಲಿ ನೀರು ತುಂಬಿಕೊಂಡಿದೆ. ಪರಿಹಾರ ಕಾರ್ಯಕ್ಕೆ ನೀರು ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಣ ಕಳೆದುಕೊಂಡವರಲ್ಲಿ ಐವರು ಪುರುಷರು ಮತ್ತು ನಾಲ್ವರು ಮಹಿಳೆಯರು ಸೇರಿದ್ದಾರೆ. "ನಾವು ಆ ಪ್ರದೇಶದಲ್ಲಿ ಸುಮಾರು ಒಂಬತ್ತು ಶವಗಳನ್ನು ವಶಪಡಿಸಿಕೊಂಡಿದ್ದೇವೆ" ಎಂದು ನಾಗರಿಕ ರಕ್ಷಣಾ ಕಾರ್ಯಾಚರಣೆಗಳ ಉಪ ನಿರ್ದೇಶಕ ಡೆಲ್ಫಿನ್ ರೋಡ್ರಿಗಸ್ ತಿಳಿಸಿದರು.

ಕೆರಿಬಿಯನ್ ದೇಶದ 13,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ಭಾನುವಾರ ಮಧ್ಯಾಹ್ನ ವರದಿಯಲ್ಲಿ ತಿಳಿಸಿದೆ. ಹಲವೆಡೆ ವಿದ್ಯುತ್ ಕಡಿತ, ಸೇತುವೆ ಮತ್ತು ರಸ್ತೆಗಳ ಭಾಗಗಳು ಹಾನಿಗೊಳಗಾಗಿವೆ. ಭದ್ರತಾ ಸಂಸ್ಥೆಗಳು 2,500ಕ್ಕೂ ಹೆಚ್ಚು ಜನರನ್ನು ರಕ್ಷಿಸಿವೆ. ಚಂಡಮಾರುತದಿಂದ 2,600ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಅನೇಕರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸಿಒಇ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋಗಳಲ್ಲಿ ರಸ್ತೆ ಮೇಲೆ ಹರಿಯುವ ನೀರು ಮತ್ತು ಕಟ್ಟಡಗಳಿಗೆ ಪ್ರವಾಹದ ನೀರು ನುಗ್ಗಿರುವುದನ್ನು ಕಾಣಬಹುದು.

ಇದನ್ನೂ ಓದಿ:ಉತ್ತರಕಾಶಿ: ಸುರಂಗದೊಳಗೆ 9 ದಿನಗಳಿಂದ 41 ಕಾರ್ಮಿಕರ ಜೀವನ್ಮರಣದ ಹೋರಾಟ; ಭರದಿಂದ ಸಾಗಿದ ಪರ್ಯಾಯ ರಕ್ಷಣಾ ಕಾರ್ಯ

ABOUT THE AUTHOR

...view details