ಕರ್ನಾಟಕ

karnataka

ಶ್ರೀಮುರಳಿ ಹುಟ್ಟುಹಬ್ಬದಂದು ಸೆಟ್ಟೇರಿದ 'ಬಘೀರ'

By

Published : May 20, 2022, 2:12 PM IST

bagheera-film-started-on-srimurali-birthday

ನಟ ಶ್ರೀಮುರಳಿಯ 40ನೇ ವರ್ಷದ ಹುಟ್ಟುಹಬ್ಬಕ್ಕೆ 'ಬಘೀರ' ಸಿನಿಮಾ ಸೆಟ್ಟೇರಿದೆ‌. ಮಹಾಲಕ್ಷ್ಮಿ ಲೇಔಟ್​ನ ವಜ್ರಗಿರಿ ಗಣಪತಿ ದೇವಸ್ಥಾನದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಡಾ. ಸೂರಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚಿತ್ರ ಶುರುವಾಗಿದೆ..

ಮದಗಜ ಸಿನಿಮಾ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಮುಂದಿನ‌ ಸಿನಿಮಾ ಯಾವುದು? ಯಾವ ನಿರ್ದೇಶಕನ ಜೊತೆ ಚಿತ್ರ ಮಾಡ್ತಾರೆ ಎಂಬೆಲ್ಲಾ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಮೂಡಿತ್ತು. ಸದ್ಯ ಶ್ರೀಮುರಳಿಯ 40ನೇ ವರ್ಷದ ಹುಟ್ಟುಹಬ್ಬಕ್ಕೆ 'ಬಘೀರ' ಸಿನಿಮಾ ಸೆಟ್ಟೇರಿದೆ‌. ಮಹಾಲಕ್ಷ್ಮಿ ಲೇಔಟ್​ನ ವಜ್ರಗಿರಿ ಗಣಪತಿ ದೇವಸ್ಥಾನದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಡಾ. ಸೂರಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಚಿತ್ರ ಶುರುವಾಗಿದೆ.

ಬಘೀರ ಪೋಸ್ಟರ್​

ಹೊಂಬಾಳೆ ಫಿಲಂಸ್​​ನಡಿ ಬಘೀರ ಚಿತ್ರ ಅನೌನ್ಸ್ ಆದಾಗಿನಿಂದ ಸಾಕಷ್ಟು ನಿರೀಕ್ಷೆ ಮೂಡಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಯಶ್​​ಗೆ 'ಲಕ್ಕಿ' ಸಿನಿಮಾ ನಿರ್ದೇಶನ ಮಾಡಿದ್ದ ಡಾ. ಸೂರಿ ಇದೀಗ ಸ್ಕ್ರೀನ್ ಪ್ಲೇ, ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಬಘೀರ ಚಿತ್ರದ ಕಥೆ ಬರೆದಿದ್ದಾರೆ.

ಬಘೀರ ಸಿನೆಮಾ ಮುಹೂರ್ತ
ಬಘೀರ ಸಿನೆಮಾ ಮುಹೂರ್ತ

ಈ ಪಾತ್ರಕ್ಕಾಗಿ ಶ್ರೀಮುರಳಿ ಮತ್ತೆ ದೇಹ ದಂಡಿಸುತ್ತಿದ್ದಾರೆ‌. ಇದು ಹೊಂಬಾಳೆ ಫಿಲಂಸ್​​ನ 8ನೇ ಚಿತ್ರವಾಗಿದ್ದು, ಪಕ್ಕಾ ಮಾಸ್​ ಅನ್ನೋದು ಈಗಾಗಲೇ ಟೈಟಲ್ ಹಾಗೂ ಪೋಸ್ಟರ್​ನಿಂದಲೇ ಗೊತ್ತಾಗುತ್ತಿದೆ. ಸದ್ಯ ಸಿನಿಮಾಕ್ಕೆ ಚಾಲನೆ ಸಿಕ್ಕಿದ್ದು, ಶ್ರೀಮುರಳಿ ಜೋಡಿ ಯಾರಾಗ್ತಾರೆ, ಯಾರೆಲ್ಲರ ತಾರಾಗಣ ಇರಲಿದೆ ಅನ್ನೋದು ಮುಂದೆ ಗೊತ್ತಾಗಲಿದೆ.

ಬಘೀರ ಸಿನೆಮಾ ಮುಹೂರ್ತ
ಬಘೀರ ಸಿನೆಮಾ ಮುಹೂರ್ತ ಕಾರ್ಯಕ್ರಮ

ಇದನ್ನೂ ಓದಿ:ಚಾಂಪಿಯನ್​ ಸಿನಿಮಾದ 'ಡಿಂಗ್ರಿ ಬಿಲ್ಲಿ' ಹಾಡು ಬಿಡುಗಡೆ ಮಾಡಿದ ಹಾಟ್​ ಬೆಡಗಿ ಸನ್ನಿ ಲಿಯೋನ್​

ABOUT THE AUTHOR

...view details