ಕರ್ನಾಟಕ

karnataka

ಬಿಟ್ ಕಾಯಿನ್ ಹಗರಣವನ್ನು ಬಳಸಿ ಟ್ವಿಟರ್ ಹ್ಯಾಕ್ ಮಾಡಿದ್ದ ಮೂವರ ವಿರುದ್ಧ ಪ್ರಕರಣ

By

Published : Aug 1, 2020, 2:38 PM IST

ಬರಾಕ್ ಒಬಾಮ, ಬಿಲ್ ಗೇಟ್ಸ್, ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಸೇರಿದಂತೆ 130 ಉನ್ನತ ಬಳಕೆದಾರರ ಟ್ವಿಟರ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಮೂವರ ವಿರುದ್ಧ ಕೇಸ್‌ ದಾಖಲು..

ಸ್ಯಾನ್ ಫ್ರಾನ್ಸಿಸ್ಕೋ :ಯುಕೆಯ 19 ವರ್ಷದ ಮೇಸನ್ ಶೆಪರ್ಡ್ ವಿರುದ್ಧ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಕ್ರಿಮಿನಲ್ ದೂರಿನಡಿ ವೈರ್ ಫ್ರಾಡ್ ಮಾಡಲು ಸಂಚು, ಮನಿ ಲಾಂಡ್‌ರಿಂಗ್ ಸಂಚು ಮತ್ತು ಸಂರಕ್ಷಿತ ಕಂಪ್ಯೂಟರ್​ನೊಳಗೆ ಉದ್ದೇಶಪೂರ್ವಕವಾಗಿ ಆ್ಯಕ್ಸೆಸ್ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.

ಟ್ವಿಟರ್ ಹ್ಯಾಕ್ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲು

ಫ್ಲೋರಿಡಾದ ಒರ್ಲ್ಯಾಂಡೊದ ನಿಮಾ ಫಜೇಲಿ ಮೇಲೆ ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯಲ್ಲಿ ಕ್ರಿಮಿನಲ್ ದೂರಿನ ಆರೋಪಿತರ ಸುರಕ್ಷತೆಗೆ ಸಹಾಯ ಮಾಡಿದ ಹಾಗೂ ಕಂಪ್ಯೂಟರ್‌ನ ಉದ್ದೇಶಪೂರ್ವಕ ಆ್ಯಕ್ಸೆಸ್​ಗೆ ಸಹಾಯ ಮಾಡಿದ ಆರೋಪ ಹೊರಿಸಲಾಗಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.

ಟ್ವಿಟರ್ ಹ್ಯಾಕ್ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲು

ಮೂರನೇ ಅಪರಾಧಿ ಬಾಲಾಪರಾಧಿಯಾಗಿದ್ದಾನೆ. ಬಾಲಾಪರಾಧಿಗಳ ಗುರುತನ್ನು ಬಹಿರಂಗಪಡಿಸಲಾಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.

ಟ್ವಿಟರ್ ಹ್ಯಾಕ್ ಮಾಡಿದ್ದವರ ವಿರುದ್ಧ ಪ್ರಕರಣ ದಾಖಲು

ಕ್ರಿಪ್ಟೋಕರೆನ್ಸಿ ಹಗರಣದಲ್ಲಿ ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ವ್ಯವಹಾರಗಳ ಬೃಹತ್ ಟ್ವಿಟರ್ ಖಾತೆಗಳು ಹ್ಯಾಕಿಂಗ್​ಗೆ ಒಳಗಾಗಿವೆ ಎಂದು ಟ್ವಿಟರ್ ನಿನ್ನೆ ಬಹಿರಂಗಪಡಿಸಿದೆ.

ABOUT THE AUTHOR

...view details