ಕರ್ನಾಟಕ

karnataka

ತೆಲುಗಿನಲ್ಲಿ ಅಬ್ಬರಿಸಲು ರೆಡಿಯಾದ ಶಿವಣ್ಣ: ವೇದ ಟ್ರೈಲರ್​ ರಿಲೀಸ್

By

Published : Jan 31, 2023, 5:30 PM IST

ನಟ ಶಿವ ರಾಜ್​ಕುಮಾರ್​ ಅಭಿನಯದ ವೇದ ಚಿತ್ರದ ತೆಲುಗು ಅವತರಣಿಕೆಯ ಟ್ರೈಲರ್ ಬಿಡುಗಡೆ ಆಗಿದೆ.

Telugu version Veda trailer
ತೆಲುಗು ವೇದ ಟ್ರೈಲರ್​ ರಿಲೀಸ್

ಪರಭಾಷೆಯ ಸಿನಿಮಾ ನಟರು ಕನ್ನಡ ಸಿನಿಮಾಗಳಲ್ಲಿ ಹಾಗೂ ಕನ್ನಡದ ಸ್ಟಾರ್ ನಟರು ಬೇರೆ ಭಾಷೆಯ ಸ್ಟಾರ್​ಗಳ ಚಿತ್ರಗಳಲ್ಲಿ ಅಭಿನಯಿಸುವ ಟ್ರೆಂಡ್ ಶುರುವಾಗಿದೆ. ಇದೀಗ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಮತ್ತೊಮ್ಮೆ ಟಾಲಿವುಡ್​​ಗೆ ಕಾಲಿಡುತ್ತಿದ್ದಾರೆ. ಈ ಹಿಂದೆ ಟಾಲಿವುಡ್​​ನ ಬಾಲಯ್ಯ ಅಭಿನಯದ ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿ ಶಿವಣ್ಣ ನಟಿಸಿದ್ದರು. ಸದ್ಯ ಪೂರ್ಣ ಪ್ರಮಾಣದ ಹೀರೋ ಆಗಿ ತೆರೆಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ.

ಹೌದು, ಹ್ಯಾಟ್ರಿಕ್ ಹೀರೋ ಶಿವ ರಾಜ್​ಕಮಾರ್ ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಂಡಿರುವ ವೇದ ಸಿನಿಮಾ ರಾಜ್ಯಾದ್ಯಂತ ಅಬ್ಬರಿಸಿದ ಮೇಲೆ ಈಗ ಪಕ್ಕದ ರಾಜ್ಯಗಳಲ್ಲಿ ತೆಲುಗಿನಲ್ಲಿ ಆರ್ಭಟಿಸೋಕೆ ರೆಡಿಯಾಗಿದೆ. ವೇದ ಸಿನಿಮಾದ ತೆಲುಗು ಅವತರಣಿಕೆಯಲ್ಲಿ ಬಿಡುಗಡೆ ಆಗಲಿದ್ದು, ಆ ಚಿತ್ರದ ಅಧಿಕೃತ ಟ್ರೈಲರ್ ಅನಾವರಣಗೊಂಡಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗು ಅನ್ಯಾಯಕ್ಕೆ ಸರಿಯಾದ ಶಿಕ್ಷೆ ಕೊಡುವ ಕಥೆ ಒಂದು ಕಡೆಯಾದ್ರೆ, ತೆಲುಗು ಸಿನಿಮಾ ಪ್ರೇಮಿಗಳು ಇಷ್ಟ ಪಡುವ ಮಾಸ್ ಅಂಡ್ ಕ್ಲಾಸ್ ಎಲಿಮೆಂಟ್ಸ್​​ಗಳು ಈ ಸಿನಿಮಾದಲ್ಲಿರೋ ಕಾರಣ ಶಿವ ರಾಜ್​​ಕುಮಾರ್ ಅವರ ವೇದ ಸಿನಿಮಾ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತೆಲುಗಿನ ವೇದ ಸಿನಿಮಾ ಮೂಲಕ ಟಾಲಿವುಡ್​ಗೆ ಗ್ರ್ಯಾಂಡ್​​ ಎಂಟ್ರಿ ಕೊಡ್ತಾ ಇದ್ದಾರೆ ಕರುನಾಡ ಚಕ್ರವರ್ತಿ ಶಿವ ರಾಜ್​ಕುಮಾರ್.

