ಕರ್ನಾಟಕ

karnataka

ಪಾವಗಡದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ್ದಕ್ಕೆ 40 ಮನೆಗಳಿಗೆ ಮೂಲಸೌಲಭ್ಯ ಕಡಿತ ಆರೋಪ!

By

Published : Nov 14, 2021, 2:31 PM IST

ಕೋವಿಡ್​ ಲಸಿಕೆ(COVID Vaccine) ಹಾಕಿಸಿಕೊಳ್ಳದ ಸಾರ್ವಜನಿಕರ ಮನೆಗಳಿಗೆ ಮೂಲಸೌಲಭ್ಯವನ್ನು ಅಧಿಕಾರಿಗಳು ಕಡಿತಗೊಳಿಸಿದ್ದಾರೆ ಎಂಬ ಆರೋಪ ಪಾವಗಡ ಪಟ್ಟಣದಲ್ಲಿ ಕೇಳಿಬಂದಿದೆ. ಆದ್ರೆ ಈ ಆರೋಪವನ್ನು ಅಧಿಕಾರಿಗಳು ತಳ್ಳಿಹಾಕಿದ್ದಾರೆ.

cut of facilities of those house who are not vaccinated
ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮನೆಯ ಮೂಲಸೌಲಭ್ಯ ಕಡಿತ ಆರೋಪ

ತುಮಕೂರು: ಕೋವಿಡ್ ಲಸಿಕೆ (COVID Vaccine) ಹಾಕಿಸಿಕೊಳ್ಳದ ಸಾರ್ವಜನಿಕರ ಮನೆಗಳಿಗೆ ಮೂಲಸೌಲಭ್ಯವನ್ನು ಅಧಿಕಾರಿಗಳು ಕಡಿತಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮನೆಯ ಮೂಲಸೌಲಭ್ಯ ಕಡಿತ ಆರೋಪ

ಜಿಲ್ಲೆಯ ಪಾವಗಡ ಪಟ್ಟಣದ ಕನುಮಲಚೆರವು ಬಡಾವಣೆಯಲ್ಲಿ ನೀರು ಮತ್ತು ವಿದ್ಯುತ್ ಅನ್ನು ಸ್ಥಗಿತಗೊಳಿಸುತ್ತಿರುವ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಗರಂ ಆಗಿದ್ದಾರೆ. 40ಕ್ಕೂ ಹೆಚ್ಚು ಮನೆಗಳ 100ಕ್ಕೂ ಹೆಚ್ಚು ಮಂದಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದರಿಂದ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನೀರು ಮತ್ತು ವಿದ್ಯುತ್ ಅನ್ನು ಸ್ಥಗಿತಗೊಳಿಸಿದ್ದಾರೆಂದು ಹೇಳಲಾಗುತ್ತಿದೆ.

ಕೋವಿಡ್​​ ಆರ್ಭಟಿಸಿ ಹೋದರೂ ಜಿಲ್ಲೆಯಲ್ಲಿ ಈವರೆಗೆ 3 ಲಕ್ಷ ಜನರು ಕೋವಿಡ್​ ಲಸಿಕೆ ಪಡೆಯದಿರುವುದು ಗಮನಿಸಲೇಬೇಕಾದ ವಿಚಾರ.

ಇದನ್ನೂ ಓದಿ:ಒಡಕು ರಾಜಕಾರಣ ಬಿಜೆಪಿಯ ನಿತ್ಯ ಕಾಯಕ, ಆಪರೇಷನ್ ಕಮಲ ಅಧಿಕೃತ ರಾಜಧರ್ಮ: ಹೆಚ್ಡಿಕೆ

ಕೋವಿಡ್ ಲಸಿಕೆಗೂ ನೀರು, ವಿದ್ಯುತ್ ಸಂಪರ್ಕ ಕಡಿತಕ್ಕೂ ಸಂಬಂಧವಿಲ್ಲ. ಡೆಪಾಸಿಟ್ ಕೊಡದೆ ನೀರಿನ ಸಂಪರ್ಕ ಪಡೆದಿದ್ದರಿಂದ ಕಡಿತಗೊಳಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಅರ್ಚನಾ ಈ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details