ರಾಯ್ಪುರ (ಛತ್ತೀಸ್ಗಢ): ಅಪರೂಪದ ಜಾತಿಯ 'ಮಣ್ಣು ಮುಕ್ಕುವ ಹಾವು' ಅಥವಾ 'ರೆಡ್ ಸ್ಯಾಂಡ್ ಬೋವಾ' ಹಾವನ್ನು ಕಳ್ಳಸಾಗಣೆ ಮಾಡುತ್ತಿದ್ದ ನಾಲ್ವರನ್ನು ಛತ್ತೀಸ್ಗಢದ ರಾಯ್ಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಕೇರಳ ಮೂಲದವರಾಗಿದ್ದು, ಆಂಧ್ರ ಪ್ರದೇಶದಿಂದ 10 ಲಕ್ಷ ರೂ.ಗೆ ಖರೀದಿಸಿ ಹಾವನ್ನು ತಂದಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿನ ಬೆಲೆ ಕೋಟಿ ರೂ.ಇದೆ. ಕಾರಿನ ಮೂಲಕ ಸಾಗಿಸಲಾಗುತ್ತಿದ್ದ ಹಾವಿನ ಜೊತೆ, ಐದು ಮೊಬೈಲ್ ಫೋನ್ ಮತ್ತು ಕಾರನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುರಕ್ಷಿತವಾಗಿ ಹಾವನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.