ಕರ್ನಾಟಕ

karnataka

ಕ್ಯಾಚಿ ಟೈಟಲ್ ಹೊಂದಿರುವ ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌ ಚಿತ್ರದ ಶೂಟಿಂಗ್​ ಶುರು

By

Published : May 22, 2022, 4:42 PM IST

ಗುಡ್‌ ಗುಡ್ಡರ್‌ ಗುಡ್ಡೆಸ್ಟ್‌ ಸಿನಿಮಾ

ಶ್ರೀನಿಧಿ ಪಿಕ್ಚರ್ ಬ್ಯಾನರ್‌ನಡಿ ತಯಾರಾಗುತ್ತಿರುವ ಗುಡ್ ಗುಡ್ಡರ್ ಗುಡ್ಡೆಸ್ಟ್ ಚಿತ್ರಕ್ಕೆ ಬಿಲ್ಡರ್‌ ಆಗಿರುವ ಸುರೇಶ್‌ ಬಿ ನಿರ್ಮಾಣ ಮಾಡಿದ್ದು, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರವಾಗಿದೆ.

ಈ ಸಿನಿಮಾ ಎಂಬ ಸಮುದ್ರದಲ್ಲಿ ಈಜುವುದಕ್ಕೆ ಪ್ರತಿದಿನ‌ ಸಾಕಷ್ಟು ಟ್ಯಾಲೆಂಟ್‌ ಇರುವ ಪ್ರತಿಭೆಗಳು ಸ್ಯಾಂಡಲ್​ವುಡ್​ಗೆ ಎಂಟ್ರಿ ಆಗ್ತಾನೆ ಇದ್ದಾರೆ. ಇದೀಗ ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ ಎಂಬ ಯುವ ಪ್ರತಿಭೆ, ಕ್ಯಾಚಿ ಟೈಟಲ್ ಹೊಂದಿರುವ ಗುಡ್ ಗುಡ್ಡರ್ ಗುಡ್ಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ.

ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಮಾತನಾಡಿದರು

ಇತ್ತೀಚೆಗೆ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಈ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದ್ರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಅಂಧರೊಬ್ಬರು ಕ್ಯಾಮರಾಗೆ ಚಾಲನೆ ನೀಡಿದರು. ಮಿಂಚು, ಜಾನಿ ಜಾನಿ ಎಸ್. ಪಪ್ಪಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡಿರುವ ಯುವಧೀರ ಅಭಿನಯದ ಜೊತೆಗೆ ಈ ಸಿನಿಮಾ‌ ಮೂಲಕ ನಿರ್ದೇಶಕರಾಗುತ್ತಿದ್ದಾರೆ.

ಒಂದೇ ಕಥೆ ಮೂರು ಟ್ರ್ಯಾಕ್​ನಲ್ಲಿ ಸಾಗುತ್ತದೆ. ಇದು ಯಾವ ಜಾನರ್ ಸಿನಿಮಾ ಅನ್ನೋದು ವರ್ಗೀಕೃತ ಮಾಡುವುದು ಕಷ್ಟ. ಹೀಗಾಗಿ, ಇದು ಮಲ್ಟಿಪಲ್ ಜಾನರ್ ನ ಸಿನಿಮಾ ಅಂತಾ ಹೇಳಬಹುದು. ಯುವಧೀರ ನಿರ್ದೇಶನದ ಜೊತೆಗೆ ತಾವೇ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಇವರಿಗೆ ಜೋಡಿಯಾಗಿ ಆದ್ಯಾ ಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಸೋನುಗೌಡ, ಪ್ರಮೋದ್ ಶೆಟ್ಟಿ, ಗೋಪಾಲ್ ಕೃಷ್ಣ ದೇಶಪಾಂಡೆ, ಸುಚೇಂದ್ರ ಪ್ರಸಾದ್, ವಿ. ಮನೋಹರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

ಸುಚೇಂದ್ರ ಪ್ರಸಾದ್ ಇವರು ಇಟ್ಟಿರುವ ಶೀರ್ಷಿಕೆ ವ್ಯಾಕರಣ ಬದ್ಧವಲ್ಲ. ಹಾಗೆಯೇ ಸಿನಿಮಾ ಕೂಡ ಎಲ್ಲ ವ್ಯಾಕರಣವನ್ನ ಮುರಿಯಲಿದೆ. ಇದು ನಿಜ ಜೀವನದ ಕೆಲವು ಪ್ರಸಂಗವನ್ನ ತಳುಕು ಹಾಕಿ ಕಥೆ ರೆಡಿ ಮಾಡಿದ್ದಾರೆ. ಒಳ್ಳೆ ಕಥಾಹಂದರವನ್ನು ತಯಾರಿಸಿದ್ದಾರೆ ಎಂದು ಹಿರಿಯ ಕಲಾವಿದ ಸುಚೇಂದ್ರ ಪ್ರಸಾದ್ ಹೇಳಿದರು.

ಶ್ರೀನಿಧಿ ಪಿಕ್ಚರ್ ಬ್ಯಾನರ್‌ ತಯಾರಾಗುತ್ತಿರುವ ಗುಡ್ ಗುಡ್ಡರ್ ಗುಡ್ಡೆಸ್ಟ್ ಚಿತ್ರಕ್ಕೆ ಬಿಲ್ಡರ್‌ ಆಗಿರುವ ಸುರೇಶ್‌ ಬಿ ನಿರ್ಮಾಣ ಮಾಡಿದ್ದು, ಇದೊಂದು ಡಾರ್ಕ್‌ ಹ್ಯೂಮರ್‌ ಸೆಟೈರ್‌ ಕಾಮಿಡಿ ಚಿತ್ರವಾಗಿದೆ. ಜೊತೆಗೆ ರೊಮ್ಯಾನ್ಸ್‌, ಥ್ರಿಲ್ಲರ್‌, ಡ್ರಾಮಾ, ಕ್ರೈಂ, ಆ್ಯಕ್ಷನ್‌ ಕೂಡ ಒಳಗೊಂಡಿದೆ. ಸಂದೀಪ್ ಹೊಲ್ಲೂರಿ ಕ್ಯಾಮರಾ, ಶಶಾಂಕ್ ಶೇಷಗಿರಿ ಸಂಗೀತ, ಕಿರಣ್ ಸಂಕಲನ ಸಿನಿಮಾಕ್ಕಿದೆ. ಬೆಂಗಳೂರು,‌ ಮಂಗಳೂರು, ಮೈಸೂರು ಸುತ್ತಮುತ್ತ 45 ದಿನಗಳ ಕಾಲ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಓದಿ:ಅಣ್ಣ-ತಂಗಿ ಬಾಂಧವ್ಯದ 'ಸೋಲ್ ಆಫ್ ಬೆಂಕಿ' ಸಾಂಗ್​ ರಿಲೀಸ್​

ABOUT THE AUTHOR

...view details