ಕರ್ನಾಟಕ

karnataka

ಮಗಳು ಹುಟ್ಟಿ ಕೆಲವೇ ದಿನಗಳಲ್ಲಿ ಶೂಟಿಂಗ್​ನಲ್ಲಿ ಭಾಗಿ: 'ತುಮ್ ಕ್ಯಾ ಮಿಲೇ' ಅನುಭವ ಹಂಚಿಕೊಂಡ ಆಲಿಯಾ ಭಟ್​

By

Published : Jul 4, 2023, 6:45 PM IST

ನಟಿ ಆಲಿಯಾ ಭಟ್​ ಪ್ರಸವದ ನಂತರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ 'ತುಮ್ ಕ್ಯಾ ಮಿಲೇ' ರೊಮ್ಯಾಂಟಿಕ್​ ಹಾಡಿನ ಶೂಟಿಂಗ್​ನಲ್ಲಿ​ ಭಾಗಿಯಾಗಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ.

Alia Bhatt
ನಟಿ ಆಲಿಯಾ ಭಟ್​ ಪೋಸ್ಟ್​

ಬಾಲಿವುಡ್​​ ಬಹುಬೇಡಿಕೆ ತಾರೆ ಆಲಿಯಾ ಭಟ್ ಪ್ರಸ್ತುತ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮಾನವಾಗಿ ಬ್ಯಾಲೆನ್ಸ್​ ಮಾಡುತ್ತಿದ್ದಾರೆ. ಮಗುವಿನ ಆರೈಕೆಯೊಂದಿಗೆ ಸಿನಿಮಾ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ಅವರ ನಟನೆಯ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಈಗಾಗಲೇ ಬಿಡುಗಡೆಗೆ ಸಿದ್ಧವಾಗುತ್ತಿದೆ. ಇಂದು ಚಿತ್ರದ ಟ್ರೇಲರ್​ ಕೂಡ ಬಿಡುಗಡೆಯಾಗಿದೆ.

ಈ ಮಧ್ಯೆ ಆಲಿಯಾ, ಪ್ರಸವದ ನಂತರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಚಿತ್ರದ 'ತುಮ್ ಕ್ಯಾ ಮಿಲೇ' ರೊಮ್ಯಾಂಟಿಕ್​ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಅನುಭವವನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾದಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿ, ಅಭಿಮಾನಿಗಳ ಜೊತೆ ಸಿನಿಮಾ ಮತ್ತು ವೈಯಕ್ತಿಕ ವಿಚಾರವಾಗಿ ಮಾತನಾಡಿದ್ದಾರೆ.

ನಟಿ ಆಲಿಯಾ ಭಟ್​ ಪೋಸ್ಟ್​

ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ನಟಿ, ಮಗುವಾದ ನಂತರ 'ತುಮ್ ಕ್ಯಾ ಮಿಲೇ' ಹಾಡಿನ ಶೂಟಿಂಗ್​ನಲ್ಲಿ ಭಾಗಿಯಾದರ​ ಬಗ್ಗೆ ಹೇಳಿಕೊಂಡಿದ್ದಾರೆ. ಚಿತ್ರೀಕರಣ ವೇಳೆ ತೆಗೆದ ಫೋಟೋ ಹಂಚಿಕೊಂಡು, "ಇದು ಚಿತ್ರೀಕರಣದ ಕೊನೆಯ ದಿನದಂದು. ನಾನು ದಣಿದಂತೆ ಕಾಣುತ್ತೇನೆ ಆದರೆ ತೃಪ್ತಳಾಗಿದ್ದೇನೆ! ಯಾವುದೇ ವೃತ್ತಿಯಲ್ಲಿಯೂ ಹೊಸ ತಾಯಿಯಾಗಿ ಕೆಲಸಕ್ಕೆ ಹಿಂತಿರುಗುವುದು ಎಂದಿಗೂ ಸುಲಭವಲ್ಲ. ನಿಮ್ಮ ಶಕ್ತಿಯಲ್ಲಿನ ಪ್ರಮುಖ ಭೌತಿಕ ವ್ಯತ್ಯಾಸ ಉಲ್ಲೇಖಿಸದೇ ನೀವು ಏಕಕಾಲದಲ್ಲಿ ವಿವಿಧ ಭಾವನೆಗಳನ್ನು ಅನುಭವಿಸುತ್ತೀರಿ" ಎಂದಿದ್ದಾರೆ.