ವೇದ ಸಿನಿಮಾದಲ್ಲಿ ಶಿವ ರಾಜ್​ಕುಮಾರ್​ ಮತ್ತು ಅದಿತಿ ಸಾಗರ್ ಅವರ ಕಾಂಬಿನೇಷನ್​ ಸಿನಿ ಪ್ರಿಯರಿಗೆ ಇಷ್ಟ ಆಗಿದ್ದು, ತೆಲುಗು ಪ್ರೇಕ್ಷಕರೂ ಸಹ ಇಷ್ಟ ಪಡ್ತಾರೆ ಅನ್ನೋದು ಚಿತ್ರತಂಡದ ಭರವಸೆ. ಜೊತೆಗೆ ಗಾನವಿ ಲಕ್ಷ್ನಣ್, ಶ್ವೇತಾ ಚಂಗಪ್ಪ, ವೀಣಾ ಪೊನ್ನಪ್ಪ, ಹಿರಿಯ ನಟಿ ಉಮಾಶ್ರೀ, ರಘು ಶಿವಮೊಗ್ಗ ಪಾತ್ರಗಳು ಸಹ ತೆಲುಗು ಸಿನಿಪ್ರಿಯರಿಗೆ ಇಷ್ಟ ಆಗಲಿದೆ.

ಇದನ್ನೂ ಓದಿ:ಕಿಚ್ಚ ಸುದೀಪ್ ಸಿನಿ ಪಯಣಕ್ಕೆ 27 ವಸಂತ..ಪ್ಯಾನ್​ ಇಂಡಿಯಾ ಸ್ಟಾರ್​ ಜರ್ನಿ ಇಲ್ಲಿದೆ

ನಿರ್ದೇಶಕ ಎ ಹರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸ್ವಾಮಿ ಜೆ. ಗೌಡ ಕ್ಯಾಮರಾ ವರ್ಕ್ ವೇದ ಸಿನಿಮಾದ ಅಂದವನ್ನ ಹೆಚ್ಚಿಸಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ರವಿ ಸಂತೆಹಕ್ಲು ಅವರ ಅದ್ಧೂರಿ ಸೆಟ್​ಗಳಲ್ಲಿ ವೇದ ಚಿತ್ರದ ಶೂಟಿಂಗ್ ನಡೆದಿದೆ. ಗೀತಾ ಪಿಕ್ಚರ್ ಬ್ಯಾನರ್ ಅಡಿಯಲ್ಲಿ ಗೀತಾ ಶಿವ ರಾಜ್​ಕುಮಾರ್ ನಿರ್ಮಿಸಿರುವ ಚೊಚ್ಚಲ ಸಿನಿಮಾ ಮಹಿಳೆಯರ ಶಕ್ತಿ ಕುರಿತಾಗಿದೆ. ಕನ್ನಡದ ವೇದ ಈವರೆಗೆ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಕನ್ನಡದಲ್ಲಿ ವೇದ ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಗುವ ಮೂಲಕ 50 ದಿನಗಳನ್ನು ಪೂರೈಸಿದೆ. ಡಿಸೆಂಬರ್ 23 ರಂದು ರಾಜ್ಯದೆಲ್ಲೆಡೆ ವೇದ ರಿಲೀಸ್ ಆಗಿ, ತೆರೆಕಂಡ ಎಲ್ಲಾ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್​ನೊಂದಿಗೆ ಕನ್ನಡ ನಾಡಿನ ಜನರ ಮನಸ್ಸನ್ನು ಗೆದ್ದಿತ್ತು. ಈ ಪ್ರೀತಿಗಾಗಿ ಶಿವ ರಾಜ್​ಕುಮಾರ್ ಅಂಡ್ ಟೀಮ್ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಗಿ ಅಭಿಮಾನಿಗಳಿಗೆ ಕೃತಜ್ಞತೆ ತಿಳಿಸಿದ್ದರು. ಈ ಎಲ್ಲಾ ಸಕ್ಸಸ್ ಬಳಿಕ ವೇದ ಸಿನಿಮಾ ಈಗ ತೆಲುಗು ಚಿತ್ರರಂಗದಲ್ಲಿ ಫೆಬ್ರವರಿ 9ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಟಾಲಿವುಡ್ ಚಿತ್ರರಂಗದಲ್ಲಿ ಹ್ಯಾಟ್ರಿಕ್ ಹೀರೋ ವೇದನನ್ನು ಯಾವ ರೀತಿ ಬರಮಾಡಿಕೊಳ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಇದನ್ನೂ ಓದಿ:ವೇದ ಸಕ್ಸಸ್ ಹಿನ್ನೆಲೆ ಹೆಸರಿಡದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕರುನಾಡ ಚಕ್ರವರ್ತಿ

ABOUT THE AUTHOR

...view details