ಕರ್ನಾಟಕ

karnataka

ತುಮಕೂರಲ್ಲಿ ಮಳೆ ಹಾನಿ ವೀಕ್ಷಿಸಿದ ಆರಗ ಜ್ಞಾನೇಂದ್ರ: ಅರ್ಧಗಂಟೆ ಟ್ರಾಫಿಕ್ ಜಾಮ್

By

Published : Aug 2, 2022, 9:22 AM IST

ಸಚಿವ ಆರಗ ಜ್ಞಾನೇಂದ್ರ ನಿನ್ನೆ (ಸೋಮವಾರ) ತುಮಕೂರಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದರು.

Araga Jnanendra visits Tumkur
ತುಮಕೂರಲ್ಲಿ ಮಳೆ ಹಾನಿ ವೀಕ್ಷಿಸಿದ ಆರಗ ಜ್ಞಾನೇಂದ್ರ

ತುಮಕೂರು:ನಗರದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಹಾನಿಯಾದ ಎಸ್.ಮಾಲ್, ಅಮಾನಿಕೆರೆ ಹಾಗೂ ಕೋತಿತೋಪು ಬಳಿಯಿರುವ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ತುಮಕೂರಲ್ಲಿ ಮಳೆ ಹಾನಿ ವೀಕ್ಷಿಸಿದ ಆರಗ ಜ್ಞಾನೇಂದ್ರ

ಗೃಹ ಸಚಿವರ ಆಗಮನ ಹಿನ್ನೆಲೆ ಮಹಾನಗರ ಪಾಲಿಕೆ, ಚರ್ಚ್ ಸರ್ಕಲ್ ಹಾಗೂ ಕೋಟೆ ಆಂಜನೇಯ ದೇವಾಲಯ ಮುಂಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​​ ಜಾಮ್ ಉಂಟಾಗಿತ್ತು. ಕೇವಲ 20 ನಿಮಿಷದಲ್ಲಿ ಗೃಹ ಸಚಿವರು ತುಮಕೂರು ನಗರದಲ್ಲಿ ಮಳೆಹಾನಿ ವೀಕ್ಷಿಸಿದ್ದಾರೆ. ಇವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಶಾಸಕ ಜ್ಯೋತಿ ಗಣೇಶ್ ಹಾಗೂ ಅಧಿಕಾರಿಗಳು ಸಾಥ್ ನೀಡಿದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸತತ 3ನೇ ದಿನವೂ ಮಳೆಯಬ್ಬರ: ಜಲಾವೃತ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಂಭೀರ ಗಾಯ

ABOUT THE AUTHOR

...view details