ETV Bharat / entertainment

ಬಿಟೌನ್‌ನಲ್ಲಿ ಪ್ರಣತಿ- ಜೂನಿಯರ್ ಎನ್‌ಟಿಆರ್, ಆಲಿಯಾ- ರಣಬೀರ್ ಜೋಡಿಯ ಡಿನ್ನರ್ ಡೇಟ್ - Jr NTR Dinner Date

author img

By ETV Bharat Karnataka Team

Published : Apr 29, 2024, 2:53 PM IST

JR NTR  ALIA BHATT AND RANBIR KAPOOR  HRITHIK AND SABA AZAD  KARAN JOHAR
ಬಿಟೌನ್‌ನಲ್ಲಿ ಪ್ರಣತಿ- ಜೂನಿಯರ್ ಎನ್‌ಟಿಆರ್, ಆಲಿಯಾ- ರಣಬೀರ್ ಜೋಡಿಯ ಡಿನ್ನರ್ ಡೇಟ್

Jr NTR Dinner Date: ಮ್ಯಾನ್ ಆಫ್ ಮಾಸ್ ಜೂನಿಯರ್ ಎನ್​ಟಿಆರ್ ಪ್ರಸ್ತುತ ವಾರ್​ 2 ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮುಂಬೈನ ಜನಪ್ರಿಯ ರೆಸ್ಟೋರೆಂಟ್​ಗೆ ಪತ್ನಿ ಪ್ರಣತಿ ಜೊತೆ ಡಿನ್ನರ್ ಡೇಟ್​ಗೆ ತೆರಳಿದ್ದರು. ಇವರೊಂದಿಗೆ ಆಲಿಯಾ, ರಣಬೀರ್, ಹೃತಿಕ್ ರೋಷನ್, ಸಬಾ ಆಜಾದ್ ಕೂಡ ಬಂದಿದ್ದರು.

ಮ್ಯಾನ್ ಆಫ್ ಮಾಸ್ ಜೂನಿಯರ್ ಎನ್​ಟಿಆರ್ ಅವರು ತಮ್ಮ ಬಾಲಿವುಡ್ ಚೊಚ್ಚಲ ಚಿತ್ರ ವಾರ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಒಂದೆಡೆ, ದೇವರ ಚಿತ್ರದ ಸೆಟ್‌ಗಳಲ್ಲಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ, ಅವರು ಹೃತಿಕ್ ಜೊತೆಗಿನ ವಾರ್ 2 ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇತ್ತೀಚೆಗಷ್ಟೇ ಎನ್ ಟಿಆರ್ ತಮ್ಮ ಪತ್ನಿಯೊಂದಿಗೆ ಡಿನ್ನರ್ ಡೇಟ್​ಗೆ ತೆರಳಿದ್ದರು. ಮುಂಬೈನ ರೆಸ್ಟೋರೆಂಟ್‌ಗೆ ಹೋಗುತ್ತಿದ್ದಾಗ ವೇಳೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.

ಆದರೆ, ಅವರ ಜೊತೆಗೆ ಬಿಟೌನ್ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಅಲ್ಲಿಗೆ ಬಂದಿದ್ದರು. ಇದರಿಂದಾಗಿ ಇಡೀ ಪ್ರದೇಶ ಗದ್ದಲದಿಂದ ಕೂಡಿತ್ತು. ಈ ಮುದ್ದಾದ ಜೋಡಿಯನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. 'ವಾರ್​ 2' ನಟ ಹೃತಿಕ್ ರೋಷನ್ ಮತ್ತು ಅವರ ಗೆಳತಿ ಸಾಬಾ ಆಜಾದ್ ಕೂಡ ಈ ಡಿನ್ನರ್ ಡೇಟ್‌ಗೆ ಬಂದಿದ್ದರು. ಈ ಪಾರ್ಟಿಯಲ್ಲಿ ಚಿತ್ರ ನಿರ್ಮಾಪಕ ಕರಣ್ ಜೋಹರ್ ಕೂಡ ಸದ್ದು ಮಾಡಿದರು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

‘ವಾರ್​ 2’ ಚಿತ್ರಕ್ಕಾಗಿ 60 ದಿನಗಳ ಕಾಲ್ ಶೀಟ್ ನಿಗದಿಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಸಿನಿಮಾ ವಾರ್ 1 ಅನ್ನು ಮೀರಿಸುವಂತೆ ಸೂಪರ್ ಆ್ಯಕ್ಷನ್ ಸೀಕ್ವೆನ್ಸ್ ಇರಲಿದೆ. ಚಲನಚಿತ್ರವನ್ನು ಆಗಸ್ಟ್ 14, 2025 ರಂದು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಇದು ಎನ್​ಟಿಆರ್ ಅವರ ಮೊದಲ ಬಾಲಿವುಡ್ ಪ್ರಾಜೆಕ್ಟ್. ಎನ್​ಟಿಆರ್ ಈ ಚಿತ್ರದಲ್ಲಿ ಸೀಕ್ರೆಟ್ ಏಜೆಂಟ್ ಆಗಿ ನಟಿಸುತ್ತಿದ್ದಾರೆ. ಆದರೆ, ಎನ್​ಟಿಆರ್ ತಮ್ಮ ಲುಕ್ ಅನ್ನು ಗೌಪ್ಯವಾಗಿಡಲು ಹರಸಾಹಸ ಪಡುತ್ತಿದ್ದಾರೆ.

ಇನ್ನೊಂದೆಡೆ, ಎನ್‌ಟಿಆರ್‌- ಕೊರಟಾಲ ಶಿವ ಕಾಂಬಿನೇಷನ್‌ನಲ್ಲಿರುವ ದೇವರ ಚಿತ್ರದ ಶೂಟಿಂಗ್ ಅಂತಿಮ ಹಂತ ತಲುಪಿದೆ. ನಿರ್ದೇಶಕ ಕೊರಟಾಲ ಶಿವ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ದಿವಂಗತ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಪರಿಚಯವಾಗಲಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹಿರಿಯ ನಟರಾದ ಶ್ರೀಕಾಂತ್, ಪ್ರಕಾಶ್​ರಾಜ್, ಮುರಳಿ ಶರ್ಮಾ ಮುಂತಾದವರು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಎನ್​ಟಿಆರ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದು ದಸರಾ ಉಡುಗೊರೆಯಾಗಿ ಅಕ್ಟೋಬರ್ 10, 2024 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಡಿಫ್ರೆಂಟ್ ಗೆಟಪ್​ನಲ್ಲಿ ಮಹೇಶ್ ಬಾಬು: SSMB 29 ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ಸ್ - Mahesh Babu New Getup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.