ಇದನ್ನೂ ಓದಿ:ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಚಿತ್ರದ 'ತುಮ್ ಕ್ಯಾ ಮಿಲೇ' ಹಾಡು ಬಿಡುಗಡೆ

ಮುಂದುವರೆದು, "ಆದರೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಚಿತ್ರೀಕರಣದ ವೇಳೆ ಚಿತ್ರತಂಡ ನನಗೆ ಸಾಕಷ್ಟು ಸೌಲಭ್ಯ ಕಲ್ಪಿಸಿತ್ತು. ಹಾಗಾಗಿಯೇ ನಾನು ಸುಲಭವಾಗಿ ಶೂಟಿಂಗ್​ ಮುಗಿಸಿದೆ. ವಿಶೇಷವಾಗಿ ಪ್ರಸವದ ನಂತರ ಕೆಲಸವನ್ನು ತಕ್ಷಣವೇ ಪುನರಾರಂಭಿಸುವುದು ನಿಜಕ್ಕೂ ಸುಲಭವಲ್ಲ. ನನಗೆ ಬೇಕಾದ ಹಾಗೇ ವೈಭವಿ ಅವರು ವೇಳಾಪಟ್ಟಿ ಸಿದ್ಧ ಮಾಡುತ್ತಿದ್ದರು. ನನ್ನ ತಾಯಿ ಸಹೋದರಿ ನಾನು ದೂರವಿದ್ದಾಗಲೆಲ್ಲಾ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ನನ್ನ ಮಗುವಿನ ಮೊದಲ ಪ್ರವಾಸ ಕಾಶ್ಮೀರವಾಗಿತ್ತು. ಅವಳ ಕಣ್ಣುಗಳಿಂದ ಪರ್ವತ ನೋಡುವುದು ನಿಜಕ್ಕೂ ಖುಷಿ ನೀಡಿತ್ತು" ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಭಟ್​ 2022ರ ಏಪ್ರಿಲ್​ 14 ರಂದು ನಟ ರಣಬೀರ್ ಕಪೂರ್ ಜೊತೆ ಮದುವೆಯಾದರು. 2022ರ ಜೂನ್​ ತಿಂಗಳಲ್ಲಿ ತಮ್ಮ ಗರ್ಭಧಾರಣೆಯನ್ನು ಘೋಷಿಸಿದರು. ಕಳೆದ ವರ್ಷ ನವೆಂಬರ್​ 6 ರಂದು ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಮಗುವಿಗೆ ರಾಹಾ ಎಂದು ಹೆಸರಿಡಲಾಗಿದೆ. ಆಲಿಯಾ- ರಣಬೀರ್ ಇಂದಿಗೂ​ ತಮ್ಮ ಮಗಳ ಮುಖವನ್ನು ಬಹಿರಂಗಪಡಿಸಿಲ್ಲ.

ಇನ್ನೂ ಆಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ರಣ್​​ವೀರ್ ಸಿಂಗ್ ಮತ್ತು ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಹು ತಾರಾಗಣ ಹೊಂದಿರುವ ಬಿಗ್​ ಬಜೆಟ್​ ಸಿನಿಮಾ ಜುಲೈ 28 ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಗರ್ಭಿಣಿಯಾಗಿದ್ದರೂ ಶೂಟಿಂಗ್​ನಲ್ಲಿ ಭಾಗಿ: 'ಹಾರ್ಟ್ ಆಫ್​ ಸ್ಟೋನ್'​ ಅನುಭವ ಹಂಚಿಕೊಂಡ ಆಲಿಯಾ ಭಟ್​

ABOUT THE AUTHOR

...view details