ಕರ್ನಾಟಕ

karnataka

ಇಸ್ಲಾಮಿಕ್ ಸ್ಟೇಟ್‌ ಮೇಲೆ ಪ್ರತಿದಾಳಿ ನಡೆಸಿದ ಅಮೆರಿಕ ಸೇನೆ: 3 ಮಕ್ಕಳು ಬಲಿ

By

Published : Aug 30, 2021, 8:04 AM IST

ಐಎಸ್ ಉಗ್ರರನ್ನು ಗುರಿಯಾಗಿಸಿಕೊಂಡು ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕ ಸೇನೆ
ಅಮೆರಿಕ ಸೇನೆ

ಕಾಬೂಲ್: ಇಸ್ಲಾಮಿಕ್‌ ಸ್ಟೇಟ್‌(ಐಎಸ್) ಆತ್ಮಾಹುತಿ ಬಾಂಬ್​ ದಾಳಿಕೋರರ ವಿರುದ್ಧ ಯುಎಸ್‌ ಮಿಲಿಟರಿ ಪಡೆ ನಡೆಸಿದ ಡ್ರೋನ್​ ದಾಳಿಯಲ್ಲಿ ಮೂವರು ಮಕ್ಕಳು ಅಸುನೀಗಿದ್ದಾರೆ.

ಆತ್ಮಾಹುತಿ ಬಾಂಬ್​ ದಾಳಿಕೋರರು ಸ್ಫೋಟಕಗಳನ್ನು ವಾಹನಗಳಲ್ಲಿ ಸಾಗಿಸುತ್ತಿದ್ದ ವೇಳೆ ಅಮೆರಿಕ ಸೇನೆಯು ಭಾನುವಾರ ಎರಡನೇ ಪ್ರತಿದಾಳಿ ನಡೆಸಿತು.

ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಐಎಸ್‌ ಉಗ್ರರು ಗುರುವಾರ ನಡೆಸಿದ್ದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ 200 ಮಂದಿ ಮೃತಪಟ್ಟಿದ್ದರು. ಅಮೆರಿಕದ 13 ಸೈನಿಕರು ಕೂಡ ಬಲಿಯಾಗಿದ್ದರು. ಅದರ ಬಳಿಕ, ಐಎಸ್‌ ಮೇಲೆ ಅಮೆರಿಕವು ಭಾನುವಾರ ಎರಡನೇ ದಾಳಿಯನ್ನು ನಡೆಸಿದೆ.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಅತ್ಯಂತ ಅಪಾಯಕಾರಿಯಾಗಿಯೇ ಇದೆ. ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಉಗ್ರರು ಮತ್ತೆ ದಾಳಿ ನಡೆಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದ್ದು, ದೇಶದಲ್ಲಿ ಐ.ಎಸ್‌ ಉಗ್ರರ ದಾಳಿ ಮತ್ತು ಅದಕ್ಕೆ ಅಮೆರಿಕ ಸೈನಿಕರ ಪ್ರತಿದಾಳಿಯು ಮುಂದುವರೆದಿದೆ.

ABOUT THE AUTHOR

...view details